twitter
    For Quick Alerts
    ALLOW NOTIFICATIONS  
    For Daily Alerts

    ಕೇರಳ ಪೂರ್ತಿ ಒಂದೇ ಸಿನಿಮಾ! ದಾಖಲೆ ಬರೆಯಲು ಸಜ್ಜಾದ 'ಮರಕ್ಕರ್'

    |

    ಮೋಹನ್‌ಲಾಲ್ ನಟನೆಯ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮರಕ್ಕರ್' ಹಲವು ಗೊಂದಲಗಳ ಬಳಿಕ, ಹಲವು ತಿಂಗಳ ಕಾಯುವಿಕೆ ಬಳಿಕ ಅಂತಿಮವಾಗಿ ಡಿಸೆಂಬರ್ 02ರಂದು ತೆರೆಗೆ ಬರಲು ಸಜ್ಜಾಗಿದೆ.

    2019ರಲ್ಲಿಯೇ ಸೆನ್ಸಾರ್ ಆಗಿ ಬಿಡುಗಡೆಗೆ ರೆಡಿಯಾಗಿದ್ದ ಈ ಸಿನಿಮಾ ಎರಡು ವರ್ಷಗಳ ಬಳಿಕ ಬಿಡುಗಡೆ ಆಗುತ್ತಿದೆ. ಬಿಡುಗಡೆ ತಡವಾದರೂ ಸಹ ಅದ್ಧೂರಿಯಾಗಿಯೇ ಬಿಡುಗಡೆ ಆಗುತ್ತಿದೆ.

    ಕೇರಳದಲ್ಲಿರುವ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿಯೂ 'ಮರಕ್ಕರ್' ಸಿನಿಮಾ ಬಿಡುಗಡೆ ಆಗುತ್ತಿದೆ. ಆ ಮೂಲಕ ದಾಖಲೆ ಪುಟವನ್ನು ಮೋಹನ್‌ಲಾಲ್ ನಟನೆಯ 'ಮರಕ್ಕರ್' ಸಿನಿಮಾ ಸೇರುತ್ತಿದೆ.

    ಡಿಸೆಂಬರ್ 02 ರಂದು 'ಮರಕ್ಕರ್' ಸಿನಿಮಾವು ಕೇರಳ ಒಂದರಲ್ಲಿಯೇ ಸುಮಾರು 3000 ಪ್ರದರ್ಶನ ಕಾಣಲಿದೆ. ಸಿನಿಮಾವೊಂದು ಮೊದಲ ದಿನವೇ ಇಷ್ಟೋಂದು ಪ್ರದರ್ಶನ ಕಂಡಿರುವುದು ಭಾರತದಲ್ಲಿಯೇ ಇದೇ ಮೊದಲ ಎನ್ನಲಾಗುತ್ತಿದೆ.

    ಫ್ಯಾನ್ಸ್ ಶೋ, ವಿಶೇಷ ಪ್ರದರ್ಶನ ಎಲ್ಲ ಸೇರಿಸಿ ಕೇರಳದಲ್ಲಿ ಡಿಸೆಂಬರ್ 02 ರಂದು 800ಕ್ಕೂ ಹೆಚ್ಚು ಮಾರ್ನಿಂಗ್ ಶೋಗಳಲ್ಲಿ 'ಮರಕ್ಕರ್' ಸಿನಿಮಾ ಪ್ರದರ್ಶನವಾಗುತ್ತಿದೆ. ಜೊತೆಗೆ 300 ಕ್ಕೂ ಹೆಚ್ಚು ನೈಟ್‌ ಶೋಗಳು ಸಹ ಪ್ರದರ್ಶನಗೊಳ್ಳಲಿವೆ. ಇವುಗಳ ಹೊರತಾಗಿ 2000ಕ್ಕೂ ಹೆಚ್ಚು ಸಾಮಾನ್ಯ ಶೋಗಳು ಸಹ ಇರಲಿವೆ.

    ಚಿತ್ರಮಂದಿರ ಪೂರ್ಣ ತೆರೆದಿಲ್ಲ

    ಚಿತ್ರಮಂದಿರ ಪೂರ್ಣ ತೆರೆದಿಲ್ಲ

    ಕೇರಳದಲ್ಲಿ ಚಿತ್ರಮಂದಿರಗಳು ಇನ್ನೂ ಪೂರ್ಣವಾಗಿ ತೆರೆದಿಲ್ಲ. ಚಿತ್ರಮಂದಿರಗಳು ಇನ್ನೇನು ತೆರೆಯಲಿವೆ ಎಂದುಕೊಳ್ಳುವಾಗಲೇ ಕೋವಿಡ್ ಹೊಸ ವೇರಿಯಂಟ್ ಆತಂಕ ಬಂದ ಕಾರಣ 50% ಆಕ್ಯುಪೆನ್ಸಿಯನ್ನೇ ಮುಂದುವರೆಸಲಾಗಿದೆ. ಇದರಿಂದ ಆಗಬಹುದಾದ ನಷ್ಟವನ್ನು ಸರಿತೂಗಿಸಲೆಂದು ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಲಾಗಿದೆ. ಕೇರಳ ಹೊರತುಪಡಿಸಿದರೆ ಗಲ್ಫ್ ರಾಷ್ಟ್ರಗಳಲ್ಲಿ ಮೋಹನ್‌ಲಾಲ್ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಅಲ್ಲಿಯೂ ಸಹ ದೊಡ್ಡ ಸಂಖ್ಯೆಯಲ್ಲಿ ಶೋಗಳನ್ನು ಆಯೋಜಿಸಲಾಗಿದೆ.

