For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಸಿನಿಮಾಗಳ ಹಿಂದೆ ಬಿದ್ದ ಸ್ಟಾರ್ಸ್; ಹಿಟ್ ಚಿತ್ರದ ರಿಮೇಕ್‌ಗೆ ಅಲ್ಲು - ಜಾನ್ ಪೈಪೋಟಿ

  By ಫಿಲ್ಮಿಬೀಟ್ ಡೆಸ್ಕ್
  |

  ಮಲಯಾಳಂ ಚಿತ್ರರಂಗ ಭಾರತೀಯ ಸಿನಿಮಾರಂಗಕ್ಕೆ ಮಾದರಿಯಾಗುವ ಹಾಗೆ ಬೆಳೆದಿದೆ. ಅಲ್ಲಿ ಬರ್ತಿರುವ ಸಿನಿಮಾಗಳು ಇಡೀ ದೇಶದ ಗಮನ ಸೆಳೆಯುತ್ತಿವೆ. ಉತ್ತಮ ಸಂದೇಶದ ಜೊತೆಗೆ ಸಿನಿಮಾ ಕಟ್ಟಿಕೊಡುವ ರೀತಿಗೆ ಬೇರೆ ಭಾಷೆಯ ಸಿನಿ ಮಂದಿ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಲಾಕ್ ಡೌನ್ ಬಳಿಕ ಒಟಿಟಿ ಪ್ಲಾಟ್ ಫಾರ್ಮ್ ಅನ್ನು ಚೆನ್ನಾಗಿ ಬಳಸಿಕೊಂಡಿರುವ ಮಲಯಾಳಂ ಚಿತ್ರರಂಗ ಅದ್ಭುತ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರಿಗೆ ಉಣಬಡಿಸುತ್ತಿದೆ.

  ಮಲಯಾಳಂನಲ್ಲಿ ಬಂದ ಅನೇಕ ಸಿನಿಮಾಗಳು ಇತ್ತೀಚಿಗೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿವೆ. ರಿಮೇಕ್ ಹಕ್ಕನ್ನು ಖರೀದಿ ಮಾಡಲು ಅನೇಕರು ಪೈಪೋಟಿಗೆ ಬಿದ್ದಿದ್ದಾರೆ. ಸ್ಟಾರ್ ಕಲಾವಿದರು ಸಹ ಮಲಯಾಳಂ ಸಿನಿಮಾಗಳ ಹಿಂದೆ ಬಿದ್ದಿದ್ದಾರೆ. ಇದೀಗ ಮಲಯಾಳಂನ ಮತ್ತೊಂದು ಸೂಪರ್ ಹಿಟ್ ಸಿನಿಮಾದ ರಿಮೇಕ್ ಹಕ್ಕನ್ನು ತೆಲುಗು ಮತ್ತು ಹಿಂದಿಯ ಸ್ಟಾರ್ ಕಲಾವಿದರು ಖರೀದಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರ.

  ಮಲಯಾಳಂನಲ್ಲಿ ಇತ್ತೀಚಿಗೆ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಂಡಿರುವ ' ನಾಯಟ್ಟು' ಸಿನಿಮಾದ ತೆಲುಗು, ತಮಿಳು ಮತ್ತು ಹಿಂದಿ ರಿಮೇಕ್ ಹಕ್ಕು ಮಾರಾಟವಾಗಿದೆ. ನಿರ್ದೇಶಕ ಮಾರ್ಟಿನ್ ಪ್ರಕ್ಕತ್ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಲಯಾಳಂ ಮಾತ್ರವಲ್ಲದೆ ಬೇರೆ ಭಾಷೆಯ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದರು.

  ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ರಿಮೇಕ್ ಹಕ್ಕಿಗೆ ಬೇಡಿಕೆ ಹೆಚ್ಚಾಗಿತ್ತು. ರಿಮೇಕ್ ರೈಟ್ಸ್ ಖರೀದಿ ಮಾಡಲು ಬೇರೆ ಬೇರೆ ಭಾಷೆಯ ಅನೇಕ ಕಲಾವಿದರು ಮುಗಿಬಿದ್ದಿದ್ದರು. ಇದೀಗ ತೆಲುಗು, ತಮಿಳು ಮತ್ತು ಹಿಂದಿ ರಿಮೇಕ್ ಹಕ್ಕು ಮಾರಾಟವಾಗಿದೆ.

  ತೆಲುಗು ರಿಮೇಕ್ ಹಕ್ಕು ಖರೀದಿಸಿದ ಅಲ್ಲು ಅರ್ಜುನ್

  ತೆಲುಗು ರಿಮೇಕ್ ಹಕ್ಕು ಖರೀದಿಸಿದ ಅಲ್ಲು ಅರ್ಜುನ್

  ಕೊನೆಯದಾಗಿ ನಯಾಟ್ಟು ತೆಲುಗು ಹಕ್ಕನ್ನು ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಖರೀದಿ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹೋಮ್ ಬ್ಯಾನರ್ ಗೀತಾ ಆರ್ಟ್ಸ್ ನಾಯಟ್ಟು ಹಕ್ಕನ್ನು ಖರೀದಿ ಮಾಡಿದೆ. ರಿಮೇಕ್ ಹಕ್ಕು ಖರೀದಿ ಮಾಡಿದ ಬೆನ್ನಲ್ಲೇ ನಿರ್ದೇಶಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ಈಗಾಗಲೇ ಕೆಲವು ನಿರ್ದೇಶಕರ ಜೊತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ.

