Just In
Don't Miss!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- News
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವು
- Sports
ರಾಜಸ್ಥಾನ ತಂಡದಿಂದ ಸ್ಟೀವ್ ಸ್ಮಿತ್ ಔಟ್, ಸಂಜು ಹೊಸ ಕ್ಯಾಪ್ಟನ್!
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಾಪಿಂಗ್ ಮಾಲ್‌ನಲ್ಲಿ ನಟಿಗೆ ಕಿರುಕುಳ: ಇಬ್ಬರನ್ನು ಬಂಧಿಸಿದ ಪೊಲೀಸರು
ಕೇರಳದ ಕೊಚ್ಚಿಯ ಮಾಲ್‌ವೊಂದರಲ್ಲಿ ಮಲಯಾಳಂ ನಟಿಗೆ ಕಿರುಕುಳ ನೀಡಿದ ಇಬ್ಬರನ್ನು ಕಲಾಮಸೇರಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಈ ಘಟನೆ ನಡೆದ ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಾಮ್ ಶಾದ್ ಮತ್ತು ಆದಿಲ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಪೆರಿಂತಾಲ್ಮಣ್ಣ, ಮಲಪ್ಪುರಾಮಕ್ಕೆ ಸೇರಿದ ಈ ಇಬ್ಬರು ವಿರುದ್ಧ ಐಪಿಸಿ ಸೆಕ್ಷನ್ 354 ಮತ್ತು 354 ಡಿ ಆರೋಪ ಇದೆ.
ಶಾಪಿಂಗ್ ಮಾಲ್ ನಲ್ಲಿ ಲೈಂಗಿಕ ಕಿರುಕುಳ; ಕಹಿ ಘಟನೆ ಬಿಚ್ಚಿಟ್ಟ 'ಕಪ್ಪೆಲಾ' ನಟಿ
ಬಂಧಿತ ಇಬ್ಬರು ವ್ಯಕ್ತಿಗಳು ನಟಿಯ ಬಳಿ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಹೊಸದಾಗಿ ಪೋಸ್ಟ್ ಹಾಕಿರುವ ನಟಿ ''ಇಬ್ಬರು ವ್ಯಕ್ತಿಗಳು ತಮ್ಮ ತಪ್ಪನ್ನು ತಿಳಿದುಕೊಂಡಿದ್ದಾರೆ. ಅವರ ಕ್ಷಮೆಯನ್ನು ನಾನು ಅಂಗೀಕರಿಸುತ್ತೇನೆ'' ಎಂದು ತಿಳಿಸಿದ್ದಾರೆ.
ಆದ್ರೆ, ಪ್ರಾಥಮಿಕ ತನಿಖೆಯಲ್ಲಿ ಅವರು ಅಪರಾಧ ಎಸಗಿದ್ದಾರೆ ಎಂದು ಈಗಾಗಲೇ ತಿಳಿದು ಬಂದಿದ್ದರಿಂದ ಆರೋಪಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಘಟನೆಯ ವಿವರ
ಕುಟುಂಬದ ಜೊತೆ ಶಾಪಿಂಗ್ ಗೆ ತೆರಳಿದ್ದ ನಟಿ ಅನ್ನಾ ಬೆನ್ ಗೆ ಅನಾಮಿಕ ವ್ಯಕ್ತಿಯೊಬ್ಬ ಆಕೆ ದೇಹವನ್ನು ಕೆಟ್ಟದಾಗಿ ಸ್ಪರ್ಶಿಸಿದ್ದನು ಎಂದು ಸ್ವತಃ ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
'ಲುಲು ಹೈಪರ್ ಮಾರ್ಕೆಟ್ ಬಳಿ, ತುಂಬಾ ವಿಸ್ತಾರವಾದ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಹಿಂದೆ ನಡೆದುಕೊಂಡು ಬರುತ್ತಿದ್ದರು. ಹೆಚ್ಚು ಜನರಿದ್ದ ಸ್ಥಳವಾಗಿತ್ತು. ಒಬ್ಬ ನನ್ನ ಹಿಂದೆ ನಡೆದುಕೊಂಡು ಬರುವಾಗ ಉದ್ದೇಶಪೂರ್ವಕವಾಗಿ ನನ್ನ ಬೆನ್ನಮೇಲೆ ಕೈ ಹಾಕಿದ್ದಾನೆ. ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಆತ ಅಲ್ಲಿಂದ ಹೊರಟು ಹೋಗಿದ್ದ'' ಎಂದು ಘಟನೆ ಬಗ್ಗೆ ವಿವರವಾಗಿ ಹಂಚಿಕೊಂಡಿದ್ದರು.
ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗಾಗ ಬಲೆ ಬೀಸಿದ್ದರು. ಘಟನೆ ನಡೆದ ಎರಡು ದಿನದ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾರೆ.
ಇನ್ನು 'ಮಹಿಳೆಯರಿಗೆ ಮುಜುಗರ ಉಂಟಾಗುವಂತ ಯಾವುದೇ ಕೆಲಸವನ್ನು ಮಾಡಿದರೆ, ನೀವು ಜೀವನದ ಅತ್ಯಂತ ಕೆಳಮಟ್ಟದ ವ್ಯಕ್ತಿಯಾಗಿರುತ್ತೀರಿ. ನಿವು ನರಕವನ್ನು ಹೊರತುಪಡಿಸಿ ಯಾವುದಕ್ಕೂ ಅರ್ಹರಲ್ಲ. ಈ ಪೋಸ್ಟ್ ಓದಿದ ಎಲ್ಲಾ ಮಹಿಳೆಯರಿಗೆ, ಇಂತಹ ಘಟನೆಗಳು ನಿಮ್ಮ ಜೀವನದಲ್ಲಿ ನಡೆದಾಗ ಬಲವಾದ ಪ್ರತಿಕ್ರಿಯೆ ನೀಡುತ್ತೀರಿ ಎಂದು ನಾನು ಭಾವಿಸಿದ್ದೇನೆ' ಎಂದು ನಟಿ ಪೋಸ್ಟ್ ಹಾಕಿದ್ದರು.