For Quick Alerts
  ALLOW NOTIFICATIONS  
  For Daily Alerts

  ಮಂಜು ವಾರಿಯರ್ 50ನೇ ಸಿನಿಮಾ ಹೆಸರು '9ಎಂಎಂ'

  |

  ಮಲಯಾಳಂ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ ತಮ್ಮ 50ನೇ ಪ್ರಾಜೆಕ್ಟ್‌ಗೆ ಚಾಲನೆ ನೀಡಿದ್ದಾರೆ. ವೃತ್ತಿ ಜೀವನದ ಬಹಳ ವಿಶೇಷವಾದ ಚಿತ್ರಕ್ಕೆ ಟೈಟಲ್ ಸಹ ಅಂತಿಮ ಮಾಡಲಾಗಿದ್ದು, ದಸರಾ ಹಬ್ಬದ ಪ್ರಯುಕ್ತ ಅನಾವರಣ ಮಾಡಿದ್ದಾರೆ.

  ಮಂಜು ವಾರಿಯರ್ 50ನೇ ಚಿತ್ರಕ್ಕೆ '9 ಎಂಎಂ' ಎಂದು ಹೆಸರಿಟ್ಟಿದ್ದು, ಯುವ ಪ್ರತಿಭೆಗಳಾದ ಧ್ಯಾನ್ ಶ್ರೀನಿವಾಸನ್ ಮತ್ತು ಅಜು ವರ್ಗೀಸ್ ಕೈ ಜೋಡಿಸುತ್ತಿದ್ದಾರೆ.

  ಉನ್ನಿಕೃಷ್ಣನ್-ಮೋಹನ್ ಲಾಲ್ ಮುಂದಿನ ಚಿತ್ರದ ಬಜೆಟ್ ಎಷ್ಟು?ಉನ್ನಿಕೃಷ್ಣನ್-ಮೋಹನ್ ಲಾಲ್ ಮುಂದಿನ ಚಿತ್ರದ ಬಜೆಟ್ ಎಷ್ಟು?

  '9 ಎಂಎಂ' ಸಿನಿಮಾ ಸಂಪೂರ್ಣವಾಗಿ ಮನರಂಜನೆಯಿಂದ ಕೂಡಿದೆ. ಧ್ಯಾನ್ ಶ್ರೀನಿವಾಸನ್ ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದು, ಅಜು ವರ್ಗೀಸ್ ನಿರ್ಮಾಣ ಮಾಡುತ್ತಿದ್ದಾರೆ 'ಲವ್ ಆಕ್ಷನ್ ಡ್ರಾಮಾ' ಸಿನಿಮಾದ ಯಶಸ್ಸಿನ ನಂತರ ಧ್ಯಾನ್-ಅಜು ಕಾಂಬಿನೇಷನ್ನಲ್ಲಿ ಮತ್ತೊಂದು ಪ್ರಾಜೆಕ್ಟ್‌ ಶುರುವಾಗಿದೆ.

  ಮಂಜು ವಾರಿಯರ್ ಜೊತೆಗೆ ದಿಲೀಶ್ ಪೋಥನ್, ಸನ್ನಿ ವೇಯ್ನ್, ಮತ್ತು ಧ್ಯಾನ್ ಶ್ರೀನಿವಾಸನ್ ಸ್ವತಃ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಧಿನಿಲ್ ಬಾಬು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾ.

  ಕುರುಕ್ಷೇತ್ರ ಸಿನಿಮಾ ಮಾಡ್ತೀನಿ ಅಂತ ಬಂದಾಗ ಮುನಿರತ್ನನಿಗೆ ಬೈದು ಕಳ್ಸಿದ್ದೆ | Darshan | Munirathna

  ಸಿನಿಮಾ ನಿರ್ಮಾಪಕ ಅಜು ವರ್ಗೀಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದು, ತೀರಾ ಸಂತಸ ವ್ಯಕ್ತಪಡಿಸಿದ್ದಾರೆ. ಮಂಜು ವಾರಿಯರ್ ಅವರ 50ನೇ ಸಿನಿಮಾ ಎನ್ನುವ ಕಾರಣಕ್ಕೂ ಈ ಪ್ರಾಜೆಕ್ಟ್ ಬಹಳ ಕುತೂಹಲ ಮೂಡಿಸಿದೆ.

  English summary
  Malayalam Lady superstar Manju Warrier starts her 50th project with Dhyan Sreenivasan. the movie titled as a 9MM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X