twitter
    For Quick Alerts
    ALLOW NOTIFICATIONS  
    For Daily Alerts

    ಚರ್ಚೆ ಎಬ್ಬಿಸಿದ 'ಮಿನ್ನಲ್ ಮುರಲಿ' ಸಿನಿಮಾದ 'ಆ ಪದ': ಹೆದರಿಕೆ ಏಕೆಂದ ನೆಟ್ಟಿಗರು

    |

    ಮಲಯಾಳಂ ಸಿನಿಮಾ 'ಮಿನ್ನಲ್ ಮುರಲಿ' ಕೆಲವು ದಿನಗಳ ಹಿಂದಷ್ಟೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದು ಸಿನಿಮಾ ಬಗ್ಗೆ ಉತ್ತಮ ವಿಮರ್ಶೆ ಕೇಳಿ ಬರುತ್ತಿದೆ.

    ಟೊವಿನೊ ಥಾಮಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವು ಸೂಪರ್ ಹೀರೋ ಬಗೆಗಿನ ಕತೆ ಒಳಗೊಂಡಿದೆ. ಒಂದು ಹಳ್ಳಿಯಲ್ಲಿನ ಸೂಪರ್ ಹೀರೋ ಹಾಗೂ ಸೂಪರ್ ವಿಲನ್ ನಡುವೆ ನಡೆವ ಕತೆಯನ್ನು 'ಮಿನ್ನಲ್ ಮುರಲಿ' ಸಿನಿಮಾ ಒಳಗೊಂಡಿದೆ.

    ಸಿನಿಮಾದಲ್ಲಿ ನಾಯಕ ಟೊವಿನೊ ಥಾಮಸ್, ಜೇಸನ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದು, ಕನ್ನಡ ಸೇರಿದಂತೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಲಭ್ಯವಿದೆ. ಸಿನಿಮಾದ ಡಬ್ಬಿಂಗ್ ಚೆನ್ನಾಗಿ ಆಗಿದೆ ಎಂಬ ಒಳ್ಳೆಯ ಮಾತುಗಳು ಕೇಳಿ ಬಂದಿವೆಯಾದರೂ ಕೆಲವು ತಪ್ಪುಗಳನ್ನು ಸಹ ನೆಟ್ಟಿಗರು ಗುರುತಿಸಿದ್ದಾರೆ. ಅಲ್ಲದೆ ಮೂಲ ಮಲಯಾಳಂ ಸಿನಿಮಾದಲ್ಲಿ ಇರುವ ಒಂದು ಪದವನ್ನು ಬೇರೆ ಭಾಷೆಗಳಲ್ಲಿ ತಿರುಚಲಾಗಿರುವ ವಿಷಯ ಚರ್ಚೆಗೆ ಕಾರಣವಾಗಿದೆ.

    ಸಿನಿಮಾದಲ್ಲಿನ ಒಂದು ಪದ ಬದಲಾವಣೆ

    ಸಿನಿಮಾದಲ್ಲಿನ ಒಂದು ಪದ ಬದಲಾವಣೆ

    ಸಿನಿಮಾದ ಒಂದು ದೃಶ್ಯದಲ್ಲಿ ನಾಯಕ ಜೇಸನ್‌ಗೆ ಅವನ ಅಕ್ಕ ಊಟ ಬಡಿಸಲೇ ಎಂದು ಕೇಳುತ್ತಾಳೆ. ಅದಕ್ಕೆ ಜೇಸನ್ ಅಡುಗೆ ಏನು ಮಾಡಿದ್ದೀಯ ಎಂದು ಕೇಳುತ್ತಾನೆ ಅದಕ್ಕೆ ಜೇಸನ್‌ಳ ಅಕ್ಕ 'ಅಪ್ಪಂ ಮತ್ತು ಬೀಫ್ ಕರಿ' (ಮಲಯಾಳಂನಲ್ಲಿ) ಎನ್ನುತ್ತಾಳೆ. ಆದರೆ ಈ ಸಂಭಾಷಣೆ ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಬೀಫ್ ಬದಲಿಗೆ ಚಿಕನ್ ಎಂದು ಹಿಂದಿಯಲ್ಲಿ ಪನ್ನೀರ್ ಎಂದು ಬದಲಾವಣೆ ಮಾಡಲಾಗಿದೆ.

    ಕನ್ನಡ ಡಬ್ಬಿಂಗ್‌ನಲ್ಲಿ ಬದಲಾಗಿದೆ

    ಕನ್ನಡ ಡಬ್ಬಿಂಗ್‌ನಲ್ಲಿ ಬದಲಾಗಿದೆ

    ನೆಟ್‌ಫ್ಲಿಕ್ಸ್‌ನಲ್ಲಿ 'ಮಿನ್ನಲ್ ಮುರಲಿ' ಸಿನಿಮಾವನ್ನು ಮಲಯಾಳಂ ಹೊರತಾಗಿ ಬೇರೆ ಭಾಷೆಗಳಲ್ಲಿ ನೋಡುವಾಗ ಇಂಗ್ಲಿಷ್ ಸಬ್‌ ಟೈಟಲ್‌ನಲ್ಲಿ 'ಅಪ್ಪಂ ಮತ್ತು ಬೀಫ್ (ದನದ ಮಾಂಸ)' ಎಂದೇ ಇದೆ. ಆದರೆ ಧ್ವನಿ ಮಾತ್ರ 'ದೋಸೆ ಮತ್ತು ಚಿಕನ್ ಕರಿ ಇದೆ ಬಡಿಸ್ಲಾ' ಎಂದು ಬರುತ್ತದೆ. ಇದನ್ನು ಹಲವರು ಪ್ರಶ್ನೆ ಮಾಡಿದ್ದಾರೆ. ಮೂಲ ಸಿನಿಮಾದಲ್ಲಿ ಬೀಫ್ ಎಂದು ಇರುವಾಗ ಬೇರೆ ಭಾಷೆಗಳ ಡಬ್ಬಿಂಗ್‌ನಲ್ಲಿ ಅದನ್ನು ಬದಲಾಯಿಸಿದ್ದು ಏಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    ಜೆ ಮೂವೀಸ್‌ನ ಉತ್ತರ

