For Quick Alerts
  ALLOW NOTIFICATIONS  
  For Daily Alerts

  ನಟಿಯನ್ನು ಹಿಂಬಾಲಿಸಿ ಹಿಂಸಿಸುತ್ತಿದ್ದವನು ಈಗ ಪೊಲೀಸರ ಅತಿಥಿ!

  |

  ಸ್ಟಾರ್ ಸೆಲೆಬ್ರೆಟಿಗಳು ಅಂದರೆ ಅವರಿಗೆ ಅಭಿಮಾನಿಗಳು ಇರೋದು ಸಹಜ. ನಟ ನಟಿಯರು ಬಣ್ಣದ ಜಗತ್ತಲ್ಲಿ ಮಿಂಚುತ್ತಾರೆ, ಹೈ ಫೈ ಜೀವನ ನಡೆಸುತ್ತಾರೆ ಎಂದು ಅದೆಷ್ಟೋ ಮಂದಿ ಸೆಲೆಬ್ರೆಟಿಗಳನ್ನು ಅನುಸರಿಸುತ್ತಾರೆ. ಕೆಲವರ ಅಭಿಮಾನ ಮಿತವಾಗಿ ಇದ್ದರೆ ಮತ್ತೆ ಕೆಲವರು ಅತಿಯಾದ ಅಭಿಮಾನವನ್ನು ತೋರಿ ತಮ್ಮ ನೆಚ್ಚಿನ ನಟರಿಂದಲೇ ತಿರಸ್ಕಾರಕ್ಕೆ ಒಳಗಾಗುವ ಸಂಗತಿಗಳು ನಡೆಯೋದನ್ನು ನಾವು ಗಮನಿಸಿರುತ್ತೇವೆ.

  ಇಲ್ಲಿ ಮತ್ತೊಂದು ಕೆಟಗರಿಯ ಅಭಿಮಾನಿಗಳಿದ್ದಾರೆ. ಅವರು ನಟಿಮಣಿಯರನ್ನು ಹೆಚ್ಚು ಇಷ್ಟಪಡುತ್ತಾರೆ. ಇಷ್ಟ ಪಡೋದು ಮಾತ್ರವಲ್ಲದೆ ಅವರನ್ನು ಫಾಲೋ ಮಾಡೋದು, ಮನೆ ಬಳಿ ತೆರಳೋದು, ಗಿಫ್ಟ್ಗಳನ್ನು ನೀಡಲು ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡಲು ಹೋದ ಒರ್ವ ಅಭಿಮಾನಿ ಈಗ ಪೋಲಿಸರ ಅತಿಥಿಯಾಗಿದ್ದಾನೆ.

  ಅಷ್ಟಕ್ಕೂ ಈಗ ನಾವು ಹೇಳುತ್ತಿರೋದು ಜನಪ್ರಿಯ ನಟಿ ಪಾರ್ವತಿ ತಿರುವೋತ್ ಅಭಿಮಾನಿಯ ಬಗ್ಗೆ. ಈತನನ್ನ ಅಭಿಮಾನಿ ಅನ್ನೋದಕ್ಕಿಂತ ವಿಕೃತಿ ಅನ್ನಬಹುದೇನೋ. ಯಾಕೆಂದರೆ ಈತ ಪಾರ್ವತಿ ತಿರುವೋತ್ ಅವರನ್ನು ಕೇವಲ ಇಷ್ಟ ಪಟ್ಟಿದ್ದರೇ ಈತ ಪೋಲಿಸರ ಅತಿಥಿ ಆಗುವ ಸಾಧ್ಯತೆ ಇರಲಿಲ್ಲ. ಆದರೆ ಈತ ಮಾಡಿರೋ ಕೆಲಸವೇ ಬೇರೆ. ನಿತ್ಯ ಮೆನನ್ ಅವರನ್ನು ಕಾಡಿ ಬೇಡಿ ಫಾಲೋ ಮಾಡಿ ಈಗ ಜೈಲು ಸೇರಿದ್ದಾನೆ.

