For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ 'ಧೂಮಂ' ಶೂಟಿಂಗ್: ಫಹಾದ್ ಫಾಸಿಲ್ ಭೇಟಿ ಮಾಡಿದ ರಿಷಬ್ ಶೆಟ್ಟಿ!

  |

  'ಕೆಜಿಎಫ್ 2' ಹಾಗೂ 'ಕಾಂತಾರ' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಕರ್ನಾಟಕದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಎಲ್ಲಾ ಭಾಷೆಗಳಿಗೂ ಕೈ ಚಾಚುತ್ತಿದೆ. 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ.

  ಪವನ್ ಕುಮಾರ್ ನಿರ್ದೇಶಿಸುತ್ತಿರುವ ಮಲಯಾಳಂ ಸಿನಿಮಾ 'ಧೂಮಂ' ಶೂಟಿಂಗ್ ಕೆಲವು ದಿನಗಳ ಹಿಂದೆನೇ ಶುರುವಾಗಿತ್ತು. ಟೈಟಲ್‌ನಿಂದಲೇ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಪವನ್ ಹಾಗೂ ಫಹಾದ್ ಫಾಸಿಲ್ ಕಾಂಬಿನೇಷನ್‌ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಕೂಡ ಕಾದು ಕೂತಿದ್ದಾರೆ.

  "ಕಾಂತಾರ ತಂಡದವರು ನಮ್ಮೊಂದಿಗೆ ಸೌಜನ್ಯಕ್ಕೂ ಮಾತಾಡಿಲ್ಲ": ಥೈಕ್ಕುಡಂ ಬ್ರಿಡ್ಜ್ ಆರೋಪ!

  ಒಂದ್ಕಡೆ 'ಧೂಮಂ' ಅನ್ನೋ ಟೈಟಲ್. ಇನ್ನೊಂದ್ಕಡೆ ಪವನ್ ಕುಮಾರ್ ಡೈರೆಕ್ಷನ್. ಮತ್ತೊಂದ್ಕಡೆ ಫಹಾದ್ ಫಾಸಿಲ್ ಅನ್ನೋ ಅದ್ಭುತ ನಟ. ಎಲ್ಲಕ್ಕಿಂತ ಹೆಚ್ಚಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಆಗಿರುವುದರಿಂದ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಇದೇ ವೇಳೆ ರಿಷಬ್, ವಿಜಯ್ ಕಿರಗಂದೂರು ಇಬ್ಬರೂ ನಟ ಫಹಾದ್ ಫಾಸಿಲ್‌ರನ್ನು ಭೇಟಿಯಾಗಿದ್ದು ಮತ್ತಷ್ಟೂ ಕುತೂಹಲ ಕೆರಳಿಸಿದೆ.

  ಬೆಂಗಳೂರಿನಲ್ಲಿ 'ಧೂಮಂ'

  ಬೆಂಗಳೂರಿನಲ್ಲಿ 'ಧೂಮಂ'

  ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಸಿನಿಮಾ 'ಧೂಮಂ' ಶೂಟಿಂಗ್ ಭರದಿಂದ ಸಾಗಿದೆ. ಸದ್ಯ ಈ ಸಿನಿಮಾ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಸಂಬಂಧ ಮಲಯಾಳಂ ಹೀರೊ ಫಹಾದ್ ಫಾಸಿಲ್ ಬೆಂಗಳೂರಿನಲ್ಲಿದ್ದಾರೆ. ಈ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ 'ಕಾಂತಾರ' ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿರೋ ರಿಷಬ್ ಶೆಟ್ಟಿ 'ಧೂಮಂ' ಸಿನಿಮಾದ ಸೆಟ್ಟಿಗೆ ಭೇಟಿ ನೀಡಿದ್ದಾರೆ. ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ ಕೂಡ ಫಹಾದ್ ಫಾಸಿಲ್‌ರನ್ನು ಭೇಟಿ ಮಾಡಿದ್ದು ಸಂತಸದ ಕ್ಷಣಗಳನ್ನು ಕಳೆದಿದ್ದಾರೆ.

