For Quick Alerts
  ALLOW NOTIFICATIONS  
  For Daily Alerts

  ಜಸ್ಪ್ರೀತ್ ಬೂಮ್ರಾ ಜೊತೆ ಹಸೆಮಣೆ ಏರಲು ಸಿದ್ಧರಾದ್ರಾ 'ನಟಸಾರ್ವಭೌಮ' ನಾಯಕಿ ಅನುಪಮಾ?

  |

  ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಮತ್ತು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ನಡುವೆ ಲವ್, ಡೇಟಿಂಗ್ ವದಂತಿ ಎರಡು ವರ್ಷದ ಹಿಂದೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಅಂದಹಾಗೆ ಇಬ್ಬರ ನಡುವಿನ ಡೇಟಿಂಗ್ ವದಂತಿ ಬಹಿರಂಗವಾಗಿದ್ದು ಟ್ವಿಟ್ಟರ್ ಮೂಲಕ.

  ಜಸ್ಪ್ರೀತ್ ಬೂಮ್ರಾ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಅನುಪಮಾ ಅವರನ್ನು ಬಿಟ್ಟು ಯಾವ ನಟಿಯನ್ನು ಫಾಲೋ ಮಾಡುತ್ತಿರಲಿಲ್ಲ. ಅನುಪಮಾ ಕೂಡ ಬೂಮ್ರಾ ಅವರನ್ನು ಫಾಲೋ ಮಾಡುತ್ತಿದ್ದರು. ಮಲಯಾಳಿ ನಟಿಯನ್ನು ಫಾಲೋ ಮಾಡುವ ಜೊತೆಗೆ ಪೋಟೋ ಮತ್ತು ವಿಡಿಯೋಗಳಿಗೆ ಲೈಕ್ಸ್ ಮತ್ತು ಕಾಮೆಂಟ್ ಮಾಡುತ್ತಿದ್ದರು.

  ನಟ ನಿಖಿಲ್ ಗೆ ನಾಯಕಿಯಾದ 'ನಟಸಾರ್ವಭೌಮ' ನಟಿ ಅನುಪಮಾ ಪರಮೇಶ್ವರನ್

  ಟ್ವಿಟ್ಟರ್ ನಲ್ಲಿ ಇಬ್ಬರ ಪರಿಚಯ, ಪ್ರತಿಕ್ರಿಯೆ ನೋಡಿದ ನೆಟ್ಟಿಗರು ಉತ್ತರ ಭಾರತದ ಆಟಗಾರನಿಗೂ ದಕ್ಷಿಣ ಭಾರತದ ನಟಿಗೂ ಹೇಗೆ ಸಂಬಂಧ ಎನ್ನುವ ಕಾಮೆಂಟ್ ಗಳು ಹರಿಬಿಡಲು ಪ್ರಾರಂಭಿಸಿದರು. ಅಲ್ಲಿಂದ ಶುರುವಾದ ಇಬ್ಬರ ನಡುವಿನ ಡೇಟಿಂಗ್ ವದಂತಿ ಈಗ ಮದುವೆ ವರೆಗೂ ಬಂದಿದೆ.

  ಪಂದ್ಯದಿಂದ ಹೊರಗುಳಿದಿರುವ ಬೂಮ್ರಾ

  ಪಂದ್ಯದಿಂದ ಹೊರಗುಳಿದಿರುವ ಬೂಮ್ರಾ

  ಬೂಮ್ರಾ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ವೈಯಕ್ತಿಕ ಕಾರಣಗಳನ್ನು ನೀಡಿ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೂ ಅವರು ಹೊರಗುಳಿಯಲಿದ್ದಾರೆ.

  ಮದುವೆಗಾಗಿ ರಜೆ ಪಡೆದ ಬೂಮ್ರಾ

  ಮದುವೆಗಾಗಿ ರಜೆ ಪಡೆದ ಬೂಮ್ರಾ

  ಇದಕ್ಕೆ ಕಾರಣ ಬಹಿರಂಗವಾಗಿದ್ದು, ಬೂಮ್ರಾ ಮದುವೆಯಾಗುವ ಹಿನ್ನೆಲೆಯಲ್ಲಿ ತಂಡದಿಂದ ಹೊರಗುಳಿದಿದ್ದಾರೆ ಎಂಬುದು ಖಚಿತವಾಗಿದೆ. ವರದಿಗಳ ಪ್ರಕಾರ ಬೂಮ್ರಾ ಅವರ ಮದುವೆ ಗೋವಾದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ ಬೂಮ್ರಾ ಕೈ ಹಿಡಿಯುತ್ತಿರುವ ಚೆಲುವೆ ಯಾರು ಎನ್ನುವುದು ಬಹಿರಂಗವಾಗಿಲ್ಲ.