  ನಟಿಯನ್ನ ಫಾಲೋ ಮಾಡಿ ತಲುಪಿದ್ದು ಪೋಲೀಸ್ ಠಾಣೆಯನ್ನು

  ನಟಿಯನ್ನ ಫಾಲೋ ಮಾಡಿ ತಲುಪಿದ್ದು ಪೋಲೀಸ್ ಠಾಣೆಯನ್ನು

  ನಟಿ ಪಾರ್ವತಿ ತಿರುವೋತ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿ ಯಾಗಿದ್ದಾರೆ. ಕನ್ನಡದ 'ಮಿಲನ', 'ಮಳೆ ಬರಲಿ ಮಂಜು ಇರಲಿ', 'ಪೃಥ್ವಿ' 'ಅಂದರ್ ಬಾಹರ್' ಸಿನಿಮಾಗಳಲ್ಲಿ ನಟಿಸಿರುವ ಇವರು ಮೂಲತಹ ಮಲಯಾಳಂ ನಟಿ. ಈಗಾಗಲೇ ಕನ್ನಡ ಸೇರಿದಂತೆ ಮಳಯಾಲಂ, ತಮಿಳು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಟಿ ಪಾರ್ವತಿ ತಿರುವೋತ್ ಇತ್ತೀಚೆಗೆ ಅಭಿಮಾನಿಯೋರ್ವನ ಹುಚ್ಚಾಟಕ್ಕೆ ತುಂಬಾ ತಲೆಕೆಡಿಸಿಕೊಂಡಿದ್ದರು. ಅಲ್ಲದೇ ಈತನಿಂದ ಮುಕ್ತಿ ಪಡೆಯಲು ತೀರ್ಮಾನಿಸಿದ್ದ ಪಾರ್ವತಿ ತಿರುವೋತ್ ಪೋಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿ, ಈತನಿಂದ ಆಗುತ್ತಿದ್ದ ತೊಂದರೆಗಳ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ನಟಿಯ ದೂರಿನ ಅನ್ವಯ ಪಾರ್ವತಿ ತಿರುವೋತ್ ಹಿಂದೆ ಬಿದಿದ್ದ ಅಭಿಮಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

  ನಟಿಯ ದೂರಿನ ಬೆನ್ನಲ್ಲೆ ಪೋಲೀಸರಿಂದ ಬಂಧನ!

  ನಟಿಯ ದೂರಿನ ಬೆನ್ನಲ್ಲೆ ಪೋಲೀಸರಿಂದ ಬಂಧನ!

  ಪಾರ್ವತಿ ತಿರುವೋತ್ ಅವರನ್ನು ಪದೇ ಪದೇ ಹಿಂಬಾಲಿಸುತ್ತಿದ್ದ 35ವರ್ಷದ ವ್ಯಕ್ತಿಯನ್ನು ಕಿರುಕುಳ ಆರೋಪದಡಿ ಬಂಧಿಸಲಾಗಿದೆ. ಕೇರಳದ ಎರ್ನಾಕುಲಂ ನಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಅಂದಹಾಗೇ ಈ ವ್ಯಕ್ತಿ ಪಾರ್ವತಿ ತಿರುವೋತ್ ಅವರನ್ನು ಎಲ್ಲಿ ಹೋದರು ಹಿಂಬಾಲಿಸುತ್ತಿದ್ದ. ಶೂಟಿಂಗ್ ಸೆಟ್ ಸೇರಿದಂತೆ ಮನೆಯವರೆಗೂ ಅದೆಷ್ಟೋ ಬಾರಿ ಬಂದು ನಿಲ್ಲುತ್ತಿದ್ದ. ಬರುವಾಗ ಕೈಯಲ್ಲಿ ಏನೋ ವಸ್ತುಗಳನ್ನು ಹಿಡಿದು ತರುತ್ತಿದ್ದ ಮತ್ತು ಮನೆಗೆ ನುಗ್ಗಲೂ ಪ್ರಯತ್ನ ಪಟ್ಟಿದ್ದಾನೆ ಎಂದು ಪಾರ್ವತಿ ತಿರುವೋತ್ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಈ ವ್ಯಕ್ತಿಯ ವಿರುದ್ಧ (ಐಪಿಸಿ) ಸೆಕ್ಷನ್ 354 ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  ಪೊಲೀಸರ ಮುಂದೆ ಈತ ಹೇಳಿದ್ದೇನು?

