twitter
    For Quick Alerts
    ALLOW NOTIFICATIONS  
    For Daily Alerts

    ಹಿಂದೂ ದೇವತೆಗೆ ಅಪಮಾನ: ಕೇರಳ ಸಿನಿಮಾ ನಿರ್ದೇಶಕಿಗೆ ನೊಟೀಸ್

    |

    ಸಿನಿಮಾ ನಿರ್ದೇಶಕಿ ಒಬ್ಬಾಕೆ ದೇವತೆ ಕಾಳಿಗೆ ಅಪಮಾನ ಮಾಡಿದ್ದ ಪ್ರಕರಣದ ಬೆನ್ನಲ್ಲೆ ಈಗ ಕೇರಳದ ಸಿನಿಮಾ ನಿರ್ದೇಶಕಿಗೆ ಇದೇ ಮಾದರಿಯ ಪ್ರಕರಣದಲ್ಲಿ ನೊಟೀಸ್ ನೀಡಲಾಗಿದೆ.

    ಸಿನಿಮಾ ನಿರ್ದೇಶಕಿ ಅಖಿಲಾ ಹೆನ್ರಿ ಅಲಿಯಾಸ್ ಕುಂಜಿಲ ಮಸ್ಕಿಲಮಣಿಗೆ ಕೇರಳ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ಅಖಿಲಾ ಹೆನ್ರಿ ಇದೇ ವರ್ಷದ ಮೇ ತಿಂಗಳಲ್ಲಿ ಭಾರತೀಯ ದೇವರುಗಳ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು ಎನ್ನಲಾಗಿದೆ.

    ನನ್ನ ಕಾಳಿ ಸಲಿಂಗಿ, ಹಿಂದುತ್ವದ ವಿಧ್ವಂಸಕಿ: ನಿರ್ದೇಶಕಿ ಲೀನಾನನ್ನ ಕಾಳಿ ಸಲಿಂಗಿ, ಹಿಂದುತ್ವದ ವಿಧ್ವಂಸಕಿ: ನಿರ್ದೇಶಕಿ ಲೀನಾ

    ಅಖಿಲಾ ಹೆನ್ರಿಯ ಸಾಮಾಜಿಕ ಜಾಲತಾಣ ಪೋಸ್ಟ್‌ನ ವಿರುದ್ಧ ಮೇ ತಿಂಗಳಲ್ಲಿಯೇ ವ್ಯಕ್ತಿಯೊಬ್ಬ ದೂರು ನೀಡಿದ್ದ. ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಕಿಗೆ ನೊಟೀಸ್ ನೀಡಿದ್ದಾರೆ'' ಎಂದು ಇಲಾಖೆ ಹೇಳಿದೆ.

    ಗಲಭೆ ಉಂಟು ಮಾಡುವ ಉದ್ದೇಶದಿಂದಲೇ ಪ್ರಚೋದನಕಾರಿ ಕಾರ್ಯ ಮಾಡಿರುವ ಆರೋಪವನ್ನು ಸೆಕ್ಷನ್ 153 ಅಡಿಯಲ್ಲಿ ಕೇರಳ ಪೊಲೀಸರು ನಿರ್ದೇಶಕಿ ಅಖಿಲಾ ವಿರುದ್ಧ ಹೊರಿಸಿದ್ದಾರೆ.

