twitter
    For Quick Alerts
    ALLOW NOTIFICATIONS  
    For Daily Alerts

    ನಮ್ಮನ್ನು ಭಾರತಕ್ಕೆ ಕರೆತನ್ನಿ: ವಿದೇಶದ ಮರಳುಗಾಡಿನಲ್ಲಿ ಸಿಲುಕಿಕೊಂಡಿರುವ ನಟ ಪೃಥ್ವಿರಾಜ್ ಮನವಿ

    |

    ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಅವರ ಚಿತ್ರತಂಡ ಜೋರ್ಡಾನ್‌ನಲ್ಲಿ ಸಿಲುಕಿಕೊಂಡಿದ್ದು, ಅಲ್ಲಿ ಚಿತ್ರೀಕರಣ ನಡೆಸಲಾಗದೆ, ಭಾರತಕ್ಕೂ ಮರಳಲಾಗದೆ ಸಂಕಷ್ಟದಲ್ಲಿದೆ.

    ಬ್ಲೆಸ್ಸಿ ನಿರ್ದೇಶನದ 'ಆಡುಜೀವಿತಂ' ಚಿತ್ರದ ಚಿತ್ರೀಕರಣಕ್ಕಾಗಿ 58 ಜನರನ್ನು ಒಳಗೊಂಡ ಚಿತ್ರತಂಡ ಜೋರ್ಡಾನ್‌ಗೆ ತೆರಳಿತ್ತು. ಈಗ ಅಲ್ಲಿ ಚಿತ್ರೀಕರಣ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತಕ್ಕೆ ವಾಪಸ್ ಬರಲು ನೆರವು ನೀಡುವಂತೆ ಫಿಲಂ ಚೇಂಬರ್‌ಗೆ ಪೃಥ್ವಿರಾಜ್ ಮನವಿ ಮಾಡಿದ್ದಾರೆ.

    ಪೃಥ್ವಿರಾಜ್ ಹಾಗೂ ಇತರೆ ಕೆಲವು ಪ್ರಮುಖ ಕಲಾವಿದರನ್ನು ಒಳಗೊಂಡಿರುವ ಚಿತ್ರತಂಡ ಜೋರ್ಡಾನ್‌ನ ವಾದಿ ರಮ್‌ನಲ್ಲಿ ಕೆಲವು ವಾರಗಳಿಂದ 'ಆಡುಜೀವಿತಂ' ಚಿತ್ರದ ಎರಡನೆಯ ಹಂತದ ಚಿತ್ರೀಕರಣ ನಡೆಸಲಾಗುತ್ತಿತ್ತು. ಏಪ್ರಿಲ್ ಎರಡನೆಯ ವಾರದವರೆಗೂ ಅಲ್ಲಿ ಚಿತ್ರೀಕರಣ ಮುಂದುವರಿಸಲು ಅಧಿಕಾರಿಗಳು ಅನುಮತಿ ನೀಡಿದ್ದರು.

    ಅನುಮತಿ ವಾಪಸ್

    ಆದರೆ ಚಿತ್ರತಂಡದಲ್ಲಿದ್ದ ಒಮನ್ ಮೂಲದ ನಟ ಹಾಗೂ ಆಕೆಯ ದುಬಾಷಿ ಸಹಾಯಕ ಇಬ್ಬರನ್ನೂ ಕ್ವಾರಂಟೀನ್‌ಗೆ ಒಳಪಡಿಸಿದ್ದರಿಂದ ಮತ್ತು ಕೊರೊನಾ ವೈರಸ್ ಹರಡುವಿಕೆ ವ್ಯಾಪಕವಾಗಿದ್ದರಿಂದ ಚಿತ್ರೀಕರಣ ಪ್ರಕ್ರಿಯೆ ಮುಂದುವರಿಸಲು ನೀಡಲಾಗಿದ್ದ ಅನುಮತಿಯನ್ನು ಜೋರ್ಡಾನ್ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ.

