For Quick Alerts
  ALLOW NOTIFICATIONS  
  For Daily Alerts

  ಸೌತ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದ ಮಮ್ಮುಟ್ಟಿ

  |

  2019ನೇ ವರ್ಷ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರಿಗೆ ಬಹಳ ವಿಶೇಷವಾಗಿದೆ. ಸತತ ಸಿನಿಮಾಗಳ ಮೂಲಕ ಹಿರಿಯ ನಟನಿಗೆ ದೊಡ್ಡ ಯಶಸ್ಸು ಸಿಕ್ಕಿದೆ. 2019ರಲ್ಲಿ ತೆರೆಕಂಡ ಎಲ್ಲ ಚಿತ್ರಗಳಿಗೂ ಮೆಚ್ಚುಗೆ ವ್ಯಕ್ತವಾಗಿತ್ತು.

  ಇದೀಗ, ಮಾಲಿವುಡ್ ಸೂಪರ್ ಸ್ಟಾರ್ ಹೊಸ ದಾಖಲೆಯೊಂದು ನಿರ್ಮಿಸಿದ್ದಾರಂತೆ. ಸಿನಿಮಾ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಫಿಲಂಫೇರ್ ಪ್ರಶಸ್ತಿಯಲ್ಲಿ ಮಮ್ಮುಟ್ಟಿ ವಿಶೇಷ ಸಾಧನೆ ಮಾಡಿದ್ದಾರೆ.

  ವರ್ಷವೊಂದರಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ಮೂರು ಭಾಷೆಯ ಚಿತ್ರಗಳಲ್ಲಿ ಪ್ರತ್ಯೇಕವಾಗಿ ನಾಮನಿರ್ದೇಶನವಾಗಿದ್ದಾರೆ.

  ಪವರ್ ಫುಲ್ ರಾಜಕಾರಣಿಯಾದ ಸೂಪರ್ ಸ್ಟಾರ್ ಮಮ್ಮುಟ್ಟಿಪವರ್ ಫುಲ್ ರಾಜಕಾರಣಿಯಾದ ಸೂಪರ್ ಸ್ಟಾರ್ ಮಮ್ಮುಟ್ಟಿ

  ಮಲಯಾಳಂ ಚಿತ್ರ ಉಂಡಾ, ತಮಿಳಿನ ಪೆರೆನ್ಬು ಹಾಗೂ ತೆಲುಗಿನ ಯಾತ್ರಾ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರಂತೆ. ಫಿಲಂಪೇರ್ ಇತಿಹಾಸದಲ್ಲಿ ಇಂತಹದೊಂದು ಅಪರೂಪದ ದಾಖಲೆ ಇದೇ ಮೊದಲು ಎಂದು ಮಲಯಾಳಂ ನಿರ್ದೇಶಕ ಅಜಯ್ ವಾಸುದೇವನ್ ಬಹಿರಂಗಪಡಿಸಿದ್ದಾರೆ.

  ತಮ್ಮ ಐದು ವರ್ಷದ ಸಿನಿ ಜರ್ನಿಯಲ್ಲಿ ಮಮ್ಮುಟ್ಟಿ ಅವರು 12 ಬಾರಿ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಮಮ್ಮುಟ್ಟಿ ನಟನೆಯ ಮೂರು ಮೆಗಾ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ಪದ್ಮಕುಮಾರ್ ನಿರ್ದೇಶನದ ಐತಿಹಾಸಿಕ ಚಿತ್ರ 'ಮಾಮಂಗಂ', ಅಜಯ್ ವಾಸುದೇವನ್ ನಿರ್ದೇಶನದ ಆಕ್ಷನ್ ಸಿನಿಮಾ 'ಶೈಲಾಕ್' ಹಾಗೂ ಸಂತೋಷ್ ವಿಶ್ವನಾಥ್ ನಿರ್ದೇಶನದ 'ಒನ್' ಸಾಲಿನಲ್ಲಿದೆ.

  English summary
  Malayalam super star Mammootty has created new record in Filmfare award nomination.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X