    ಭಾನುವಾರವೇ ನಿರ್ದೇಶಕಿಯನ್ನು ವಶಕ್ಕೆ ಪಡೆಯಲಾಗಿತ್ತು

    ಭಾನುವಾರವೇ ನಿರ್ದೇಶಕಿಯನ್ನು ವಶಕ್ಕೆ ಪಡೆಯಲಾಗಿತ್ತು

    ಭಾನುವಾರವೇ ಬೇರೊಂದು ಪ್ರಕರಣದಲ್ಲಿ ಅಖಿಲಾ ಅನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದಲ್ಲಿ ಅಂತರಾಷ್ಟ್ರೀಯ ಮಹಿಳಾ ಸಿನಿಮೋತ್ಸವ ಆಯೋಜಿಸಲಾಗಿದ್ದು, ಚಲನಚಿತ್ರೋತ್ಸವದಿಂದ ತಮ್ಮ ಸಿನಿಮಾವನ್ನು ಹೊರಗೆ ಇಟ್ಟಿದ್ದನ್ನು ವಿರೋಧಿಸಿ ಭಾನುವಾರ ಚಲಚಿತ್ರೋತ್ಸವದ ಆವರಣದಲ್ಲಿ ನಟಿ ಪ್ರತಿಭಟನೆ ಮಾಡಿದ್ದರು. ಆಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದಾದ ಮರುದಿನವೇ ಹಳೆ ಪ್ರಕರಣದಲ್ಲಿ ನಿರ್ದೇಶಕಿಗೆ ನೊಟೀಸ್ ನೀಡಲಾಗಿದೆ.

    ಕಾಳಿಯ ಪೋಸ್ಟರ್ ಹಂಚಿಕೊಂಡಿದ್ದ ನಿರ್ದೇಶಕಿ

    ಕಾಳಿಯ ಪೋಸ್ಟರ್ ಹಂಚಿಕೊಂಡಿದ್ದ ನಿರ್ದೇಶಕಿ

    ಕೆಲವು ದಿನಗಳ ಹಿಂದೆ ನಿರ್ದೇಶಕಿ ಲೀನಾ ಮಣಿಮೇಘಮಾಲೈ ದೇವತೆ ಕಾಳಿಗೆ ಅಪಮಾನ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಕಾಳಿ ದೇವತೆಯ ಪೋಸ್ಟರ್‌ ಬಿಡುಗಡೆ ಮಾಡಿದ್ದ ಲೀನಾ, ಕಾಳಿ ಸಿಗರೇಟು ಸೇದುತ್ತಿರುವಂತೆ ಚಿತ್ರಿಸಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

    ಡಾಕ್ಯುಮೆಂಟರಿ ನಿರ್ದೇಶಕಿ ಲೀನಾ ಮಣಿಮೇಘಮಾಲೈ

    ಡಾಕ್ಯುಮೆಂಟರಿ ನಿರ್ದೇಶಕಿ ಲೀನಾ ಮಣಿಮೇಘಮಾಲೈ

    ತಮಿಳುನಾಡು ಮೂಲದ ಲೀನಾ ಕೆನಡಾದಲ್ಲಿದ್ದು ಡಾಕ್ಯುಮೆಂಟರಿ ನಿರ್ದೇಶಕಿ ಆಗಿದ್ದಾರೆ. ಕಾಳಿ ಎಂಬ ಸಿನಿಮಾ ನಿರ್ಮಿಸಲು ಮುಂದಾಗಿರುವ ಲೀನಾ ತಾವೇ ಕಾಳಿ ರೂಪದಲ್ಲಿ ಮೇಕಪ್ ಮಾಡಿಕೊಂಡು ಕೈಯಲ್ಲಿ ಎಲ್‌ಜಿಬಿಟಿಕ್ಯು ಸಮುದಾಯದ ಭಾವುಟ ಹಿಡಿದು ಸಿಗರೇಟು ಸೇದುತ್ತಿರುವ ಪೋಸ್ಟರ್‌ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು. ಆ ಪೋಸ್ಟರ್‌ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು, ಕೊನೆಗೆ ಟ್ವಿಟ್ಟರ್ ಇಂಡಿಯಾವು ಲೀನಾರ ಟ್ವೀಟ್‌ ಅನ್ನು ಡಿಲೀಟ್ ಮಾಡಿತು. ಲೀನಾ ವಿರುದ್ಧ ಕೆನಡಾ ರಾಯಭಾರಿ ಕಚೇರಿಗೆ ದೂರು ಸಹ ನೀಡಲಾಯ್ತು. ಲೀನಾ ಮಾಡಿದ್ದ ಟ್ವೀಟ್‌ ಅನ್ನು ಟ್ವಿಟ್ಟರ್ ಸಂಸ್ಥೆ ಡಿಲೀಟ್ ಸಹ ಮಾಡಿತು.

