"ನೋವಿನ ವಿರುದ್ಧ ಹೋರಾಡುತ್ತೇನೆ ಎಂದು ಮಾತು ಕೊಡುತ್ತೇನೆ": ಗಾಯಗೊಂಡ ನಟ ಪೃಥ್ವಿರಾಜ್ ಭಾವನಾತ್ಮಕ ಪತ್ರ
ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ದಕ್ಷಿಣ ಭಾರತಕ್ಕೆ ತುಂಬಾನೇ ಚಿರಪರಿಚಿತ. ಮಲಯಾಳಂ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಸಿನಿಮಾಗಳ ವಿತರಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಪೃಥ್ವಿರಾಜ್ ಸುಕುಮಾರನ್ ವಿತರಣೆ ಮಾಡಿ ಗೆದ್ದಿದ್ದಾರೆ.
ಸದ್ಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಇದೇ ವೇಳೆ ಮಲಯಾಳಂ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ.

ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಸಿನಿಮಾ ವಿಲಾಯತ್ ಬುದ್ಧ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಲ್ಲಿ ನಟನ ಕಾಲಿಗೆ ಪೆಟ್ಟಾಗಿತ್ತು. ಇದು ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಈಗ ಸ್ವತ: ಪೃಥ್ವಿರಾಜ್ ಸುಕುಮಾರನ್ ಅವರೇ ಪತ್ರ ಬರೆದು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
"ಕಾಲಿಗೆ ಪೆಟ್ಟು ಬಿದ್ದಿದ್ದು ಸತ್ಯ"
ಪೃಥ್ವಿರಾಜ್ ಸುಕುಮಾರ್ ಕಾಲಿಗೆ ಬಿದ್ದಿರೋ ಸುದ್ಧಿ ಮಾಧ್ಯಮಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದು ಹಲವರ ಆತಂಕಕ್ಕೂ ಕಾರಣವಾಗಿತ್ತು. ಈ ಘಟನೆ ಸಂಭವಿಸಿದ ಕೆಲವೇ ದಿನಗಳ ಬಳಿಕ ಪೃಥ್ವಿರಾಜ್ ಸುಕುಮಾರ್ ತಮ್ಮ ಹಿತೈಶಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದು, ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಲಯಾಳಂ ಸಿನಿಮಾ 'ವಿಲಾಯತ್ ಬುದ್ಧ' ಸಿನಿಮಾದ ಶೂಟಿಂಗ್ ವೇಳೆ ಗಾಯಗೊಂಡಿದ್ದು ನಿಜ. ಸದ್ಯ ಆರೋಗ್ಯವಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ನೋವಿನ ವಿರುದ್ಧ ಹೋರಾಡಿ ಮತ್ತೆ ಮರಳುತ್ತೇನೆ ಎಂದು ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಶಿಗಳಿಗೆ ಭರವಸೆಯನ್ನು ನೀಡಿದ್ದಾರೆ.
"ನೋವಿನ ವಿರುದ್ಧ ಹೋರಾಡುತ್ತೇನೆ"
ಈ ಘಟನೆ ಬಳಿಕ ಪೃಥ್ವಿರಾಜ್ ಸುಮಾರನ್ ಎರಡು ತಿಂಗಳು ಯಾವುದೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುವುದಿಲ್ಲವೆಂದು ಖಚಿತ ಪಡಿಸಿದ್ದಾರೆ. ಸಂಪೂರ್ಣವಾಗಿ ಗುಣಮುಖರಾದ ಬಳಿಕವೇ ಚಿತ್ರೀಕರಣಕ್ಕೆ ಮರಳುವುದಾಗಿ ಪತ್ರ ಬರೆದು ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಹೌದು.. ವಿಲಾಯತ್ ಬುದ್ಧ ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ನನಗೆ ಅಪಘಾತವಾಗಿದ್ದು ನಿಜ. ಅದೃಷ್ಟವಶಾತ್, ನನಗೆ ಪರಿಣಿತ ತಜ್ಞರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೀಗ ನಾನು ಕೆಲವು ತಿಂಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದೇನೆ. ನನಗೆ ಫಿಸಿಯೋಥೆರಪಿ ಕೂಡ ನಡೆಯುತ್ತಿದೆ. ನಾನು ಸಂಪೂರ್ಣವಾಗಿ ಗುಣಮುಖರಾಗುವುದಕ್ಕೆ ನೋವಿನೊಂದಿಗೆ ಹೋರಾಡುತ್ತೇನೆಂದು ಭರವಸೆ ನೀಡುತ್ತೇನೆ. ಆದಷ್ಟು ಬೇಗ ಮತ್ತೆ ಹಿಂತಿರುಗುತ್ತೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದವರಿಗೆಲ್ಲರಿಗೂ ಧನ್ಯವಾದಗಳು" ಎಂದು ಪೃಥ್ವಿರಾಜ್ ಸುಕುಮಾರನ್ ಪತ್ರ ಬರೆದಿದ್ದಾರೆ.
ಸಿನಿಮಾಗಳ ಕಥೆಯೇನು?
ಪೃಥ್ವಿರಾಜ್ ಸುಕುಮಾರನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ 'ವಿಲಾಯತ್ ಬುದ್ಧ' ಸಿನಿಮಾದ ಚಿತ್ರೀಕರಣವನ್ನು ಮುಂದೂಡಲಾಗಿದೆ. ನಟ ಸಂಪೂರ್ಣವಾಗಿ ಚೇತರಿಕೆ ಕಾಣುವವರೆಗೂ ಶೂಟಿಂಗ್‌ಗೆ ಕಂಪ್ಲೀಟ್ ಬ್ರೇಕ್ ಬಿದ್ದಿದೆ. ಇದೇ ವೇಳೆ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಸದ್ಯ ಎಲ್ಲರ ಕಣ್ಣು ಪ್ರಭಾಸ್ ಜೊತೆ ನಟಿಸುತ್ತಿರುವ 'ಸಲಾರ್' ಸಿನಿಮಾ ಮೇಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಮುಖಾಮುಖಿಯನ್ನು ನೋಡುಬಹುದೆಂದು ನಿರೀಕ್ಷೆ ಮಾಡಲಾಗುತ್ತಿದೆ. 'ಸಲಾರ್' ಇದೇ ಸೆಪ್ಟೆಂಬರ್ 23ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
More from Filmibeat