twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನಲ್ಲಿ ಮಲಯಾಳಂ-ಕೇರಳದಲ್ಲಿ ಕನ್ನಡ ಚಲನಚಿತ್ರೋತ್ಸವ

    By Bharath Kumar
    |

    ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಕನ್ನಡ ಹಾಗೂ ಮಲಯಾಳಂ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಕೇರಳದ ತಿರುವನಂತಪುರಂನಲ್ಲಿ ಕನ್ನಡ ಮತ್ತು ಬೆಂಗಳೂರಿನಲ್ಲಿ ಮಲಯಾಳಂ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.

    ಮಲಯಾಳಂ ಚಿತ್ರೋತ್ಸವವನ್ನು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಗಸ್ಟ್ 11 ರಿಂದ 13 ರವರೆಗೆ ಮೂರು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಒಟ್ಟು 8 ಮಲಯಾಳಂ ಚಿತ್ರಗಳು ಪ್ರದರ್ಶನ ಕಾಣಲಿವೆ. ಅದೇ ರೀತಿ ಕೇರಳದ ತಿರುವನಂತಪುರಂನಲ್ಲಿ ಆಗಸ್ಟ್ 26 ರಿಂದ 28 ರವರೆಗೆ ಮೂರು ದಿನಗಳ ಕಾಲ ನಡೆಯುವ ಕನ್ನಡ ಚಲನಚಿತ್ರೋತ್ಸವ ನಡೆಯಲಿದೆ.

    ಆಗಸ್ಟ್ 11 ರಂದು ಮಧ್ಯಾಹ್ನ 2-30 ಗಂಟೆಗೆ ಕಾರ್ಯಕ್ರಮವನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಡಾ: ಹರ್ಷ ಪಿ.ಎಸ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು, ಮಲಯಾಳಂ ಚಲನಚಿತ್ರ ನಿರ್ದೇಶಕರಾದ ದಿಲೀಶ್ ಪೋಟಾನ್, ವಿನಯ್ ಫೋರ್ಟ್ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರು ವಹಿಸುವರು. ನಿರ್ದೇಶಕ ಪಿ. ಶೇಷಾದ್ರಿ ಅವರು ಅತಿಥಿ ಭಾಷಣ ಮಾಡುವರು.

    ಕೇರಳದಲ್ಲಿ ಕನ್ನಡ-ಬೆಂಗಳೂರಿನಲ್ಲಿ ಮಲಯಾಳಂ ಚಲನಚಿತ್ರೋತ್ಸವದಲ್ಲಿ ಯಾವೆಲ್ಲಾ ಚಿತ್ರಗಳು ಪ್ರದರ್ಶನವಾಗಲಿದೆ ಎಂದು ಮುಂದೆ ಓದಿ....

    ಉದ್ಘಾಟನೆಯ ದಿನ 2 ಚಿತ್ರಗಳು ಪ್ರದರ್ಶನ

    ಉದ್ಘಾಟನೆಯ ದಿನ 2 ಚಿತ್ರಗಳು ಪ್ರದರ್ಶನ

    ಕನ್ನಡ ಮತ್ತು ಕೇರಳ ಚಿತ್ರೋತ್ಸವದ ಮೊದಲ ದಿನ ವಿಧು ವಿನ್ಸಂಟ್ ನಿರ್ದೇಶನದ 'ಮ್ಯಾನ್ ಹೋಲ್' ಹಾಗೂ ದಿಲೀಶ ಪೋತನ್ ನಿರ್ದೇಶನದ 'ಮಹೇಶಿಂಟಿ ಪ್ರತಿಕಾರಂ' ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