  ಅಯ್ಯಪ್ಪನ್ ಕೋಶಿಯನ್ ತೆಲುಗು ರಿಮೇಕ್

  ಅಯ್ಯಪ್ಪನ್ ಕೋಶಿಯನ್ ತೆಲುಗು ರಿಮೇಕ್

  ಈಗಾಗಲೇ ಮಲಯಾಳಂನ ಸೂಪರ್ ಹಿಟ್ ಅಯ್ಯಪ್ಪನ್ ಕೋಶಿಯನ್ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ನಟ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಪಾತ್ರದಲ್ಲಿ ರಾಣಾ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರಕ್ಕೆ ನಿತ್ಯಾ ಮೆನನ್ ಕೂಡ ಎಂಟ್ರಿಕೊಟ್ಟಿದ್ದಾರೆ. ಈ ಸಿನಿಮಾ ಬೆನ್ನಲ್ಲೇ ಮತ್ತೊಂದು ಮಲಯಾಳಂ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗಲು ಸಜ್ಜಾಗಿದೆ.

  ಹಿಂದಿ ರಿಮೇಕ್ ಹಕ್ಕು ಖರೀದಿಸಿದ ಜಾನ್ ಅಬ್ರಹಾಂ

  ಹಿಂದಿ ರಿಮೇಕ್ ಹಕ್ಕು ಖರೀದಿಸಿದ ಜಾನ್ ಅಬ್ರಹಾಂ

  ಇನ್ನು ಹಿಂದಿ ರಿಮೇಕ್ ಹಕ್ಕನ್ನು ಖ್ಯಾತ ನಟ ಜಾನ್ ಅಬ್ರಹಾಂ ಖರೀದಿ ಮಾಡಿದ್ದಾರೆ. ಜಾನ್ ಅಬ್ರಹಾಂ ಈ ಮೊದಲು ಸೂಪರ್ ಹಿಟ್ 'ಅಯ್ಯಪ್ಪನಂ ಕೋಶಿಯುಂ' ಸಿನಿಮಾದ ಹಕ್ಕನ್ನು ಖರೀದಿ ಮಾಡಿದ್ದರು. ಇದೀಗ ನಾಯಟ್ಟು ಖರೀದಿ ಮಾಡುವ ಮೂಲಕ ಮಲಯಾಳಂನ 2ನೇ ಸಿನಿಮಾ ಹಿಂದಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ.

  ತಮಿಳಿನಲ್ಲಿ ಗೌತಮ್ ವಾಸುದೇವ ಮೆನನ್ ನಿರ್ದೇಶನ

  ತಮಿಳಿನಲ್ಲಿ ಗೌತಮ್ ವಾಸುದೇವ ಮೆನನ್ ನಿರ್ದೇಶನ

  ತಮಿಳು ರಿಮೇಕ್ ಹಕ್ಕನ್ನು ಗೌತಮ್ ವಾಸುದೇವ ಮೆನನ್ ಖರೀದಿ ಮಾಡಿದ್ದು, ತಮಿಳು ವರ್ಷನ್ ನಿರ್ದೇಶನ ಮಾಡುವ ಸಾಧ್ಯತೆ ಇದೆ. ಸದ್ಯ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಲ್ಲ. ಸದ್ಯದಲ್ಲೇ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ, ಯಾವಾಗ ಪ್ರಾರಂಭವಾಗಲಿದೆ ಎನ್ನುವ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

  ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದ ಸಿನಿಮಾ

  ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದ ಸಿನಿಮಾ

  ಅಂದಹಾಗೆ ನಾಯಟ್ಟು ಮಲಯಾಳಂನಲ್ಲಿ 2021 ಏಪ್ರಿಲ್ ನಲ್ಲಿ ತೆರೆಗೆ ಬಂದಿದೆ. ಚಿತ್ರದಲ್ಲಿ ಕುಂಚಾಕೊ ಬೊಬನ್, ಜೊಜು ಜಾರ್ಜ್ ಮತ್ತು ನಿಮಿಷಾ ಸಜಯಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಥ್ರಿಲ್ಲಿಂಗ್ ಸಿನಿಮಾಗೆ ಚಿತ್ರಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಹಲವು ಭಾಷೆಯಲ್ಲಿ ಬರ್ತಿರುವ ನಾಯಟ್ಟುಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Tollywood Actor Allu Arjun Acquired Nayattu Malayalam Movie Telugu Remake Rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X