  ಬುಮ್ರಾ ಜೊತೆ ಪ್ರೀತಿಯಲ್ಲಿ ಬಿದ್ರಾ 'ನಟಸಾರ್ವಭೌಮ' ನಾಯಕಿ?

  ಅನುಪಮಾ ಕೈ ಹಿಡಿಯುತ್ತಾರಾ ಟೀಂ ಇಂಡಿಯಾ ವೇಗಿ

  ಅನುಪಮಾ ಕೈ ಹಿಡಿಯುತ್ತಾರಾ ಟೀಂ ಇಂಡಿಯಾ ವೇಗಿ

  ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಬೂಮ್ರಾ ದಕ್ಷಿಣ ಭಾರತದ ನಟಿ ಅನುಪಮಾ ಜೊತೆ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅನುಪಮಾ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕಳೆದ ವರ್ಷ ಅನುಪಮಾ ಬೂಮ್ರಾ ಯಾರೆಂದು ಗೊತ್ತಿಲ್ಲ ಎಂದು ಹೇಳುವ ಮೂಲಕ ್ಚ್ಚರಿ ಮೂಡಿಸಿದ್ದರು.

  ಅನುಪಮಾ ಹೇಳಿದ್ದೇನು?

  ಅನುಪಮಾ ಹೇಳಿದ್ದೇನು?

  ಬೂಮ್ರಾ ಜೊತೆಗೆ ಅನುಪಮಾ ಹೆಸರು ಕೇಳಿಸಿಕೊಂಡಾಗ ಈ ಬಗ್ಗೆ ಸ್ವತಃ ಅನುಪಮಾ ಪರಮೇಶ್ವರನ್ ಸ್ಪಷ್ಟನೆ ನೀಡಿದ್ದರು. 'ನನಗೆ ಆತ ಯಾರೆಂದೇ ಗೊತ್ತಿಲ್ಲ. ಆತ ಕ್ರಿಕೆಟರ್ ಎಂಬುದಷ್ಟೇ ನನಗೆ ತಿಳಿದಿದೆ. ಅದಕ್ಕಿಂತ ಹೆಚ್ಚಿನದೇನೂ ಗೊತ್ತಿಲ್ಲ. ಸೂಕ್ತ ಮಾಹಿತಿಗಳೇ ಇಲ್ಲದೆ ಈ ರೀತಿಯಾಗಿ ಸುದ್ದಿಗಳು ಹರಿದಾಡುವುದು ನಿಜಕ್ಕೂ ಬೇಸರ ತರಿಸುತ್ತದೆ' ಎಂದಿದ್ದರು. ಆದರೆ ಇತ್ತೀಚೆಗೆ ನಟಿ ಅನುಪಮಾ ಗೋವಾದಲ್ಲಿ ತಮ್ಮ ರಜಾದಿನಗಳ ಫೋಟೋವನ್ನು ಹಂಚಿಕೊಂಡ ನಂತರ ಈ ಗಾಳಿಸುದ್ದಿ ಮತ್ತಷ್ಟು ವೇಗವನ್ನು ಪಡೆದುಕೊಂಡಿದೆ.

  ಡಿ ಬಾಸ್ ಗೆ ಧನ್ಯವಾದ ಖುಷಿಯಿಂದ ಧನ್ಯವಾದ ಹೇಳಿದ ಯಡಿಯೂರಪ್ಪ | CM Yediyurappa | Darshan | Filmibeat Kannada
  ಕ್ರೀಡಾ ನಿರೂಪಕಿಯೊಂದಿಗೂ ಕೇಳಿ ಬಂದಿತ್ತು ಬೂಮ್ರಾ ಹೆಸರು

  ಕ್ರೀಡಾ ನಿರೂಪಕಿಯೊಂದಿಗೂ ಕೇಳಿ ಬಂದಿತ್ತು ಬೂಮ್ರಾ ಹೆಸರು

  ಮುಂಬೈ ಇಂಡಿಯನ್ಸ್ ತಂಡದ ಈ ವೇಗಿಯ ಹೆಸರು ಕ್ರೀಡಾ ನಿರೂಪಕಿ ಮಾಡೆಲ್ ಸಂಜನಾ ಗಣೇಶನ್ ಅವರೊಂದಿಗೂ ಕೇಳಿ ಬಂದಿತ್ತು. ಹೀಗಾಗಿ ಬೂಮ್ರಾ ಅವರನ್ನು ವರಿಸುವ ವಧು ಸಂಜನಾ ಗಣೇಶನ್ ಅವರೇನಾ ಎಂಬುದು ಅಂಬಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಸ್ಟಾರ್ ಸ್ಪೋರ್ಟ್ಸ್ ನಿರೂಪಕಿಯರ ಖಾಯಂ ಸದಸ್ಯೆಯಾಗಿದ್ದಾರೆ ಸಂಜನಾ ಗಣೇಶನ್.

  English summary
  Is Anupama Parameswaran getting married to cricketer Jasprit Bumrah.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X