For Quick Alerts
  ALLOW NOTIFICATIONS  
  For Daily Alerts

  ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ಮಲಯಾಳಂ ಸುಂದರಿ ನಜ್ರಿಯಾ

  |

  ಮಲಯಾಳಂನ ಖ್ಯಾತ ನಟಿ ನಜ್ರಿಯಾ ನಜೀಮ್ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂ ನಲ್ಲಿ ಖ್ಯಾತಿಗಳಿಸಿದ್ದ ನಟಿ ನಜ್ರಿಯಾ ಮದುವೆ ಬಳಿಕ ಸಿನಿಮಾರಂಗದಿಂದ ದೂರ ಸರಿದ್ದರು. ಇದೀಗ ಮತ್ತೆ ಬಣ್ಣದ ಲೋಕದಲ್ಲಿ ಸಕ್ರೀಯರಾಗಿದ್ದು, ತೆಲುಗು ಸಿನಿಮಾಗೆ ಸಹಿ ಮಾಡುವ ಮೂಲಕ ತೆಲುಗು ಪ್ರೇಕ್ಷರನ್ನು ರಂಜಿಸಲು ಸಜ್ಜಾಗಿದ್ದಾರೆ.

  ಸಿನಿಮಾದಿಂದ ದೂರವಾಗಿದ್ದರು ನಟಿ ನಜ್ರಿಯಾ ದಕ್ಷಿಣ ಭಾರತೀಯ ಸಿನಿ ಪ್ರಿಯರ ಕ್ರಶ್ ಆಗಿ, ಸ್ಟೇಟಸ್, ಮೊಬೈಲ್ ವಾಲ್‌ಪೇಪರ್‌ಗಳಲ್ಲಿ ರಾರಾಜಿಸುತ್ತಿದ್ದರು. ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ನಜ್ರಿಯಾ ತೆಲುಗು ಸಿನಿಮಾ ಮಾಡುತ್ತಿರುವುದು ತೆಲುಗು ಪ್ರೇಕ್ಷಕರಿಗೆ ಸಂತಸ ತಂದಿದೆ.

  ಅಂದಹಾಗೆ ನಜ್ರಿಯಾ ಪತಿ ಫಹಾದ್ ಫಾಸಿಲ್ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಫಹಾದ್ ದಕ್ಷಿಣ ಭಾರತದ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಪತ್ನಿ ನಜ್ರಿಯಾ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಮುಂದೆ ಓದಿ...

  ಮೊದಲ ತೆಲುಗು ಸಿನಿಮಾದಲ್ಲಿ ನಜ್ರಿಯಾ

  ಮೊದಲ ತೆಲುಗು ಸಿನಿಮಾದಲ್ಲಿ ನಜ್ರಿಯಾ

  ಮೊದಲ ತೆಲುಗು ಸಿನಿಮಾದ ಬಗ್ಗೆ ನಟಿ ನಜ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರೀಕರಣ ಸೆಟ್ ಸೇರಿಕೊಂಡ ಸಂತಸವನ್ನು ಹಂಚಿಕೊಂಡಿದ್ದಾರೆ. 'ಎಲ್ಲರಿಗೂ ನಮಸ್ಕಾರ. ಇದು ನನ್ನ ಮೊದಲ ತೆಲುಗು ಸಿನಿಮಾ. ಮೊದಲು ಯಾವಾಗಲು ವಿಶೇಷವಾಗಿ ಇರುತ್ತೆ. ಅಂತೆ ಸುಂದರನಿಕಿ ಕೂಡ ವಿಶೇಷ' ಎಂದು ಬರೆದುಕೊಂಡಿದ್ದಾರೆ.

