For Quick Alerts
  ALLOW NOTIFICATIONS  
  For Daily Alerts

  ನಟ ಮೋಹನ್‌ಲಾಲ್ ಸ್ವಾರ್ಥಿ ಎಂದ ಕೇರಳ ಫಿಲಂ ಚೇಂಬರ್

  |

  ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್‌ಲಾಲ್ ಮೇಲೆ ಚಿತ್ರಮಂದಿರಗಳ ಮಾಲೀಕರು ಸಿಟ್ಟಾಗಿದ್ದಾರೆ.

  ಮೋಹನ್‌ಲಾಲ್ ನಟನೆಯ 'ದೃಶ್ಯಂ 2' ಸಿನಿಮಾವನ್ನು ಅಮೆಜಾನ್ ಪ್ರೈಂ ನಲ್ಲಿ ನೇರ ಬಿಡುಗಡೆಗೆ ಮಾರಾಟ ಮಾಡಿರುವುದು ಕೇರಳ ಚಿತ್ರವಿತರಣೆ, ಚಿತ್ರಮಂದಿರಗಳ ಮಾಲೀಕರ ಸಂಘದ ಆಕ್ರೋಶ ಕೆರಳಿಸಿದೆ.

  'ದೃಶ್ಯಂ 2' ಟೀಸರ್: ಬಯಲಾಗದ ಕೊಲೆಯ ರಹಸ್ಯಗಳು ಇನ್ನೂ ಇವೆ

  ಈ ಬಗ್ಗೆ ಮಾತನಾಡಿರುವ ಕೇರಳ ವಿತರಕರ ಸಂಘದ ಅಧ್ಯಕ್ಷ ಲಿಬರ್ಟಿ ಬಶೀರ್, ಮೋಹನ್‌ಲಾಲ್ ನಟನೆಯ 'ದೃಶ್ಯಂ 2' ಸಿನಿಮಾವು ಕೊರೊನಾ ಪರಿಸ್ಥಿತಿ ನಂತರ ಜನರನ್ನು ಚಿತ್ರಮಂದಿರದ ಕಡೆ ಸೆಳೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಮೋಹನ್‌ಲಾಲ್ ತಮ್ಮ ಸಿನಿಮಾವನ್ನು ಅಮೆಜಾನ್ ಪ್ರೈಂ ಗೆ ಮಾರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಮುಖ್ಯ ಪಾತ್ರದಲ್ಲಿ ಖ್ಯಾತ ನಟ?

  ನಟ ವಿಜಯ್ ಉದಾಹರಣೆ ನೀಡಿದ ಲಿಬರ್ಟಿ ಬಶೀರ್

  ನಟ ವಿಜಯ್ ಉದಾಹರಣೆ ನೀಡಿದ ಲಿಬರ್ಟಿ ಬಶೀರ್

  ವಿಜಯ್ ಅವರನ್ನು ಉದಾಹರಣೆಯಾಗಿ ನೀಡಿರುವ ಲಿಬರ್ಟಿ ಬಶೀರ್, 'ತಮಿಳಿನ ಸ್ಟಾರ್ ನಟ ವಿಜಯ್ ಅವರು ತಮ್ಮ ಮಾಸ್ಟರ್ ಸಿನಿಮಾಕ್ಕೆ ಸಾಕಷ್ಟು ಒಟಿಟಿ ಆಫರ್‌ಗಳು ಬಂದರೂ ಸಹ ಒಟಿಟಿಗೆ ಮಾರದೆ, ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಲು ತಾಳ್ಮೆಯಿಂದ ಕಾದರು, ಮೋಹನ್‌ಲಾಲ್, ವಿಜಯ್‌ ಅನ್ನು ಅನುಸರಿಸಬೇಕಿತ್ತು' ಎಂದಿದ್ದಾರೆ.

  ಮೋಹನ್‌ಲಾಲ್ ಅನ್ನು ಸ್ವಾರ್ಥಿ ಎಂದ ಫಿಲಂ ಚೇಂಬರ್

  ಮೋಹನ್‌ಲಾಲ್ ಅನ್ನು ಸ್ವಾರ್ಥಿ ಎಂದ ಫಿಲಂ ಚೇಂಬರ್

  ಕೇರಳ ಫಿಲಂ ಚೇಂಬರ್ ಸಹ ಮೋಹನ್‌ಲಾಲ್ ಅವರ ನಿರ್ಣಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಮೋಹನ್‌ಲಾಲ್ ಅವರು ಪ್ರಸ್ತುತ ಸನ್ನಿವೇಶವನ್ನು ಗಮಿಸದೇ, ಸ್ವಾರ್ಥ ನಿರ್ಣಯ ತೆಗೆದುಕೊಂಡಿದ್ದಾರೆ. ಚಿತ್ರರಂಗ, ಚಿತ್ರಮಂದಿರಗಳು, ಸಿಬ್ಬಂದಿಗಳ ಬಗ್ಗೆ ಅವರು ಯೋಚಿಸಿಲ್ಲ' ಎಂದಿದೆ.

  ನಿರ್ಣಯ ಸಮರ್ಥಿಸಿಕೊಂಡ 'ದೃಶ್ಯಂ 2' ಚಿತ್ರತಂಡ

  ನಿರ್ಣಯ ಸಮರ್ಥಿಸಿಕೊಂಡ 'ದೃಶ್ಯಂ 2' ಚಿತ್ರತಂಡ

  ಆದರೆ ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡಿರುವ 'ದೃಶ್ಯಂ 2' ಚಿತ್ರತಂಡ, ಕೇರಳದಲ್ಲಿ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ, ಅವು ತೆರೆಯಲು ಇನ್ನೆಷ್ಟು ಸಮಯ ಹಿಡಿಯುತ್ತದೆಯೋ ಗೊತ್ತಿಲ್ಲ. ಆ ವೇಳೆಗೆ ನಮ್ಮ ಸಿನಿಮಾದ ಕತೆ ಲೀಕ್ ಆಗುವ ಸಂಭವ ಸಹ ಇರುತ್ತದೆ, ಹಾಗಾದಲ್ಲಿ ಸಿನಿಮಾ ಡೈಲ್ಯೂಟ್ ಆಗಿಬಿಡುತ್ತದೆ, ಹಾಗಾಗಿ ಒಟಿಟಿಗೆ ಮಾರಿದ್ದೇವೆ' ಎಂದಿದೆ.

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada
  ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ 'ದೃಶ್ಯಂ 2'

  ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ 'ದೃಶ್ಯಂ 2'

  'ದೃಶ್ಯಂ 2' ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್‌ ನಿನ್ನೆ (ಜನವರಿ 1) ರಂದು ಬಿಡುಗಡೆ ಆಗಿದೆ. ಸಿನಿಮಾವನ್ನು ಜೀತು ಜೋಸೆಫ್ ನಿರ್ದೇಶಿಸಿದ್ದು, ಮೀನಾ ನಟಿಸಿದ್ದಾರೆ. 2013 ರಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗ 'ದೃಶ್ಯಂ 2'.

  English summary
  Kerala theater owners and film chamber is unhappy with Mohanlal decision to stream his movie Drishyam 2 on Amazon prime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X