For Quick Alerts
  ALLOW NOTIFICATIONS  
  For Daily Alerts

  ಹಿಂದಿ, ತೆಲುಗು, ತಮಿಳು ಹಿಟ್.. 'ಕಾಂತಾರ' ಮಲಯಾಳಂ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್: ಎಷ್ಟು ಶೋ ಸಿಕ್ಕಿದೆ.. ಹೇಗಿದೆ ರೆಸ್ಪಾನ್ಸ್?

  |

  ಇಡೀ ದೇಶದಲ್ಲೀಗ 'ಕಾಂತಾರ' ಸಿನಿಮಾ ಬಗ್ಗೆಯೇ ಬಿಸಿಬಿಸಿ ಚರ್ಚೆ ನಡೀತಿದೆ. ವಿಶ್ವದಾದ್ಯಂತ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಪರಭಾಷಾ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದು, ಹೊರರಾಜ್ಯಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತಿದೆ. ನಾಳೆ(ಅಕ್ಟೋಬರ್ 20) ಮಲಯಾಳಂ ಭಾಷೆಗೆ ಡಬ್ ಆಗಿ 'ಕಾಂತಾರ' ಕೇರಳದಲ್ಲಿ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

  ಸೆಪ್ಟೆಂಬರ್ 30ಕ್ಕೆ ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ಕನ್ನಡದಲ್ಲೇ ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಿತ್ತು. ಪರಭಾಷಾ ಪ್ರೇಕ್ಷಕರನ್ನು ಕೂಡ ರಂಜಿಸಿತ್ತು. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಕೊಂಡಾಡಿದ್ದರು. ನಮ್ಮ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ನಂತರ ಸಿನಿಮಾ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಆಗಿತ್ತು. ಅಕ್ಟೋಬರ್ 14ರಂದು 2500 ಸ್ಕ್ರೀನ್‌ಗಳಲ್ಲಿ ಹಿಂದಿ ವರ್ಷನ್ ರಿಲೀಸ್ ಆಗಿತ್ತು. ಅಕ್ಟೋಬರ್ 15ರಂದು ತೆಲುಗು, ತಮಿಳು ವರ್ಷನ್ ತೆರೆಗಪ್ಪಳಿಸಿ ಭರ್ಜರಿ ಓಪನಿಂಗ್ ಗಿಟ್ಟಿಸಿಕೊಂಡಿತ್ತು. ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲೂ ಹೊರ ರಾಜ್ಯಗಳಲ್ಲಿ 'ಕಾಂತಾರ' ಕಿಚ್ಚು ಜೋರಾಗಿದೆ.

  ಈ ಹಿಂದೆ KGF ಸರಣಿ ಸಿನಿಮಾಗಳಯ ಕೇರಳದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಒಳ್ಳೆ ಕಂಟೆಂಟ್ ಇರುವ ಸಿನಿಮಾವನ್ನು ಮಲಯಾಳಂ ಪ್ರೇಕ್ಷಕರು ಕೈ ಹಿಡಿಯುತ್ತಾರೆ. ಯಶ್‌ಗೆ ಕೇರಳದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಈಗಾಗಲೇ ಕನ್ನಡದಲ್ಲೇ 'ಕಾಂತಾರ' ಸಿನಿಮಾ ನೋಡಿರುವ ಮಲಯಾಳಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ಅವರದ್ದೇ ಭಾಷೆಯಲ್ಲಿ ನೋಡುವ ಅವಕಾಶ ಸಿಗುತ್ತಿದೆ.

  ಕೊಚ್ಚಿ 48 ಶೋ, ತಿರುವನಂತಪುರಂ 22 ಶೋ

  ಕೊಚ್ಚಿ 48 ಶೋ, ತಿರುವನಂತಪುರಂ 22 ಶೋ

  'ಕಾಂತಾರ' ಕ್ರೇಜ್ ನೋಡಿ ಎಲ್ಲಾ ಕಡೆ ದೊಡ್ಡಮಟ್ಟದಲ್ಲೇ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಕೇರಳದಲ್ಲೂ ಪ್ರೇಕ್ಷಕರು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಮೊದಲ ದಿನ ಕೊಚ್ಚಿಯಲ್ಲಿ 48 ಶೋ, ತಿರುವನಂತಪುರಂ 22 ಶೋಗಳು ಸಿಕ್ಕಿದೆ. ಇನ್ನು ಬೇರೆ ನಗರಗಳಲ್ಲೂ ಇದೇ ರೀತಿ ಸಿನಿಮಾ ರಿಲೀಸ್ ಆಗ್ತಿದೆ. ಕನ್ನಡದ ಮೀಡಿಯಂ ಬಜೆಟ್ ಚಿತ್ರವೊಂದು ಕೇರಳದಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವುದು ವಿಶೇಷ.