    ಜೆ ಮೂವೀಸ್‌ನ ಉತ್ತರ

    ಸಿನಿಮಾಕ್ಕೆ ಬೇರೆ ಭಾಷೆಗಳ ಡಬ್ಬಿಂಗ್ ಮಾಡಿರುವ ಜೆ ಮೂವೀಸ್ ನೆಟ್ಟಿಗರ ಪ್ರಶ್ನೆಗೆ ಉತ್ತರ ನೀಡಿದ್ದು, ''ಮಿನ್ನಲ್ ಮುರಲಿ" ಮತ್ತು 'ಶಾಂಘ್ ಚೀ' ಸಿನಿಮಾಗಳ ಭಾರತೀಯ ಭಾಷೆಗಳ ಡಬ್ಬಿಂಗ್‌ನಲ್ಲಿ ನಾವು 'ಆ ಶಬ್ದ'ದ ಬದಲಿಗೆ ಪನ್ನೀರ್/ಚಿಕನ್ ಬಳಸಿದ್ದೇವೆ. ಕಾಂಟ್ರೊವರ್ಸಿ ಇಲ್ಲದ ಶುದ್ಧ ಮನರಂಜನೆ ಮತ್ತು ಸಾಧ್ಯವಾದಷ್ಟು 'localisation' ನಮ್ಮ ಆದ್ಯತೆ. ನಿಮ್ಮ ಸಹಕಾರ, ಪ್ರತಿಕ್ರಿಯೆ ಹೀಗೇ ಸಿಗುತ್ತಿರಲಿ ಎಂದು ಉತ್ತರಿಸಿದೆ. ಜೆ ಮೂವೀಸ್‌ನ ಈ ಉತ್ತರದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಕೆಲವು ನೆಟ್ಟಿಗರು ಬೀಫ್ ಅನ್ನು ಬೀಫ್ ಎಂದು ಕರೆಯಲು ಸಹ ಹೆದರಿಕೆ ಏಕೆ? ಸಿನಿಮಾ ಹೇಗಿರುತ್ತದೆಯೋ ಹಾಗೆ ಪ್ರೆಸೆಂಟ್ ಮಾಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.

    ಸಲಹೆ ನೀಡಿದ ನೆಟ್ಟಿಗರು

    ಸಲಹೆ ನೀಡಿದ ನೆಟ್ಟಿಗರು

    ''ಅತಿಯಾದ 'ಲೋಕಲೈಜೇಶನ್' ಬೇಡ ಸ್ವಾಮಿ, ಬಿಜೆಪಿ ಸರ್ಕಾರ ಇದೆ ಎಂದು 'ಆ ಶಬ್ದ' ಕಾಂಟ್ರೊವರ್ಸಿ ಎನ್ನುತ್ತಿದ್ದೀರ ಅಥವಾ ನೀವು ತಿನ್ನೊಲ್ಲ ಅನ್ನೋ ಕಾರಣಕ್ಕೆ ಆ ಪದ ಬಳಸುತ್ತಿಲ್ಲವಾ? ನಮ್ಮ ಕನ್ನಡಿಗರಲ್ಲೂ ದನ ತಿನ್ನೋರು ಇದ್ದಾರೆ ಅವರಿಗೆ ಅವಮಾನ ಮಾಡಬೇಡಿ. ಕಷ್ಟಪಟ್ಟು ಅವರು ಬರೆದ ಚಿತ್ರಕತೆ ಹಾಗೆಯೇ ಇರಲಿ, ನಿಮ್ಮ ಮನೆಯ ಊಟ ಸೇರಿಸಿ ಹಾಳು ಮಾಡಬೇಡಿ'' ಎಂದಿದ್ದಾರೆ ನೂತನ್ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು. 'ಇಷ್ಟೋಂದು ಮಡಿವಂತಿಕೆ ಬೇಡ' ಎಂದು ಸಲಹೆ ನೀಡಿದ್ದಾರೆ ಕೃಷ್ಣ ಹೆಸರಿನ ಟ್ವಿಟ್ಟರ್ ಬಳಕೆದಾರರು. 'ಪ್ರೇಮಂ' ಸಿನಿಮಾದಲ್ಲಿಯೂ ಬೀಫ್ ಬಗ್ಗೆ ಉಲ್ಲೇಖ ಇದೆ. ಆದರೆ ಆ ದೃಶ್ಯದ ಬಗ್ಗೆ ಯಾರೂ ತಕರಾರು ತೆಗೆದಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದ್ದಾರೆ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು.

    English summary
    Malayalam movie 'Munnal Murali' one word created debate on social media. J movies dubbed the movie in different language and it used word Chicken instead of Beef while dubbing.
    Monday, January 17, 2022, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X