    ಆಗಸ್ಟ್ 12 ರಂದು ಪ್ರದರ್ಶನವಾಗುವ ಚಿತ್ರಗಳು

    ಆಗಸ್ಟ್ 12 ರಂದು ಪ್ರದರ್ಶನವಾಗುವ ಚಿತ್ರಗಳು

    ಬೆಳಿಗ್ಗೆ 11-00 ಗಂಟೆಗೆ ಸಾಜಿ ಎಸ್. ಪಾಲಮೆಲ್ ನಿರ್ದೇಶನದ 'ಆರಡಿ' ಚಿತ್ರ ಪ್ರದರ್ಶನವಾಗಲಿದೆ. ಮಧ್ಯಾಹ್ನ 2-30 ಕ್ಕೆ ಶಾನವಾಸ್ ಕೆ ಭವಕುಟ್ಟಿ ನಿರ್ದೇಶನದ 'ಕಿಸ್ಮತ್' ಮತ್ತು ಸಂಜೆ 5-00 ಗಂಟೆಗೆ ರಾಜೀವ್ ರವಿ ನಿರ್ದೇಶನದ 'ಕಮ್ಮಟ್ಟಿ ಪಾದಂ' ಸಿನಿಮಾಗಳು ಪ್ರದರ್ಶನಗೊಳ್ಳಲಿದೆ.

    ಆಗಸ್ಟ್ 13 ರಂದು ಪ್ರದರ್ಶನವಾಗುವ ಚಿತ್ರಗಳು

    ಆಗಸ್ಟ್ 13 ರಂದು ಪ್ರದರ್ಶನವಾಗುವ ಚಿತ್ರಗಳು

    ಬೆಳಿಗ್ಗೆ 11-00 ಗಂಟೆಗೆ ಶೈಜು ಗೋವಿಂದ್ ಮತ್ತು ಶೆರಿ ಗೋವಿಂದನ್ ನಿರ್ದೇಶನದ 'ಗಾಡ್ಸೆ' ಚಿತ್ರ ಪ್ರದರ್ಶನವಾಗಲಿದೆ. ಮಧ್ಯಾಹ್ನ 2-30 ಕ್ಕೆ ಟಿ.ವಿ. ಚಂದ್ರನ್ ನಿರ್ದೇಶನದ 'ಮೋಹವಲಯಂ' ಮತ್ತು ಸಂಜೆ 5-00 ಗಂಟೆಗೆ ಬಿಜುಕುಮಾರ್ ದಾಮೋದರನ್ ನಿರ್ದೇಶನದ 'ಕಾಡು ಪುಕ್ಕುನ್ನನೀರಂ' ಚಿತ್ರ ಪ್ರದರ್ಶನಗೊಳ್ಳಲಿವೆ.

    ಕೇರಳದಲ್ಲಿ ಕನ್ನಡ ಚಿತ್ರಗಳು ಪ್ರದರ್ಶನ

    ಕೇರಳದಲ್ಲಿ ಕನ್ನಡ ಚಿತ್ರಗಳು ಪ್ರದರ್ಶನ

    ಕೇರಳದ ತಿರುವನಂತಪುರಂನಲ್ಲಿ ಆಗಸ್ಟ್ 26 ರಿಂದ 28 ರವರೆಗೆ ಮೂರು ದಿನಗಳ ಕಾಲ ನಡೆಯುವ ಕನ್ನಡ ಚಲನಚಿತ್ರ್ಯೋತ್ಸವ ನಡೆಯಲಿದೆ. 'ತಿಥಿ', 'ಯುಟರ್ನ್', 'ಕಿರಿಕ್ ಪಾರ್ಟಿ', 'ಹರಿಕಥಾ ಪ್ರಸಂಗ', 'ಮಾರಿಕೊಂಡವರು', 'ನಾನು ಅವನಲ್ಲ ಅವಳು' ಮತ್ತು 'ರಾಮಾ ರಾಮಾ ರೇ' ಚಲನಚಿತ್ರಗಳು ಕೇರಳದಲ್ಲಿ ಪ್ರದರ್ಶನಗೊಳ್ಳಲಿವೆ.

    English summary
    Karnataka Chalanachitra Academy, Department of Information and Public Relations in collaboration with Kerala State Chalachitra Academy will organize Malayalam Film Festival in the City and Kannada Film Festival at Tiruvananthapuram in Kerala.
    Wednesday, August 9, 2017, 11:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X