For Quick Alerts
  ALLOW NOTIFICATIONS  
  For Daily Alerts

  ಶಾರೂಖ್, ಪ್ರೀತಿ ಜಿಂಟಾ ಬಳಿಕ ಮತ್ತೊಬ್ಬ ಸೂಪರ್ ಸ್ಟಾರ್ IPL ಅಖಾಡಕ್ಕೆ ಎಂಟ್ರಿ!

  |

  2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾಯಿತು. ಮೊದಲ ದಿನದಿಂದಲೂ ಬಾಲಿವುಡ್ ನಟ ಶಾರೂಖ್ ಖಾನ್, ನಟಿ ಪ್ರೀತಿ ಜಿಂಟಾ ಹಾಗು ಶಿಲ್ಪಾ ಶೆಟ್ಟಿ ವಿಶ್ವದ ದುಬಾರಿ ಟೂರ್ನಿಯಲ್ಲಿ ತೊಡಗಿಕೊಂಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಶಾರೂಖ್ ಖಾನ್, ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಪ್ರೀತಿ ಜಿಂಟಾ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಶಿಲ್ಪಾ ಶೆಟ್ಟಿ ಓನರ್ ಆಗಿದ್ದರು. ಈಗ ಶಿಲ್ಪಾ ಶೆಟ್ಟಿ ಈ ವ್ಯವಹಾರದಿಂದ ದೂರ ಉಳಿದಿದ್ದಾರೆ.

  ಕ್ರಿಕೆಟ್ ಆಟಗಾರರ ಜೊತೆ ಈ ಓನರ್‌ಗಳು ಸಹ ಪ್ರತಿ ಆವೃತ್ತಿಯಲ್ಲೂ ಗಮನ ಸೆಳೆಯುತ್ತಿದ್ದಾರೆ. ತಮ್ಮ ತಂಡಗಳು ಸೋತರು ಗೆದ್ದರೂ ಮೈದಾನಕ್ಕೆ ಬಂದು ಸಪೋರ್ಟ್ ಮಾಡುವ ಈ ಓನರ್‌ಗಳು ಪ್ರಮುಖ ಆಕರ್ಷಣೆಯೂ ಹೌದು. ಇದೀಗ, ಮತ್ತೊಬ್ಬ ಸೂಪರ್ ಸ್ಟಾರ್ ಐಪಿಎಲ್ ಅಖಾಡಕ್ಕೆ ಧುಮುಕುವ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಯಾರದು? ಮುಂದೆ ಓದಿ....

  ಐಪಿಎಲ್‌ನಲ್ಲಿ 9ನೇ ತಂಡ?

  ಐಪಿಎಲ್‌ನಲ್ಲಿ 9ನೇ ತಂಡ?

  ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಶಾರೂಖ್ ಖಾನ್ ಮತ್ತು ಪ್ರೀತಿ ಜಿಂಟಾ ತಂಡಗಳು ಸೇರಿದ ಏಂಟು ತಂಡಗಳಿವೆ. ಮುಂದಿನ ಆವೃತ್ತಿಯಲ್ಲಿ ಹೊಸದಾಗಿ ಒಂದು ತಂಡ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂಭತ್ತನೇ ತಂಡವನ್ನು ಸೌತ್ ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟರೊಬ್ಬರು ಖರೀದಿ ಮಾಡಲಿದ್ದಾರೆ ಎಂಬ ಸುದ್ದಿ ಕಳೆದು ಮೂರು ದಿನಗಳಿಂದ ಚರ್ಚೆಯಲ್ಲಿದೆ.

  ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?

  ಹೊಸ ತಂಡಕ್ಕೆ ಮೋಹನ್‌ ಲಾಲ್ ಓನರ್!

  ಹೊಸ ತಂಡಕ್ಕೆ ಮೋಹನ್‌ ಲಾಲ್ ಓನರ್!

  ಐಪಿಎಲ್ 2021ನೇ ಆವೃತ್ತಿಯಲ್ಲಿ ಹೊಸ ತಂಡ ಸೇರ್ಪಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ತಂಡವನ್ನು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಖರೀದಿ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೋಹನ್ ಲಾಲ್ ಜೊತೆ ಮೊಬೈಲ್ ಅಪ್ಲಿಕೇಷನ್ ಕಂಪನಿ ಬೈಜುಸ್ ಸಂಸ್ಥೆ ಸಹ ಹೊಸ ತಂಡ ಖರೀದಿಗೆ ಮುಂದಾಗಿದೆಯಂತೆ.

  ಐಪಿಎಲ್ ಫೈನಲ್‌ನಲ್ಲಿ ಮೋಹನ್ ಲಾಲ್ ಭಾಗಿ

  ಐಪಿಎಲ್ ಫೈನಲ್‌ನಲ್ಲಿ ಮೋಹನ್ ಲಾಲ್ ಭಾಗಿ

  ದುಬೈನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಲು ನಟ ಮೋಹನ್ ಲಾಲ್ ಆಗಮಿಸಿದ್ದರು. ವಿವಿಐಪಿಯ ವಿಶೇಷ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದರು. ಬೈಜುಸ್ ಮಾಲೀಕರ ಜೊತೆಯೋ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಐಪಿಎಲ್ 9ನೇ ತಂಡದ ಖರೀದಿಗಾಗಿ ಸಿದ್ಧತೆ ನಡೆಸಿದ್ದಾರೆ ಎಂಬ ವರದಿಗಳು ಪ್ರಕಟವಾಗಿದೆ.

  ನಾನು ಕರ್ಣ ಯಾವಾಗ್ಲೂ ರವಿ ಬೆಳಗೆರೆ ಹತ್ರ ಬೈಸಿಕೊಳ್ತಾ ಇದ್ವಿ ಎಂದ ರಾಕೇಶ್ ಅಡಿಗ
  ಅಧಿಕೃತ ಮಾಹಿತಿ ಇಲ್ಲ

  ಅಧಿಕೃತ ಮಾಹಿತಿ ಇಲ್ಲ

  ಏಂಟು ತಂಡಗಳ ಜೊತೆ ಈ ಹಿಂದೆ ಗುಜರಾತ್, ಪುಣೆ ಹಾಗೂ ಕೊಚ್ಚಿ ತಂಡಗಳು ಆಡಿದ್ದವು. ಈ ತಂಡಗಳ ಪೈಕಿ ಹೊಸ ತಂಡಕ್ಕೆ ಬಿಸಿಸಿಐ ಅನುಮತಿ ನೀಡಲು ಮುಂದಾಗಿದೆ. ಆ ತಂಡವನ್ನು ಮೋಹನ್ ಲಾಲ್ ಖರೀದಿ ಮಾಡಲು ಮನಸ್ಸು ಮಾಡಿದ್ದಾರಂತೆ. ಈ ಹಿಂದೆ ಸಲ್ಮಾನ್ ಖಾನ್ ಸಹೋದರರು ಸಹ ಐಪಿಎಲ್ ತಂಡ ಖರೀದಿ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ಸುದ್ದಿಯಾಗಿತ್ತು. ಸದ್ಯಕ್ಕೆ, ಮೋಹಲ್ ಲಾಲ್ ಹಾಗೂ ಐಪಿಎಲ್ ಕುರಿತಾದ ಸುದ್ದಿ ಅಧಿಕೃತವಾಗಿಲ್ಲ. ಇದು ನಿಜವೇ ಆದರೆ ಮಲಯಾಳಂ ನಟ ಯಾವ ತಂಡ ಖರೀದಿ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Malayalam Superstar Mohan lal buying new IPL team in next season says source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X