  'ಧೂಮಂ'ನಲ್ಲಿರೋ ಸ್ಟಾರ್‌ ಕಾಸ್ಟ್ ಯಾರು?

  'ಧೂಮಂ'ನಲ್ಲಿರೋ ಸ್ಟಾರ್‌ ಕಾಸ್ಟ್ ಯಾರು?

  ಲೂಸಿಯಾ ಪವನ್ ನಿರ್ದೇಶಿಸುತ್ತಿರುವ 'ಧೂಮಂ' ಸಿನಿಮಾದಲ್ಲಿ ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿ ನಟಿಸುತ್ತಿದೆ. ಕನ್ನಡದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕುತ್ತಿದ್ದಾರೆ. ಪ್ರೀತಾ ಜಯರಾಮನ್ ಕ್ಯಾಮರಾವರ್ಕ್ ಇದೆ.

  4 ಭಾಷೆಗಳಲ್ಲಿ 'ಧೂಮಂ'

  4 ಭಾಷೆಗಳಲ್ಲಿ 'ಧೂಮಂ'

  ಹೊಂಬಾಳೆ ಫಿಲ್ಮ್ಸ್ 'ಧೂಮಂ' ಸಿನಿಮಾವನ್ನು ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಕರ್ನಾಟಕದ ನಿರ್ಮಾಣ ಸಂಸ್ಥೆ ಆಗಿರುವುದರಿಂದ 'ಧೂಮಂ' ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುತ್ತಾರಾ? ಅಥವಾ ಕನ್ನಡದಲ್ಲಿಯೇ ಶೂಟ್ ಮಾಡುತ್ತಾರಾ? ಅನ್ನೋ ಪ್ರಶ್ನೆಯಂತೂ ಎದ್ದಿದೆ. ಇದಕ್ಕೆ ಸಿನಿಮಾ ಬಿಡುಗಡೆ ವೇಳೆ ಗೊತ್ತಾಗಬಹುದು.

  ಹೊಂಬಾಳೆ ನಿರ್ಮಾಣದ ಸಿನಿಮಾಗಳ್ಯಾವುವು?

  ಹೊಂಬಾಳೆ ನಿರ್ಮಾಣದ ಸಿನಿಮಾಗಳ್ಯಾವುವು?

  'ಧೂಮಂ' ಜೊತೆಗೆ ಹೊಂಬಾಳೆ ಮತ್ತೊಂದು ಮಲಯಾಳಂ ಸಿನಿಮಾಗೆ ಕೈ ಹಾಕಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ, ನಟಿಸುತ್ತಿರುವ 'ಟೈಸನ್' ಕೂಡ ಆರಂಭವಾಗಿದೆ. ಮಲಯಾಳಂನಲ್ಲಿಯೇ ಎರಡು ಸಿನಿಮಾ ನಿರ್ಮಾಣ ಮಾಡುತ್ತಿದೆ. ಇದರೊಂದಿಗೆ ಕನ್ನಡದಲ್ಲಿ ಶ್ರೀಮುರಳಿ ಅಭಿನಯದ 'ಬಘೀರ' ಶೂಟಿಂಗ್ ನಡೆಯುತ್ತಿದೆ. ಹಾಗೇ ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ರಿಚರ್ಡ್ ಆಂಟೋನಿ' ಅನೌನ್ಸ್ ಮಾಡಿದ್ದಾರೆ. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿ, ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಬಿಡುಗಡೆಗೆ ಸಜ್ಜಾಗಿದೆ. ತೆಲುಗಿನಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ 'ಸಲಾರ್' ಶೂಟಿಂಗ್ ನಡೆಯುತ್ತಿದೆ.

  English summary
  Rishab Shetty And Vijay Kiragandur Visited Fahad Fazil Movie Dhoomam Set, Know More.
  Thursday, November 24, 2022, 17:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X