ಕಿಚ್ಚ ಸುದೀಪ್‌ಗೆ ಶುಭಕೋರಿದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್
ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ಅನೇಕರು ಶುಭಕೋರಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸಿರುವ ಸುದೀಪ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಭಾಷೆಯ ಗಡಿಮೀರಿ ಕರ್ನಾಟಕದಿಂದ ಆಚೆಯೂ ಸ್ಟಾರ್‌ಗಿರಿ ಕಾಪಾಡಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಸಿಲ್ವರ್ ಜ್ಯೂಬ್ಲಿ ಆಚರಿಸಿಕೊಳ್ಳುತ್ತಿರುವ ಸುದೀಪ್‌ಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಶುಭಾಶಯ ಕೋರಿದ್ದಾರೆ.
ಸುದೀಪ್ ಅವರಿಗಾಗಿ ವಿಡಿಯೋ ಸಂದೇಶ ರವಾನಿಸಿರುವ ಮೋಹನ್ ಲಾಲ್ ''ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವುದು ನಿಜಕ್ಕೂ ಅದ್ಭುತ ಸಾಧನೆ. ಸಿನಿಮಾ ಇಷ್ಟ ಪಡುವ ಕೋಟ್ಯಾಂತರ ಅಭಿಮಾನಿಗಳನ್ನು ರಂಜಿಸುವ ಕೆಲಸ ಮುಂದುವರಿಸಿ'' ಎಂದು ಹಾರೈಸಿದ್ದಾರೆ.
ವಿಶೇಷ ಅಂದ್ರೆ, ಚೊಚ್ಚಲ ಬಾರಿಗೆ ಮಲಯಾಳಂ ಸಿನಿಮಾದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಯಾವ ಸಿನಿಮಾ ಎನ್ನುವುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ, ಈ ಚಿತ್ರದಲ್ಲಿ ಸುದೀಪ್ ಕನ್ನಡದಲ್ಲಿಯೇ ಮಾತನಾಡಲಿದ್ದಾರೆ ಎಂದು ಖುದ್ದು ಸುದೀಪ್ ಮಾಹಿತಿ ನೀಡಿದ್ದಾರೆ.
ಇನ್ನು ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ 'ವಿಕ್ರಾಂತ್ ರೋಣ' ಚಿತ್ರತಂಡ ವಿಶ್ವವಿಖ್ಯಾತ ಗೌರವ ಸಮರ್ಪಣೆ ಮಾಡುತ್ತಿದೆ.

ಪ್ರಪಂಚ ಅತಿ ಎತ್ತರದ ಬುರ್ಜ್ ಖಲೀಫ ಕಟ್ಟಡದ ಮೇಲೆ ಸುದೀಪ್ ಅವರ ಕಟೌಟ್ ಪ್ರದರ್ಶನ ಮಾಡಲಾಗುತ್ತಿದೆ. ಇಂತಹ ಅಪರೂಪದ ದಾಖಲೆ ಮಾಡುತ್ತಿರುವ ಕೆಲವೇ ನಟರ ಪೈಕಿ ಸುದೀಪ್ ಸಹ ಒಬ್ಬರು ಎನ್ನುವುದು ಸ್ಯಾಂಡಲ್‌ವುಡ್ ಹೆಮ್ಮೆ.
ಮೋಹನ್ ಲಾಲ್ ಮಾತ್ರವಲ್ಲ ರಮ್ಯಾಕೃಷ್ಣ, ಪ್ರಿಯಾಮಣಿ, ಉಪೇಂದ್ರ ಸೇರಿದಂತೆ ಹಲವರು ವಿಡಿಯೋ ಮೂಲಕ ಸುದೀಪ್‌ಗೆ ಶುಭಕೋರಿದ್ದಾರೆ.


Click it and Unblock the Notifications











