Just In
Don't Miss!
- News
ದುರಂತ ನಡೆದ ಸ್ಥಳದಲ್ಲಿ ಕಗ್ಗತ್ತಲೆ, ಕೆಟ್ಟ ವಾಸನೆ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೇರಳದಲ್ಲಿ 'ಮಾಸ್ಟರ್' ಜೊತೆ ಚಿತ್ರಮಂದಿರಗಳು ಪುನರಾರಂಭ
ಸುಮಾರು 11 ತಿಂಗಳ ಬಳಿಕ ಕೇರಳದಲ್ಲಿ ಸಿನಿಮಾ ಥಿಯೇಟರ್‌ಗಳು ಪುನರಾರಂಭವಾಗಿದೆ. ತಮಿಳು ನಟ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಬಿಡುಗಡೆಯಾಗುವ ಮೂಲಕ ಕೇರಳದಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗಿದೆ.
ಕೇರಳದ ಸುಮಾರು 200 ಥಿಯೇಟರ್‌ಗಳಲ್ಲಿ ಮಾಸ್ಟರ್ ಸಿನಿಮಾ ತೆರೆಕಂಡಿದೆ ಎಂಬ ಮಾಹಿತಿ ಇದೆ. ಕೊರೊನಾ ಲಾಕ್‌ಡೌನ್ ನಿಯಮಗಳ ಅಡಿಯಲ್ಲಿ ಚಿತ್ರಮಂದಿರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದು, ಶೇಕಡಾ 50ರಷ್ಟು ಮಾಸ್ ಅವಕಾಶ ನೀಡಲಾಗಿದೆ.
'ಮಾಸ್ಟರ್' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?
50 ಪರ್ಸೆಂಟ್ ಆಸನ ಭರ್ತಿ ಮಾಡಿರುವ ಹಿನ್ನೆಲೆ ಟಿಕೆಟ್ ಬೆಲೆ ಏರಿಕೆಯಾಗಬಹುದು ಎಂದು ಹೇಳಲಾಗಿತ್ತು. ಆದ್ರೆ, ಟಿಕೆಟ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರತಿದಿನ 5 ಶೋ ನಡೆಸಲು ಕೇರಳ ಪ್ರದರ್ಶಕರ ಸಂಘ ನಿರ್ಧರಿಸಿದೆ. ಬೆಳಗ್ಗೆ 9 ಗಂಟೆಗೆ ಬಹುತೇಕ ಕಡೆ ಮಾರ್ನಿಂಗ್ ಶೋ ಆರಂಭವಾಗಲಿದೆ.
ಇನ್ನು ಜನವರಿ 22 ರಂದು ಮಲಯಾಳಂನ ಮೊದಲ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಾಣಲಿದೆ. ವೆಲ್ಲಂ ನಟನೆಯ ಜಯಸೂರ್ಯ ಸಿನಿಮಾ ಅಧಿಕೃತವಾಗಿ ಲಾಕ್‌ಡೌನ್ ಆದ ಬಳಿಕ ಥಿಯೇಟರ್‌ಗೆ ಬರ್ತಿದೆ.
ಇನ್ನುಳಿದಂತೆ ಮಾಸ್ಟರ್ ಸಿನಿಮಾ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಡುಗಡೆಯಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್, ವಿಜಯ್ ಸೇತುಪತಿ, ಮಾಳವಿಕಾ ಮೋಹನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.