  ನಾನಿಗೆ ನಾಯಕಿಯಾದ ನಜ್ರಿಯಾ

  ನಾನಿಗೆ ನಾಯಕಿಯಾದ ನಜ್ರಿಯಾ

  ಅಂದಹಾಗೆ ನಜ್ರಿಯಾ ತೆಲುಗಿನ ಖ್ಯಾತ ನಟ ನಾನಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅಂತೆ ಸುಂದರನಿಕಿ ಎಂದು ಟೈಟಲ್ ಇಡಲಾಗಿದ್ದು, ಇದು ನಾನಿ ನಟನೆಯ 28ನೇ ಚಿತ್ರವಾಗಿದೆ. ನ್ಯಾಚುರಲ್ ಸ್ಟಾರ್‌ಗೆ ನಜ್ರಿಯಾ ಜೋಡಿಯಾಗಿರುವುದು ತೆಲುಗು ಅಭಿಮಾನಿಗಳಿಗೆ ಸಂತಸ ತಂದಿದೆ. ಚಿತ್ರದ ಚಿತ್ರೀಕರಣ ಸದ್ಯ ಹೈದರಾಬಾದ್‌ನಲ್ಲಿ ನಡೆಸುತ್ತಿದೆ.

  ಆಲ್ ದಿ ಬೆಸ್ಟ್ ಹೇಳಿದ ಪಾರ್ವತಿ, ಅನುಪಮಾ

  ಆಲ್ ದಿ ಬೆಸ್ಟ್ ಹೇಳಿದ ಪಾರ್ವತಿ, ಅನುಪಮಾ

  ನಜ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬಹಿರಂಗ ಪಡಿಸುತ್ತಿದ್ದಂತೆ ಮಲಯಾಳಂ ಸಿನಿಮಾ ತಾರೆಯರು ಅಭಿನಂದನೆ ಸಲ್ಲಿಸಿದ್ದಾರೆ. ನಟಿ ಪಾರ್ವತಿ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ. ಇನ್ನು ಅನುಪಮಾ ಪರಮೇಶ್ವರನ್ ಕಾಮೆಂಟ್ ಮಾಡಿ, ತೆಲುಗು ಚಿತ್ರರಂಗಕ್ಕೆ ಸ್ವಾಗತ ಕೋರಿದ್ದಾರೆ. ವಿಶೇಷ ಎಂದರೆ ಪತಿ ಫಹಾದ್ ಕೂಡ ಕಾಮೆಂಟ್ ಮಾಡಿ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.

  ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅನುಪ್ರಭಾಕರ್ | Filmibeat Kannada
  ಮದುವೆ ನಂತರ ಬಣ್ಣದ ಲೋಕದಿಂದ ದೂರ ಸರಿದಿದ್ದ ಸಜ್ರಿಯಾ

  ಮದುವೆ ನಂತರ ಬಣ್ಣದ ಲೋಕದಿಂದ ದೂರ ಸರಿದಿದ್ದ ಸಜ್ರಿಯಾ

  ಬಾಲಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಜ್ರಿಯಾ ಬಳಿಕ 2010ರಲ್ಲಿ ನಾಯಕಿಯಾಗಿ ಮಿಂಚುತ್ತಾರೆ. ಮಲಯಾಳಂ ಜೊತೆಗೆ 2013ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಾರೆ. ರಾಜ ರಾಣಿ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿದೆ. ಬಹು ಬೇಡಿಕೆ ಇರುವಾಗಲೇ 2014ರಲ್ಲಿ ನಟ ಫಹಾದ್ ಫಾಸಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಜ್ರಿಯಾ ಬಣ್ಣದ ಲೋಕದಿಂದ ದೂರ ಸರಿದಿದ್ದರು. 2019ರಲ್ಲಿ ಮತ್ತೆ ಚಿತ್ರರಂಗಕ್ಕೆ ವಾಪಸ್ ಆದ ನಜ್ರಿಯಾ ಎರಡು ಮಲಯಾಳಂ ಸಿನಿಮಾದಲ್ಲಿ ಮಿಂಚಿದ್ದಾರೆ.

  English summary
  Actress Nazriya nazim begins shooting Telugu Debut movie with Actor Nani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X