For Quick Alerts
  ALLOW NOTIFICATIONS  
  For Daily Alerts

  ಹೊಂಬಾಳೆ ಫಿಲ್ಮ್ಸ್ "ಧೂಮಂ" ಮುಹೂರ್ತ: ಅಪ್ಪು ಮಾಡ್ಬೇಕಿದ್ದ 'ದ್ವಿತ್ವ' ಕಥೆ ಇದೇನಾ?

  |

  ಸೂಪರ್ ಹಿಟ್ ಸಿನಿಮಾಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮತ್ತೊಂದು ಸಿನಿಮಾ ಸೆಟ್ಟೇರಿದೆ. ವಿಜಯ್ ಕಿರಗಂದೂರು ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ 'ಧೂಮಂ' ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಅಂದ ಹಾಗೆ ಇದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹನ್ನೆರಡನೇ ಚಿತ್ರ. ಮಲೆಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ಬರಲಿದ್ದು, 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

  ಮಾಲಿವುಡ್ ನಟ ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ 'ಧೂಮಂ' ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸ್ತಿದ್ದಾರೆ. 'ಸೂರರೈ ಪೊಟ್ರು' ಚಿತ್ರದ ನಟನೆಗಾಗಿ ಅಪರ್ಣ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಚಿತ್ರದ ಮೊದಲ ದೃಶ್ಯಕ್ಕೆ ವಿಜಯ್ ಕಿರಗಂದೂರ್ ಸಹೋದರ ಮಂಜುನಾಥ್ ಕಿರಗಂದೂರು ಕ್ಲಾಪ್ ಮಾಡಿದರು. ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ದಾರೆ. ಇಡೀ ಚಿತ್ರತಂಡದ ಜೊತೆಗೆ ''KGF' ಸಿನಿಮಾ ನಿರ್ದೇಶಕ ಪ್ರಶಾಮತ್ ನೀಲ್ ಕೂಡ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು.

  ಹೊಂಬಾಳೆ - ಸುಧಾ ಕೊಂಗರ ಚಿತ್ರಕ್ಕೆ ಹೀರೊ ಸೂರ್ಯ ಅಲ್ಲ? ಚಾಲ್ತಿಗೆ ಬಂತು ಮತ್ತೊಬ್ಬ ನಟನ ಹೆಸರು!ಹೊಂಬಾಳೆ - ಸುಧಾ ಕೊಂಗರ ಚಿತ್ರಕ್ಕೆ ಹೀರೊ ಸೂರ್ಯ ಅಲ್ಲ? ಚಾಲ್ತಿಗೆ ಬಂತು ಮತ್ತೊಬ್ಬ ನಟನ ಹೆಸರು!

  ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಪ್ರೀತಾ ಜಯರಾಮನ್ ಛಾಯಾಗ್ರಹಣ 'ಧೂಮಂ' ಚಿತ್ರಕ್ಕಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಿರುವ ಹೊಂಬಾಳೆ ಸಂಸ್ಥೆ ಮತ್ತೊಂದು ಕ್ರೇಜಿ ಪ್ರಾಜೆಕ್ಟ್‌ಗೆ ಕೈ ಹಾಕಿದೆ. ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕ ಹಾಗೂ ಮಾಲಿವುಡ್ ಸ್ಟಾರ್ ನಟನನ್ನು ಒಟ್ಟಿಗೆ ಸೇರಿಸಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಕೆರಳಿಸಿದೆ. ಶೀಘ್ರದಲ್ಲೇ 'ಧೂಮಂ' ಚಿತ್ರೀಕರಣ ಶುರುವಾಗಲಿದೆ.

  ಅಪ್ಪು ಮಾಡ್ಬೇಕಿದ್ದ 'ದ್ವಿತ್ವ' ಕಥೆಯೇ 'ಧೂಮಂ' ?

  ಅಪ್ಪು ಮಾಡ್ಬೇಕಿದ್ದ 'ದ್ವಿತ್ವ' ಕಥೆಯೇ 'ಧೂಮಂ' ?