    ದುಪ್ಪಟ್ಟು ಅಡ್ವಾನ್ಸ್ ಹಣ ಪಡೆಯಲಾಗಿದೆ

    ದುಪ್ಪಟ್ಟು ಅಡ್ವಾನ್ಸ್ ಹಣ ಪಡೆಯಲಾಗಿದೆ

    ಇದು ಮಾತ್ರವೇ ಅಲ್ಲದೆ ಚಿತ್ರಮಂದಿರಗಳ ಮಾಲೀಕರು ಹಾಗೂ ವಿತರಕರಿಂದ ದುಪಟ್ಟು ಅಡ್ವಾನ್ಸ್ ಮೊತ್ತವನ್ನು ಸಹ ಪಡೆದುಕೊಳ್ಳಲಾಗಿದೆ. ಮೋಹನ್‌ಲಾಲ್‌ರ 'ಮರಕ್ಕರ್' ಸಿನಿಮಾಕ್ಕೆ ಕೇರಳದಲ್ಲಿ ಭಾರಿ ಕ್ರೇಜ್ ಇದ್ದು, ಅದೇ ಕಾರಣಕ್ಕೆ ಚಿತ್ರಮಂದಿರಗಳು, ವಿತರಕರಿಂದ ಹೆಚ್ಚು ಮೊತ್ತದ ಹಣ ಪಡೆದುಕೊಳ್ಳಲಾಗಿದೆ. ಈ ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಆಗಲಿದೆ ಎಂಬ ವಿಶ್ಲೇಷಣೆ ಈಗಾಗಲೇ ಕೇಳಿ ಬಂದಿದೆ.

    ಮಲಯಾಳಂನ ಮೊದಲ 100 ಕೋಟಿ ಬಜೆಟ್‌ನ ಸಿನಿಮಾ

    ಮಲಯಾಳಂನ ಮೊದಲ 100 ಕೋಟಿ ಬಜೆಟ್‌ನ ಸಿನಿಮಾ

    ಪ್ರಿಯದರ್ಶನ್ ನಿರ್ದೇಶನದ 'ಮರಕ್ಕರ್' ಸಿನಿಮಾ ಕೇರಳದ ಮೊದಲ 100 ಕೋಟಿ ಬಜೆಟ್ ಸಿನಿಮಾ ಆಗಿದೆ. ಹಾಗಾಗಿ ಈ ಸಿನಿಮಾದಲ್ಲಿ ಹಣ ಗಳಿಸುವುದು ನಿರ್ಮಾಪಕರರಿಗೆ ಅತ್ಯವಶ್ಯವಾಗಿದೆ. ಸಿನಿಮಾವನ್ನು ಒಟಿಟಿಯೊಂದಕ್ಕೆ ಭಾರಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು. ಆದರೆ ಕೇರಳದ ಚಿತ್ರಮಂದಿರ ಮಾಲೀಕರು, ವಿತರಕರ ಸಂಘ ಹಾಗೂ ಸರ್ಕಾರ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಸರ್ಕಾರವೇ ಮಧ್ಯ ಪ್ರವೇಶಿಸಿ 'ಮರಕ್ಕರ್' ಸಿನಿಮಾ ನಿರ್ಮಾಪಕ ಆಂಟೊನಿ ಪೆರುಂಬವೂರ್ ಹಾಗೂ ಮೋಹನ್‌ಲಾಲ್ ಅವರೊಟ್ಟಿಗೆ ಮಾತುಕತೆ ನಡೆಸಿ ಸಿನಿಮಾವು ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗುವಂತೆ ಮಾಡಿದ್ದಾರೆ. ಸಿನಿಮಾಕ್ಕೆ 100 ಕೋಟಿ ಬಂಡವಾಳ ಹಾಕಿದ್ದಲ್ಲದೆ ಎರಡು ವರ್ಷ ಕಾದಿದ್ದಾರೆ ನಿರ್ಮಾಪಕ ಆಂಟೊನಿ ಪೆರವಂಬೂರ್.

    ಕುಂಜಳಿ ಮರಕ್ಕರ್ ಕುರಿತಾದ ಸಿನಿಮಾ

    ಕುಂಜಳಿ ಮರಕ್ಕರ್ ಕುರಿತಾದ ಸಿನಿಮಾ

    'ಮರಕ್ಕರ್' ಸಿನಿಮಾವು ಕುಂಜಳಿ ಮರಕ್ಕರ್ ಜೀವನ ಕುರಿತಾದ ಕತೆಯಾಗಿದ್ದು, ಸಿನಿಮಾದಲ್ಲಿ ಮೋಹನ್‌ಲಾಲ್ ಕುಂಜಳಿ ಮರಕ್ಕರ್ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಬಾಲಿವುಡ್‌ನ ಸುನಿಲ್ ಶೆಟ್ಟಿ, ಅರ್ಜುನ್ ಸರ್ಜಾ ಸಹ ಸಿನಿಮಾದಲ್ಲಿದ್ದಾರೆ. ನಾಯಕಿಯಾಗಿ ಕೀರ್ತಿ ಸುರೇಶ್, ಸುಹಾಸಿನಿ ಅವರುಗಳು ಇದ್ದಾರೆ. ಸಿನಿಮಾವನ್ನು ಪ್ರಿಯದರ್ಶನ್ ನಿರ್ದೇಶನ ಮಾಡಿದ್ದು, ಸಿನಿಮಾವು ಮಲಯಾಳಂ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ.

    English summary
    Mohanlal starer Marakkar movie will have 3000 plus shows in Kerala only. Movie is releasing on December 02 world wide in theaters.
    Wednesday, December 1, 2021, 15:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X