For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ನಟ ಪೃಥ್ವಿರಾಜ್ ಚಿತ್ರಕ್ಕೆ ಕನ್ನಡದ ನಿರ್ದೇಶಕರು.!

  By Harshitha
  |

  ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ನಟ ಪೃಥ್ವಿರಾಜ್ ಸುಕುಮಾರನ್. 'ವಾಸ್ತವಂ', 'ಕ್ಲಾಸ್ ಮೇಟ್ಸ್', 'ಉರುಮಿ', 'ಸೆಲ್ಯುಲಾಯ್ಡ್' ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪೃಥ್ವಿರಾಜ್ ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಜನಪ್ರಿಯ.

  ಇಂತಿಪ್ಪ ಪೃಥ್ವಿರಾಜ್ ಸುಕುಮಾರನ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಕನ್ನಡತಿ ಆಕ್ಷನ್ ಕಟ್ ಹೇಳುತ್ತಿರುವುದು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿರುವ ಎಕ್ಸ್ ಕ್ಲೂಸಿವ್ ನ್ಯೂಸ್.

  ಕನ್ನಡ ಚಿತ್ರರಂಗದಲ್ಲಿ 15 ವರ್ಷಗಳಿಂದಲೂ ಸಕ್ರಿಯರಾಗಿರುವ ರೋಶಿನಿ ದಿನಕರ್ ಚೊಚ್ಚಲ ನಿರ್ದೇಶನದ ಮಲಯಾಳಂ ಚಿತ್ರದಲ್ಲಿ ನಟಿಸುವುದಕ್ಕೆ ಪೃಥ್ವಿರಾಜ್ ಸುಕುಮಾರನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ರೋಶಿನಿ ದಿನಕರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕಾಸ್ಟ್ಯೂಮ್ ಡಿಸೈನರ್ ಆಗಿ. ಟಿ.ಎಸ್.ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಚಿತ್ರದ ವಸ್ತ್ರ ವಿನ್ಯಾಸಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ಖ್ಯಾತಿ ಇವರದ್ದು.

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಪರ್ಸನಲ್ ಡಿಸೈನರ್ ಆಗಿರುವ ರೋಶಿನಿ ದಿನಕರ್, ಸೂಪರ್ ಹಿಟ್ ಸಿನಿಮಾಗಳಾದ 'ವಿಷ್ಣುವರ್ಧನ', 'ರಾಮ ಶಾಮ ಭಾಮ', 'ಬುಗುರಿ' ಮತ್ತು ಈಗ ರೆಡಿಯಾಗುತ್ತಿರುವ 'ಲವ್ ಯು ಆಲಿಯ', 'ಅಪೂರ್ವ', 'ಲಕ್ಷ್ಮಣ', 'ಮುಂಗಾರು ಮಳೆ-2' ಚಿತ್ರಗಳಿಗೆ ಬೊಂಬಾಟ್ ಕಾಸ್ಟ್ಯೂಮ್ಸ್ ತಯಾರು ಮಾಡಿದ್ದಾರೆ.

  ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನ ಖ್ಯಾತನಾಮ ನಟರಿಗೆ ವಸ್ತ್ರ ವಿನ್ಯಾಸ ಮಾಡಿರುವ ರೋಶಿನಿ ದಿನಕರ್, ಇದೀಗ ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡಲು ನಿರ್ಧರಿಸಿದ್ದಾರೆ.

  ಕಳೆದ ಎಂಟು ತಿಂಗಳಿನಿಂದ ತಾವೇ ರಚಿಸಿರುವ ಕಥೆಗೆ ಇದೀಗ ನಿರ್ದೇಶನದ ಜೊತೆ ನಿರ್ಮಾಣ ಮಾಡಲು ಹೊರಟಿದ್ದಾರೆ ರೋಶಿನಿ ದಿನಕರ್. ಮ್ಯೂಸಿಕಲ್ ಲವ್ ಸ್ಟೋರಿ ಆಗಿರುವ ಈ ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಶಾನ್ ರೆಹಮಾನ್ ಸ್ವರ ಸಂಯೋಜಿಸಿದ್ದಾರೆ.

  ಕನ್ನಡದ 'ನಮ್ ದುನಿಯಾ ನಮ್ ಸ್ಟೈಲ್', ಮಲಯಾಳಂನ 'ಹೋಟೆಲ್ ಕ್ಯಾಲಿಫೋರ್ನಿಯ', 'ಒರು ವಡಕ್ಕನ್ ಸೆಲ್ಫಿ' ಸೇರಿದಂತೆ ಅನೇಕ ಚಿತ್ರಗಳಿಗೆ ಸಂಗೀತ ನೀಡಿರುವ ಶಾನ್ ರೆಹಮಾನ್, ಈಗಾಗಲೇ ರೋಶಿನಿ ದಿನಕರ್ ನಿರ್ದೇಶಿಸಿರುವ ಈ ಪ್ರಾಜೆಕ್ಟ್ ಗೆ ಟ್ಯೂನ್ಸ್ ಕಂಪೋಸ್ ಮಾಡಿದ್ದಾಗಿದೆ.

  ಇನ್ನೂ ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಿಲ್ಲ. ಅರುಣ್ ನಾರಾಯಣ್ ಪ್ರಾಜೆಕ್ಟ್ ಡಿಸೈನರ್ ಆಗಿದ್ದರೆ, ಜೋಮೋನ್ ಕ್ಯಾಮರಾ ಹಿಡಿಯಲಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ಗೋಪಿ ಐಯ್ಯಂಗಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

  ನಾರ್ವೇ, ಸ್ವಿಝರ್ ಲ್ಯಾಂಡ್ ಸೇರಿದಂತೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್ ನಿಂದ ಶೂಟಿಂಗ್ ಶುರುವಾಗಲಿದ್ದು, ಪೃಥ್ವಿರಾಜ್ ಜೊತೆ ಡ್ಯುಯೆಟ್ ಹಾಡಲಿರುವ ಹೀರೋಯಿನ್ ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.

  ಕನ್ನಡ ಚಿತ್ರರಂಗದ ತೆರೆಮರೆಯಲ್ಲಿ ಸಾಧನೆ ಮಾಡಿರುವ ರೋಶಿನಿ ದಿನಕರ್ ಈಗ ಮಾಲಿವುಡ್ ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಅವರಿಗೆ ನಾವೂ ಶುಭ ಹಾರೈಸೋಣ.

  English summary
  Sandalwood's famous Costume Designer Roshini Dinakar is making her directorial debut in Mollywood. Actor Prithviraj Sukumaran is playing the lead role in the movie, which is all set to go on floors from October.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X