  ಪವನ್ ಕುಮಾರ್ ನಿರ್ದೇಶನದಲ್ಲಿ ಪುನೀತ್ ರಾಜ್‌ಕುಮಾರ್ 'ದ್ವಿತ್ವ' ಚಿತ್ರದಲ್ಲಿ ನಟಿಸಬೇಕಿತ್ತು. ಹೊಂಬಾಳೆ ಸಂಸ್ಥೆಯೇ ಈ ಚಿತ್ರದ ಜವಾಬ್ದಾರಿ ವಹಿಸಿಕೊಂಡಿತ್ತು. ಸಿನಿಮಾ ಮುಹೂರ್ತಕ್ಕೆ ಇನ್ನೊಂದು ವಾರ ಇದ್ದಾಗ ಅಪ್ಪು ಕೊನೆಯುಸಿರೆಳೆದಿದ್ದರು. ಅಲ್ಲಿಗೆ 'ದ್ವಿತ್ವ' ಸಿನಿಮಾ ನಿಂತು ಹೋಗಿತ್ತು. ಇದೀಗ ಪವನ್, ಹೊಂಬಾಳೆ, ಫಹಾದ್ ಫಾಸಿಲ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ 'ಧೂಮಂ' ಕಥೆ ಅದೇನಾ ಎನ್ನುವ ಚರ್ಚೆ ನಡೀತಿದೆ. 'ದ್ವಿತ್ವ' ಚಿತ್ರವನ್ನು ಬೇರೆ ಯಾರಿಗೂ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಆ ಕಥೆಯನ್ನು ಪಕ್ಕಕ್ಕೆ ಇಟ್ಟೀದ್ದೀವಿ ಎಂದು ನಿರ್ದೇಶಕರ ಈ ಹಿಂದೆ ಹೇಳಿದ್ದರು.

  ಪ್ಯಾನ್‌ ಇಂಡಿಯಾ ಚಿತ್ರವಾಯ್ತು 'ಕಾಂತಾರ': ಐದು ಭಾಷೆಗಳಲ್ಲೂ ರಿಷಬ್‌ ಅಬ್ಬರಪ್ಯಾನ್‌ ಇಂಡಿಯಾ ಚಿತ್ರವಾಯ್ತು 'ಕಾಂತಾರ': ಐದು ಭಾಷೆಗಳಲ್ಲೂ ರಿಷಬ್‌ ಅಬ್ಬರ

   'ದ್ವಿತ್ವ' ಕಥೆಗೆ ಹೊಸ ರೂಪ ಕೊಟ್ಟಿದ್ದಾರಾ ಪವನ್?

  'ದ್ವಿತ್ವ' ಕಥೆಗೆ ಹೊಸ ರೂಪ ಕೊಟ್ಟಿದ್ದಾರಾ ಪವನ್?

  ಪುನೀತ್ ರಾಜ್‌ಕುಮಾರ್ 'ದ್ವಿತ್ವ' ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಈ ಚಿತ್ರದ ತಮಿಳು ಹಾಗೂ ಮಲಯಾಳಂ ವರ್ಷನ್‌ಗಳಲ್ಲಿ ಫಹಾದ್ ಬಣ್ಣ ಹಚ್ಚಬೇಕಿತ್ತು ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು. ಹಾಗಾಗಿ ಅಪ್ಪು ಅನುಪಸ್ಥಿತಿಯಲ್ಲಿ 4 ಭಾಷೆಗಳಲ್ಲಿ ಫಹಾದ್ ಫಾಸಿಲ್ ನಟಿಸ್ತಿದ್ದಾರಾ? 'ದ್ವಿತ್ವ' ಹಾಗೂ 'ಧೂಮಂ' ಎರಡೂ ಕಥೆಗಳು ಒಂದೇನಾ ಎನ್ನುವ ಕುತೂಹಲ ಮೂಡಿದೆ. ಈ ಪ್ರಶ್ನೆಗೆ ಸ್ವತ: ನಿರ್ದೇಶಕ ಪವನ್ ಕುಮಾರ್ ಉತ್ತರ ಕೊಡಬೇಕಿದೆ.