  ಪೊಲೀಸರ ಮುಂದೆ ಈತ ಹೇಳಿದ್ದೇನು?

  ಇನ್ನು ಈತ ಪಾರ್ವತಿ ತಿರುವೋತ್ ಅವರನ್ನು ತುಂಬ ದಿನಗಳಿಂದಲೇ ಹಿಂಬಾಲಿಸುತ್ತಿದ್ದ ಎಂಬುದು ಗೊತ್ತಾಗಿದೆ. ಮನೆಯ ಸೆಕ್ಯೂರಿಟಿಗಳು ತಡೆದರೂ ಮನೆಯ ಒಳಗೆ ಬರಲು ಪ್ರಯತ್ನಿಸುತ್ತಿದ್ದ. ಈತ ಒಂದೆರಡು ಬಾರಿ ಕಾರಿನಲ್ಲಿ ತೆರಳುತ್ತಿದ್ದ ನಟಿಯನ್ನು ತಡೆಯುವ ಪ್ರಯತ್ನಕ್ಕೂ ಕೈ ಹಾಕಿದ್ದಾನೆ. ಪ್ರತೀ ಬಾರಿ ಬರುವಾಗಲೂ ಕೈನಲ್ಲಿ ಏನೋ ವಸ್ತುವನ್ನು ಹಿಡಿದು ಬರುತ್ತಿದ್ದ. ಆದರೆ ಈತನ ಉದ್ದೇಶ ಏನಾಗಿತ್ತು ಎಂಬ ಬಗ್ಗೆ ಇನ್ನು ತಿಳಿದು ಬಂದಿಲ್ಲ. ಪೋಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು ನಟಿಯನ್ನು ಹಿಂಬಾಲಿಸುತ್ತಿದ್ದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

  ಫಾಲೋ ಮಾಡ್ತಿದ್ದವನನ್ನು ಬಂದಿಸಿದಕ್ಕೆ ನಿಟ್ಟುಸಿರು ಬಿಟ್ಟ ನಟಿ

  ಫಾಲೋ ಮಾಡ್ತಿದ್ದವನನ್ನು ಬಂದಿಸಿದಕ್ಕೆ ನಿಟ್ಟುಸಿರು ಬಿಟ್ಟ ನಟಿ

  ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು "ಒಬ್ಬ ಮಹಿಳೆಯನ್ನು ಹಿಂಬಾಲಿಸುವುದು ಗಂಭೀರ ಅಪರಾಧ, ಇದು ಅನೇಕ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ" ಎಂದು ಪಾರ್ವತಿ ತಿರುವೋತ್ ಬರೆದುಕೊಂಡಿದ್ದರು. ಇದೀಗ ತನ್ನನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ಬಂದಿಸಿರೋದಕ್ಕೆ ನಿಟ್ಟುಸಿರು ಬಿಟ್ಟಿರೋ ಪಾರ್ವತಿ ತಿರುವೋತ್ ತಮಿಳಿನ ವೆಬ್ ಸೀರಿಸ್ 'ನವರಸ' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂನ 'ಆರಕರಿಯಮ್' ಹಾಗೂ ತಮಿಳಿನ 'ಶಿವರಂಜಿನಿಯುಮ್ ಇನ್ನುಮ್ ಸಿಲ ಪೆಣ್ಗಳುಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Kerala police arrested 35 year old Man for harassing actress Parvathy Thiruvothu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X