For Quick Alerts
  ALLOW NOTIFICATIONS  
  For Daily Alerts

  ಅಪ್ರಾಪ್ತರಿಗೆ ಮರ್ಮಾಂಗ ತೋರಿಸಿ ಅರೆಸ್ಟ್ ಆಗಿದ್ದ ಮಲಯಾಳಂ ನಟನಿಗೆ ಜಾಮೀನು!

  |

  ಮಲಯಾಳಂನ ಜನಪ್ರಿಯ ನಟ ಶ್ರೀಜಿತ್ ರವಿಯನ್ನು ಕೇರಳದ ಪೊಲೀಸರು ಬಂಧಿಸಿದ್ದರು. ಇಬ್ಬರು ಅಪ್ರಾಪ್ತರಿಗೆ ತನ್ನ ಮರ್ಮಾಂಗವನ್ನು ತೋರಿಸಿದ್ದರಿಂದ ಪೊಲೀಸರು ಶ್ರೀಜಿತ್ ರವಿಯನ್ನು ಅರೆಸ್ಟ್ ಮಾಡಿದ್ದರು.

  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 11ರ ಅಡಿ ಮಲಯಾಳಂ ನಟನನ್ನು ಬಂಧಿಸಲಾಗಿತ್ತು. ಜುಲೈ 4ರಂದು ತ್ರಿಶೂರ್ ಜಿಲ್ಲೆಯ ಅಯ್ಯಂತೊಳೆ ಎಸ್.ಎನ್. ಪಾರ್ಕ್‌ನಲ್ಲಿ ಈ ಘಟನೆ ನಡೆದಿತ್ತು. ಪಾರ್ಕ್ ಬಳಿ ಶ್ರೀಜಿತ್ ರವಿ ತನ್ನ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಅಪ್ರಾಪ್ತರು ಸಮೀಪಿಸುತ್ತಿದ್ದಂತೆ ಕಾರಿನಿಂದ ಇಳಿದು ತನ್ನ ದೇಹದ ಖಾಸಗಿ ಭಾಗವನ್ನು ಪ್ರದರ್ಶನ ಮಾಡಿದ್ದರು. ಈ ಕಾರಣಕ್ಕೆ ತ್ರಿಶೂರ್ ಪೋಲಿಸರು ನಟನನ್ನು ಬಂಧಿಸಿದ್ದರು.

  ಮಲಯಾಳಂ ನಟ ಶ್ರೀಜಿತ್ ರವಿಗೆ ಜಾಮೀನು

  ಜುಲೈ 4ರಂದು ಪಾರ್ಕ್ ಸಮೀಪ ಬರುತ್ತಿದ್ದ ಇಬ್ಬರು ಅಪ್ರಾಪ್ತರಿಗೆ ಗುಪ್ತಾಂಗ ತೋರಿಸಿರುವ ಆರೋಪದಡಿ ಬಂಧಿತನಾಗಿದ್ದ ಮಲಯಾಳಂ ನಟ ಶ್ರೀಜಿತ್ ರವಿ ಜಾಮೀನು ಸಿಕ್ಕಿದೆ. ಕೇರಳ ಹೈ ಕೋರ್ಟ್ ಶ್ರೀಜಿತ್ ರವಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ನಟನಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕುಟುಂಬ ತಿಳಿಸಿದ್ದಲ್ಲದೆ. ಹೈ ಕೋರ್ಟ್ ತಾಕೀತು ಮಾಡಿದೆ.

  ಶ್ರೀಜಿತ್ ಪರ ವಕೀಲರು ನ್ಯಾಯಾಲಯದಲ್ಲಿ ಶ್ರೀಜಿತ್ ಪರವಾದ ಮಂಡಿಸಿದ್ದರು. ಕಳೆದ ಆರು ವರ್ಷಗಳಿಂದ ಶ್ರೀಜಿತ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆಯಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಅವರ ಮಾನಸಿಕ ಆರೋಗ್ಯವನ್ನು ಪರಿಗಣಿಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

  Malayalam Actor Sreejith Ravi Got Conditional Bail From Kerala High Court

  ಇಂತಹ ಘಟನೆ ಮರುಕಳಿಸಿದರೆ ಜಾಮೀನು ರದ್ದು

  ಕೇರಳ ಹೈಕೋರ್ಟ್ ಕುಟುಂಬಕ್ಕೆ ಮತ್ತೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಹೇಳಿದೆ. ಅಲ್ಲದೆ ಶ್ರೀಜಿತ್ ರವಿ ತಂದೆ ಮತ್ತು ಪತ್ನಿಗೆ ಅಫಿಡವಿಟ್ ಸಲ್ಲಿಸುವಂತೆ ಹೇಳಿದೆ. ಒಂದು ವೇಳೆ ಮತ್ತೆ ಇಂತಹ ಘಟನೆ ನಡೆದರೆ, ಜಾಮೀನು ರದ್ದು ಮಾಡುವುದಾಗಿ ತಿಳಿಸಿದೆ ಎನ್ನಲಾಗಿದೆ.

  Recommended Video

  Sanchari Vijay | ಸಂಚಾರಿ ವಿಜಯ್ ಈ ಸಿನಿಮಾದ ಬಗ್ಗೆ ತುಂಬಾ ಆಸೆ ಇಟ್ಟುಕೊಂಡಿದ್ರು! | TALEDANDA *Press Meet

  ಶ್ರೀಜಿತ್ ರವಿ ಇಂತಹ ವರ್ತನೆ ಇದೇ ಮೊದಲೇನಲ್ಲ. ಕೆಲವು ವರ್ಷಗಳ ಹಿಂದೆ, ಇದನ್ನೇ ಹೋಲುವಂತಹ ದೂರು ದಾಖಲಾಗಿತ್ತು. 2016ರಲ್ಲಿ ಮಲಯಾಳಂ ನಟ ಶ್ರೀಜಿತ್ ಕೇರಳದ ಪಾಲಕ್ಕಡ್‌ನಲ್ಲಿ 14 ಮಂದಿ ಶಾಲಾ ಬಾಲಕಿಯ ಪೋಷಕರು ಸಾರ್ವಜನಿಕವಾಗಿ ನಗ್ನರಾಗಿ ಹುಚ್ಚುತನ ಮೆರೆದಿದ್ದಾನೆಂದು ದೂರು ನೀಡಿದ್ದರು. ದೂರಿನ ಬಳಿಕ ಶ್ರೀಜಿತ್ ರವಿಯನ್ನು ಜಾಮೀನು ನೀಡಲಾಗಿತ್ತು. ಆ ವೇಳೆ ಈ ಕೇಸ್ ಮುಖ್ಯಭೂಮಿಕೆಗೆ ಬರಲಿಲ್ಲ. ಸರಿಯಾ ಸಾಕ್ಷ್ಮಿಗಳನ್ನು ಕಲೆ ಹಾಕದೆ ಕೇಸಿನ ಹಾದಿ ಕೆಡಿಸಿದ್ದರು ಎಂದು ಅಪ್ರಾಪ್ತ ಬಾಲಕಿಯ ಪೋಷಕರು ಪೊಲೀಸರನ್ನು ದೂರಿದ್ದರು.

  English summary
  Malayalam Actor Sreejith Ravi Got Conditional Bail From Kerala High Court, Know More.
  Saturday, July 16, 2022, 22:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X