  'ಗಂಧದಗುಡಿ' ಟ್ರೈಲರ್ ನೋಡಿದ 'ಧೂಮಂ' ತಂಡ

  'ಗಂಧದಗುಡಿ' ಟ್ರೈಲರ್ ನೋಡಿದ 'ಧೂಮಂ' ತಂಡ

  ಪುನೀತ್ ರಾಜ್‌ಕುಮಾರ್ ನಟನೆಯ 'ಗಂಧದಗುಡಿ' ಡಾಕ್ಯೂಮೆಂಟರಿ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. 'ಧೂಮಂ' ಸಿನಿಮಾ ಮುಹೂರ್ತ ಸಮಾರಂಭದ ನಂತರ ಇಡೀ ಚಿತ್ರತಂಡ 'ಗಂಧದಗುಡಿ' ಟ್ರೈಲರ್ ನೋಡಿ ಮೆಚ್ಚಿಕೊಂಡಿದೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿದ್ದು, "ಧೂಮಂ ತಂಡವು 'ಗಂಧದಗುಡಿ' ಟ್ರೈಲರ್ ಅನ್ನು ವೀಕ್ಷಿಸಿತು. ಇದು ನಮ್ಮ ಶ್ರೀಮಂತ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಪ್ರತಿಧ್ವನಿ ಹಾಗೂ ಭೂಪ್ರದೇಶವನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ದೊಡ್ಡ ಪರದೆಯಲ್ಲಿ ಇಡೀ ಸಿನಿಮಾ ನೋಡಲು ಬಹಳ ಉತ್ಸುಕರಾಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

  ಹೊಂಬಾಳೆ ಸಾಲು ಸಾಲು ಚಿತ್ರಗಳ ನಿರ್ಮಾಣ

  ಹೊಂಬಾಳೆ ಸಾಲು ಸಾಲು ಚಿತ್ರಗಳ ನಿರ್ಮಾಣ

  ಹೊಂಬಾಳೆ ಸಂಸ್ಥೆ ಸಿನಿಮಾಗಳನ್ನು ನಿರ್ಮಿಸ್ತಿರೋ ಸ್ಪೀಡ್ ನೋಡಿ ಸಿನಿರಸಿಕರು ಹುಬ್ಬೇರಿಸಿದ್ದಾರೆ. ಶೀಘ್ರದಲ್ಲೇ ಬಾಲಿವುಡ್‌ಗೂ ಎಂಟ್ರಿ ಕೊಡುವ ಸುಳಿವು ಸಿಕ್ತಿದೆ. ಸದ್ಯ 'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಪ್ರಭಾಸ್ ನಟನೆಯ 'ಸಲಾರ್' ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಿಸ್ತಿದೆ. 'ರಾಘವೇಂದ್ರ ಸ್ಟೋರ್ಸ್' ರಿಲೀಸ್‌ಗೆ ರೆಡಿಯಾಗಿದೆ. 'ಟೈಸನ್' ಎನ್ನುವ ಮಲಯಾಳಂ ಸಿನಿಮಾ ಚಿತ್ರೀಕರಣ ನಡೀತಿದೆ. ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಸೆಟ್ಟೇರಿದೆ. 'ರಿಚರ್ಡ್ ಆಂಟನಿ' ಶೂಟಿಂಗ್ ಶುರುವಾಗಬೇಕಿದೆ. ಇದೆಲ್ಲದರ ನಡುವೆ ಸುಧಾ ಕೊಂಗರ ನಿರ್ದೇಶನದ ಸಿನಿಮಾ ಘೋಷಣೆಯಾಗಿದೆ. ಇದೀಗ 'ಧೂಮಂ' ಸಿನಿಮಾ ಸೆಟ್ಟೇರಿದೆ.

  English summary
  Hombale Films next Project Dhoomam starring Fahadh Faasil And Aparna Balamurali launched today with a pooja. Know more.
  Sunday, October 9, 2022, 16:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X