    ನನ್ನ ಕಾಳಿ ಸಲಿಂಗಿ: ಲೀನಾ

    ನನ್ನ ಕಾಳಿ ಸಲಿಂಗಿ: ಲೀನಾ

    ವಿವಾದದ ಬಗ್ಗೆ ಮಾತನಾಡಿದ್ದ ನಿರ್ದೇಶಕಿ ಲೀಲಾ, ''ಬೆಟ್ಟದಷ್ಟು ದ್ವೇಷ ಹಾಗೂ ಕೆಟ್ಟ ನಿಂದನೆಗಳನ್ನು ನಾನು ನೋಡುತ್ತಿದ್ದೇನೆ. ಈ ದ್ವೇಷ ಹಂಚುವ ಟ್ರೋಲ್‌ಗಳಿಗೆ ಧಕ್ಕೆ ಆಗಬಹುದಾದ ಧಾರ್ಮಿಕತೆಯಾಗಲಿ ಸೂಕ್ಷ್ಮತೆಯಾಗಲಿ ಇಲ್ಲವೇ ಇಲ್ಲ. ನನ್ನ ಕಾಳಿ ಭಾರತದ ಮೂಲ ನಿವಾಸಿಗಳ, ಜನಪದರ ಕಾಳಿಯಾಗಿದ್ದಾಳೆ. ತೆಲುಗು ರಾಜ್ಯಗಳು, ತಮಿಳುನಾಡುಗಳಲ್ಲಿ ಪೂಜಿಸಲಾಗುವ ಕಾಳಿ ನನ್ನ ಸಿನಿಮಾಕ್ಕೆ ಸ್ಪೂರ್ತಿ'' ಎಂದಿದ್ದರು ಲೀನಾ. ತಾವು ಹಂಚಿಕೊಂಡಿದ್ದ ಕಾಳಿಯ ಪೋಸ್ಟರ್‌ನಲ್ಲಿ ಕಾಳಿಯ ಕೈಗೆ ಎಲ್‌ಜಿಬಿಟಿ ಬಾವುಟ ನೀಡಿದ್ದ ಲೀಲಾ ಈಗ ಕಾಳಿ ಸ್ವತಃ ಎಲ್‌ಜಿಬಿಟಿ ಸಮುದಾಯಕ್ಕೆ ಸೇರಿದವಳು ಎಂದಿದ್ದರು. ಅಲ್ಲದೆ, ನನ್ನ ಕಾಳಿ ಸಲಿಂಗಿ, ಹಿಂದುತ್ವದ ವಿಧ್ವಂಸಕಿ, ಆಕೆ ಸ್ವತಂತ್ರ್ಯ ಚೇತನ, ಆಕೆ ಪುರುಷ ಪ್ರಧಾನ ಪ್ರಭುತ್ವಕ್ಕೆ ಉಗಿಯುವವಳು, ಆಕೆ ಬಂಡವಾಳಶಾಹಿಯನ್ನು ನಿರ್ಮೂಲನೆ ಮಾಡುತ್ತಾಳೆ. ಆಕೆ ತನ್ನ ಸಾವಿರ ಕೈಗಳಿಂದ ಎಲ್ಲರನ್ನೂ ಅಪ್ಪಿಕೊಳ್ಳುತ್ತಾಳೆ ಎಂದಿರುವ ಲೀನಾ, ಮಾಧ್ಯಮದಲ್ಲಿ ಹೇಳಿರುವಂತೆ ''ಹಿಂದು ದೇವತೆ ಮೇಲೆ ಮಾಡಲಾಗುತ್ತಿರುವ ಸಿನಿಮಾ ಭಾರತದಲ್ಲಿ ದ್ವೇಷ ಹೆಚ್ಚಿಸಿದೆ'' ಎಂದು ಟ್ವೀಟ್ ಮಾಡಿದ್ದರು. ಇದೀಗ ಆ ವಿವಾದ ತಣ್ಣಗಾಗಿದೆ. ಅದರ ಬೆನ್ನಲ್ಲೆ ಕೇರಳದ ನಿರ್ದೇಶಕಿ ವಿವಾದ ಮುನ್ನೆಲೆಗೆ ಬಂದಿದೆ.

    Recommended Video

    ಐ ಲವ್ ಯೂ ಉಪ್ಪಿ ಸರ್ ಎಂದ ಸುದೀಪ್ | Kiccha Sudeep | Vikrant Rona | Upendra *Press Meet

    English summary
    Kerala movie director Akhila Henry issued notice by Kerala police for connection with social post on insulting Hindu gods. Complaint given in month of May.
    Tuesday, July 19, 2022, 16:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X