For Quick Alerts
  ALLOW NOTIFICATIONS  
  For Daily Alerts

  Suresh Gopi: ವಂಚನೆ ಪ್ರಕರಣ: ನಟ ಸುರೇಶ್ ಗೋಪಿ ಸಹೋದರನ ಬಂಧನ

  |

  ಮಲಯಾಳಂ ಸಿನಿಮಾ ನಟ, ರಾಜಕಾರಣಿ ಸುರೇಶ್ ಗೋಪಿ ಸಹೋದರ ಸುನಿಲ್ ಗೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  ಕೇರಳದ ಕೋಳಿಕೋಡ್‌ನಲ್ಲಿ ಜಿಲ್ಲಾ ಕ್ರೈಂ ಬ್ರ್ಯಾಂಚ್ ಪೊಲಿಸ್ ಅಧಿಕಾರಿಗಳು ಸುನಿಕ್ ಗೋಪಿಯನ್ನು ಬಂಧಿಸಿದ್ದು, ಅವರ ಮೇಲೆ 90 ಲಕ್ಷ ರುಪಾಯಿ ಹಣ ವಂಚಿಸಿರುವ ಆರೋಪ ಹೊರಿಸಲಾಗಿದೆ.

  ಸುನಿಲ್ ಗೋಪಿ ವಿರುದ್ಧ ಗಿರಿಧರನ್ ಎಂಬುವರು ದೂರು ದಾಖಲಿಸಿದ್ದು, ಸುನಿಲ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮಗೆ ಜಮೀನು ಮಾರಾಟ ಮಾಡಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

  ಮಲಯಾಳಂ ಡೈರೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ಶೂಟಿಂಗ್ ಸ್ಥಳದಲ್ಲೇ ಬಂಧನ! ಮಲಯಾಳಂ ಡೈರೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ಶೂಟಿಂಗ್ ಸ್ಥಳದಲ್ಲೇ ಬಂಧನ!

  ಕಳೆದ ವರ್ಷ ನವೆಂಬರ್‌ನಲ್ಲಿ ಸುನಿಲ್, ತಮ್ಮ ಗೆಳೆಯ ವೆಂಕಟಾಚಲಂ ಮೂಲಕ ಗಿರಿಧರನ್ ಅನ್ನು ಭೇಟಿಯಾಗಿ ಕೊಯಮತ್ತೂರಿನ ಮದುಕ್ಕರಿ ತಾಲ್ಲೂಕಿನಲ್ಲಿರುವ ಮಾವುತಮ್‌ಪತ್ತಿಯಲ್ಲಿರುವ 4.52 ಎಕರೆ ಜಮೀನು ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಮಾತುಕತೆ ಬಳಿಕ ಜಮೀನು ಖರೀದಿಸಲು ಒಪ್ಪಿದ ಗಿರಿಧರನ್, ಸುನಿಲ್ ಹಾಗೂ ಅವರ ಸಂಬಂಧಿಗಳಾದ ರೀನಾ ಹಾಗೂ ಶಿವದಾಸ್ ಖಾತೆಗೆ 97 ಲಕ್ಷ ರುಪಾಯಿ ಹಣವನ್ನು ಜಮೆ ಮಾಡಿದ್ದಾರೆ. ಜಮೀನಿನ ನೊಂದಂಣಿ ಕಾರ್ಯ ನವೆಂಬರ್ 24, 2021 ರಂದು ನಡೆದಿದೆ.

  ನೊಂದಣಿ ಬಳಿಕ ಗಿರಿಧರ್, ಇಸಿಗೆ ಅಪ್ಲಿಕೇಶನ್ ಹಾಕಿದಾಗ ಆ ಜಮೀನಿನ ಮೇಲೆ ಕೇಸು ಇರುವುದು ಗೊತ್ತಾಗಿದೆ. ಈ ಬಗ್ಗೆ ಸುನಿಲ್ ಅನ್ನು ಪ್ರಶ್ನೆ ಮಾಡಿದಾಗ ಒಂದು ತಿಂಗಳ ಒಳಗಾಗಿ ಹಣವನ್ನು ಮರಳಿಸುವುದಾಗಿ ಹೇಳಿದ್ದಾರೆ. ತಿಂಗಳ ಬಳಿಕ ಮತ್ತೆ ಸುನಿಲ್ ಅನ್ನು ಪ್ರಶ್ನೆ ಮಾಡಿದಾಗ ಗಿರಿಧರ್‌ಗೆ ಪತ್ರದ ಮೂಲಕ ಬೆದರಿಕೆ ಹಾಕಿದ್ದಾರೆ ಸುನಿಲ್. ಬಳಿಕ ಗಿರಿಧರನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಸುನಿಲ್ ಗೋಪಿ, ರೀನಾ ಹಾಗೂ ಶಿವದಾಸ್ ವಿರುದ್ಧ ಪೊಲೀಸರು ಸೆಕ್ಷನ್ 120, 406, 420, 471 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಸುನಿಲ್ ಅನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರೀನಾ ಹಾಗೂ ಶಿವದಾಸ್ ಅನ್ನು ಈ ವರೆಗೆ ಬಂಧಿಸಲಾಗಿಲ್ಲ.

  ಈಗ ಬಂಧಿಸಲಾಗಿರುವ ಸುನಿಲ್ ಗೋಪಿ, ಮಲಯಾಳಂ ಹಿರಿಯ ನಟ ಸುರೇಶ್‌ ಗೋಪಿಯ ಸಹೋದರ. ಸುರೇಶ್ ಗೋಪಿ ನಟರಾಗಿರುವ ಜೊತೆಗೆ ರಾಜ್ಯ ಸಭೆ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.

  English summary
  Malayalam actor and politician Suresh Gopi's brother Sunil arrested by crime branch in cheating case in Kerala.
  Monday, March 21, 2022, 19:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X