twitter
    For Quick Alerts
    ALLOW NOTIFICATIONS  
    For Daily Alerts

    ಮಲಯಾಳಂ ಹಿರಿಯ ನಟ ಜಿಕೆ ಪಿಳ್ಳೈ ನಿಧನ

    |

    ಮಲಯಾಳಂ ಚಿತ್ರರಂಗದ ಹಿರಿಯ ನಟ ಜಿಕೆ ಪಿಳ್ಳೈ ಇಂದು ನಿಧನ ಹೊಂದಿದ್ದಾರೆ. ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದ ಜಿಕೆ ಪಿಳ್ಳೈ ಅವರಿಗೆ 97 ವರ್ಷ ವಯಸ್ಸಾಗಿತ್ತು.

    ಕೆಲ ದಿನಗಳಿಂದಲೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಿಳ್ಳೈ ತಿರುವನಂತಪುರಂನ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ. ಪಿಳ್ಳೈ ಅವರಿಗೆ ಮೂವರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು ಇದ್ದಾರೆ. ಪಿಳ್ಳೈ ಪತ್ನಿ ಕೆಲ ವರ್ಷಗಳ ಹಿಂದೆ ನಿಧನ ಹೊಂದಿದ್ದರು.

    ಸಿನಿಮಾದಲ್ಲಿ ನಟಿಸುವ ಮುನ್ನ ಭಾರತೀಯ ನೌಕಾಪಡೆಯಲ್ಲಿ ಪಿಳ್ಳೈ ಸೇವೆ ಸಲ್ಲಿಸಿದ್ದರು. 1954 ರಲ್ಲಿ ಪಿಳ್ಳೈ ನಟನೆಯ ಮೊದಲ ಸಿನಿಮಾ 'ಸ್ನೇಹಸೀಮಾ' ಬಿಡುಗಡೆ ಆಗಿತ್ತು. ಆ ಸಿನಿಮಾವನ್ನು ಆಗಿನ ಜನಪ್ರಿಯ ನಿರ್ದೇಶಕ ಎಸ್‌ಎಸ್ ರಾಜನ್ ನಿರ್ದೇಶನ ಮಾಡಿದ್ದರು.

    Malayalam Senior Actor GK Pillai Passed Away
    'ತೋಚಿ ಅಂಬು', 'ಪಾಲಾಟ್ಟು ಕುಂಜಿಕನ್ನನ್', 'ಪಡಯೋಟ್ಟುಂ', 'ಆಜಿ', 'ಆಗಸ್ಟ್ 1', 'ಅಗ್ನಿಮೃಗಂ', 'ಮಾಯಾ', 'ಲಾಟರಿ ಟಿಕೆಟ್', 'ಒತ್ತೆಂತಿ ಮಕ್ಕನ್' ಸೇರಿದಂತೆ ಹಲವು ಸೂಪರ್ ಡೂಪರ್ ಹಿಟ್ ಮಲಯಾಳಂ ಸಿನಿಮಾಗಳಲ್ಲಿ ಪಿಳ್ಳೈ ನಟಿಸಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಅವರು ವಿಲನ್ ಆಗಿ ನಟಿಸಿದ್ದಾರೆ. ಮಲಯಾಳಂ ಜನಪ್ರಿಯ ನಟ ಜಯನ್ ಬಳಿಕ ಯಾವುದೇ ಡ್ಯೂಪ್ ಇಲ್ಲದೆ ಸಾಹಸಗಳನ್ನು ಮಾಡುತ್ತಿದ್ದ ಏಕೈಕ ಮಲಯಾಳಂ ನಟ ಎಂಬ ಹೆಸರು ಪಿಳ್ಳೈ ಅವರದ್ದಾಗಿತ್ತು.

    ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡವರು ಪಿಳ್ಳೈ. 2011 ರಿಂದ 2014 ರ ವರೆಗೆ ಪ್ರಸಾರವಾದ ಮಲಯಾಳಂ ಧಾರಾವಾಹಿ 'ಕಡಮುಟ್ಟತು ಕಥನಾರ್' ಧಾರಾವಾಹಿಯಲ್ಲಿ ಕರ್ನಲ್ ಜಗನ್ನಾಥ ವರ್ಮಾ ಪಾತ್ರದಲ್ಲಿ ಪಿಳ್ಳೈ ನಟಿಸಿದ್ದರು. ಈ ಪಾತ್ರ ಬಹಳ ಜನಪ್ರಿಯತೆ ಗಳಿಸಿತ್ತು. ಅದರ ಹೊರತಾಗಿ 'ಎಂಟೆ ಮನಸಪೂರ್ತಿ', 'ಆಟೋಗ್ರಾಫ್', 'ಇವಿದಂ ಸ್ವರ್ಗಮನು', 'ಅವಲುಡೆ ಕಥ', 'ಸ್ಪಂದನಂ' ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ.

    ಇಂದು ಪಿಳ್ಳೈ ನಿಧನದ ಸುದ್ದಿ ತಿಳಿದು ಹಲವು ಮಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

    English summary
    Malayalam senior actor GK Pillai passed away on December 31. He was 97. He acted in several Malayalam movies.
    Saturday, January 1, 2022, 9:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X