  'ಕಾಂತಾರ' ಮಲಯಾಳಂ ಟಿಕೆಟ್ ಬುಕ್ಕಿಂಗ್ ಶುರು

  'ಕಾಂತಾರ' ಮಲಯಾಳಂ ಟಿಕೆಟ್ ಬುಕ್ಕಿಂಗ್ ಶುರು

  ಕೇರಳದಲ್ಲಿ ಪ್ರೇಕ್ಷಕರು 'ಕಾಂತಾರ' ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಸಿನಿಮಾ ಬಗ್ಗೆ ಮಾತನಾಡುತ್ತಿದೆ. ಬುಕ್‌ಮೈ ಶೋ ಹಾಗೂ IMDbನಲ್ಲಿ ಈ ಹಿಂದೆ ಯಾವುದೇ ಚಿತ್ರಕ್ಕೂ ಸಿಗದಷ್ಟು ರೇಟಿಂಗ್ ಡಿವೈನ್ ಬ್ಲಾಕ್‌ಬಸ್ಟರ್ 'ಕಾಂತಾರ'ಕ್ಕೆ ಸಿಕ್ಕಿದೆ. ಹಾಗಾಗಿ ಸಹಜವಾಗಿಯೇ ಮಲಯಾಳಂ ಪ್ರೇಕ್ಷಕರ ಕಾತರದಿಂದ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್‌ ಮಾಡ್ತಿದ್ದಾರೆ. ಕೊಚ್ಚಿಯಲ್ಲಿ ಕೆಲ ಶೋಗಳು ಫಾಸ್ಟ್‌ಫಿಲ್ಲಿಂಗ್ ಆಗ್ತಿದೆ. ಆ ಮೂಲಕ ಕೇರಳದಲ್ಲೂ ಸಿನಿಮಾ ಸೂಪರ್ ಹಿಟ್ ಆಗುವ ಸುಳಿವು ಸಿಕ್ತಿದೆ.

  ಪೃಥ್ವಿರಾಜ್ ಸುಕುಮಾರನ್ ಸಿನಿಮಾ ವಿತರಣೆ

  ಪೃಥ್ವಿರಾಜ್ ಸುಕುಮಾರನ್ ಸಿನಿಮಾ ವಿತರಣೆ

  ಮಾಲಿವುಡ್‌ನ ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ 'ಕಾಂತಾರ' ಮಲಯಾಳಂ ವರ್ಷನ್ ವಿತರಣೆ ಹಕ್ಕು ಕೊಂಡಿಕೊಂಡಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲಿ ಪ್ರಮೋಷನ್ ರಿಲೀಸ್ ನಡೀತಿದೆ. ಪೃಥ್ವಿರಾಜ್ ನಿರ್ಮಾಣದ 'ಟೈಸನ್' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಪ್ರಭಾಸ್- ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಸಲಾರ್' ಚಿತ್ರದಲ್ಲೂ ಪೃಥ್ವಿ ಬಣ್ಣ ಹಚ್ಚಿದ್ದಾರೆ.

  ಹಿಂದಿ, ತೆಲುಗು, ತಮಿಳು ವರ್ಷನ್ ಹಿಟ್

  ಹಿಂದಿ, ತೆಲುಗು, ತಮಿಳು ವರ್ಷನ್ ಹಿಟ್

  ಎಲ್ಲೆಡೆ 'ಕಾಂತಾರ' ಚಿತ್ರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಸಿನಿಮಾ ಒಟ್ಟಾರೆ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಹಿಂದಿ, ತೆಲುಗು, ತಮಿಳು ವರ್ಷನ್ ಹಿಟ್ ಲಿಸ್ಟ್ ಸೇರಿದೆ. ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲೂ ಪರಭಾಷಿಕರು ಕನ್ನಡ ಸಿನಿಮಾ ನೋಡಲು ದೊಡ್ಡಸಂಖ್ಯೆಯಲ್ಲಿ ಥಿಯೇಟರ್‌ಗಳಿಗೆ ಬರ್ತಿದ್ದಾರೆ. ಪರಿಣಾಮ ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಹೆಚ್ಚಾಗುತ್ತಿದೆ.

  English summary
  Rishab Shetty Starrer Kantara Malayalam Bookings Open now Movie having Good bookings in Kerala. Prithviraj Productions will present the film in theatres in Kerala.
  Wednesday, October 19, 2022, 9:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X