    ಮರುಭೂಮಿಯಲ್ಲಿ ಸಿಕ್ಕಿಕೊಂಡ ತಂಡ

    ಮರುಭೂಮಿಯಲ್ಲಿ ಸಿಕ್ಕಿಕೊಂಡ ತಂಡ

    ಈಗ ಸಿನಿಮಾ ತಂಡ ಜೋರ್ಡಾನ್‌ನ ಮರುಭೂಮಿಯ ನಡುವೆ ಸಿಕ್ಕಿಕೊಂಡಿದೆ. ಮೊದಲು ಮಾರ್ಚ್ 24ರಂದು ಜೋರ್ಡಾನ್ ಸರ್ಕಾರ ತಾತ್ಕಾಲಿಕವಾಗಿ ಅನುಮತಿ ಸ್ಥಗಿತಗೊಳಿಸಿತ್ತು. ಅವರ ಸ್ಥಿತಿಗತಿ ಗಮನಿಸಿ, ಚಿತ್ರತಂಡ ಸಂಪೂರ್ಣವಾಗಿ ಪ್ರತ್ಯೇಕವಾಗಿರುವುದರಿಂದ ಚಿತ್ರೀಕರಣ ಮುಂದುವರಿಸಲು ಅವಕಾಶ ನೀಡಿತ್ತು. ಆದರೆ ಮಾರ್ಚ್ 27ರಂದು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಮತ್ತೆ ತಡೆಹಿಡಿಯಲಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣಕ್ಕೆ ಮತ್ತೆ ಅನುಮತಿ ಸಿಗುವುದು ಕಷ್ಟ. ಹೀಗಾಗಿ ನಮಗೆ ಇರುವ ಏಕೈಕ ದಾರಿಯೆಂದರೆ ಭಾರತಕ್ಕೆ ಬರುವುದು ಎಂದು ಪೃಥ್ವಿರಾಜ್ ಹೇಳಿದ್ದಾರೆ.

    ಎಲ್ಲ ವ್ಯವಸ್ಥೆ, ಸೌಕರ್ಯ ಒದಗಿಸಿದ್ದಾರೆ

    ಎಲ್ಲ ವ್ಯವಸ್ಥೆ, ಸೌಕರ್ಯ ಒದಗಿಸಿದ್ದಾರೆ

    ಇಲ್ಲಿ ನಮಗೆ ವಸತಿ, ಆಹಾರ ಇತರೆ ವ್ಯವಸ್ಥೆಗಳನ್ನು ಅಧಿಕಾರಿಗಳು ಚೆನ್ನಾಗಿ ಒದಗಿಸಿದ್ದಾರೆ. ಆದರೆ ಅದರಾಚೆಗೂ ಏನಾಗಬಹುದು ಎಂದು ಹೇಳಲಾಗದು. ಇದು ಕಳವಳದ ಸಂಗತಿ. ಪ್ರತಿ 72 ಗಂಟೆಗೆ ತಂಡದ ಪ್ರತಿಯೊಬ್ಬರ ಆರೋಗ್ಯವನ್ನು ತಪಾಸಣೆ ಮಾಡಲೆಂದೇ ಒಬ್ಬರು ವೈದ್ಯರನ್ನು ನಿಯೋಜಿಸಲಾಗಿದೆ.

    ಭಾರತಕ್ಕೆ ಮರಳಲು ಕಾಯುತ್ತಿದ್ದೇವೆ

    ಭಾರತಕ್ಕೆ ಮರಳಲು ಕಾಯುತ್ತಿದ್ದೇವೆ

    ನಮ್ಮ 58 ಜನರ ತಂಡದ ಬಗ್ಗೆ ಅಧಿಕಾರಿಗಳು ಅಷ್ಟೇನೂ ತಲೆಕೆಡಿಸಿಕೊಳ್ಳದೆ ಇರಬಹುದು. ಆದರೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಎಲ್ಲಾ ಸಂಬಂಧಿತರಿಗೆ ಮಾಹಿತಿ ನೀಡುತ್ತಿರುವುದು ನಮ್ಮ ಕರ್ತವ್ಯ. ಜಗತ್ತಿನಾದ್ಯಂತ ಸಾವಿರಾರು ಮಂದಿ ಭಾರತೀಯರು ಭಾರತಕ್ಕೆ ಬರಲು ಕಾಯುತ್ತಿದ್ದಾರೆ. ಸೂಕ್ತ ಸಮಯ ಹಾಗೂ ಅವಕಾಶ ಯಾವಾಗ ಸಿಗುತ್ತಿದೆ ಎಂದು ಕಾಯುತ್ತಿದ್ದೇವೆ. ನಾವೂ ಭಾರತಕ್ಕೆ ಬರಬಹುದು ಎಂದು ಪೃಥ್ವಿರಾಜ್ ಮನವಿ ಮಾಡಿದ್ದಾರೆ.

    English summary
    Actor Prithviraj Sukumaran's Malayalam movie Aadujeevitham team has stuck in Jordan due to coronavirus pandemic.
    Wednesday, April 1, 2020, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X