X
ಹಫ್ತಾ

ಹಫ್ತಾ

Action | Crime | Thriller | 21 Jun 2019 |
Kannada

2.5 /5 Users

0 /5 Filmibeat

ಹಫ್ತಾ ಕಥೆ

ಹಿನ್ನಲೆ - ಪ್ರಕಾಶ್ ಹೆಬ್ಬಾಳ ನಿರ್ದೇಶನದಲ್ಲಿ ಮೂಡಿಬಂದಿರುವ ಕ್ರೈಮ್ ಥ್ರಿಲ್ಲರ್ ಚಿತ್ರ `ಹಫ್ತಾ' ದಲ್ಲಿ ವರ್ಧನ್ ತೀರ್ಥಹಳ್ಳಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಬಿಂಬಶ್ರೀ ನೀನಾಸಂ ಚಿತ್ರದ ನಾಯಕಿಯಾಗಿದ್ದರೆ, ಸೌಮ್ಯ, ರಾಘವ ನಾಗ್, ರಾಜಾ ಬಲ್ವಾಡಿ ಇನ್ನಿತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ವಿಜಯ್ ಯಾರ್ಡ್ಲಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಭೂಗತ ಲೋಕದ ಕಥಾನಕವುಳ್ಳ ಈ ಚಿತ್ರದಲ್ಲಿ ವರ್ಧನ್ ಶಾರ್ಪ್  ಶೂಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಲ್ದೇ ಮಂಗಳಮುಖಿ ಪಾತ್ರದಲ್ಲಿ ಕೂಡ ಮಿಂಚಿದ್ದಾರೆ.ಮೈತ್ರಿ ಮಂಜುನಾಥ್ ತಮ್ಮ ಮೈತ್ರಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ . ಕಥೆ - ಈ ಸಿನಿಮಾ ಕಥೆ ನಡೆಯುವುದು ಕಡಲ ತೀರದ ಭೂಗತ ಲೋಕದಲ್ಲಿ. ದುಡ್ಡಿಗಾಗಿ ಯಾವುದೇ ಸೆಂಟಿಮೆಂಟ್ ಇಲ್ಲದೇ ಎದುರಲ್ಲಿ ಇರೋದು ಯಾರೇ ಆಗಲಿ ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ಶಾರ್ಪ್ ಶೂಟರ್ಸ್ ಕುಡ್ಲ ಅಲಿಯಾಸ್ ಕೃಷ್ಣ ಮತ್ತು ಶಂಕರ್ ಯರವಾಡ. ಇವರಿಬ್ಬರಿಗೂ ಯಾವುದೇ ಗುರಿ ಇಲ್ಲ, ಸಂಬಂಧಗಳಿಲ್ಲ, ಭಾವನೆಗಳಲ್ಲಿ ಹಫ್ತಾ ವಸೂಲಿ ಮಾಡೋದೊಂದೆ ಕಾಯಕ. ಇಂತವರ ಎದುರು ಹಾಕಿಕೊಂಡವನು ಪಾಂಡೆ. ಇವರಿಬ್ಬರ ನಡುವಿನ ಏಟು-ಏದಿರೇಟು ಈ ಚಿತ್ರದ ಸಾಮಾನ್ಯ ಕಥೆ.
Read More

ಹಫ್ತಾ ಕಲಾವಿದರು ಮತ್ತು ಸಿಬ್ಬಂದಿ

ಹಫ್ತಾ ಕ್ರೂ ಮಾಹಿತಿ

ನಿರ್ದೇಶಕ ಪ್ರಕಾಶ್ ಹೆಬ್ಬಾಳ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿಜಯ್ ಯಾರ್ಡ್ಲಿ
ನಿರ್ಮಾಪಕ ಮೈತ್ರಿ ಮಂಜುನಾಥ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಹಫ್ತಾ ವಿಮರ್ಶಕರ ವಿಮರ್ಶೆ

ವಸೂಲಿ ಜಗತ್ತಿನಲ್ಲಿ ಕೊಲ್ಲುವುದು ಮಾಮೂಲಿ
ಸಿನಿಮಾ ಕಂಪ್ಲೀಟ್ ಆಕ್ಷನ್ ಪ್ಯಾಕೇಜ್. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಗನ್ ಸೌಂಡ್ ಕೇಳುತ್ತಲೇ ಇರುತ್ತೆ. ರೌಡಿಗಳ ಅಟ್ಟಹಾಸ, ಕ್ರಿಮಿನಲ್ ಕೆಲಸಗಳು, ಅವರನ್ನ ಮಟ್ಟ ಹಾಕಲು ಪೊಲೀಸರ ಪ್ರಯತ್ನ, ದಾಳಿ-ಪ್ರತಿ ದಾಳಿ ಹೀಗೆ ಎರಡು ಗ್ಯಾಂಗ್ ನಡುವೆ ವಾರ್ ಇದು ಸಾಮಾನ್ಯ. ಇದರ ನಡುವೆ ಕಥೆಗೆ ಟ್ವಿಸ್ಟ್ ಕೊಡುವ ಒಂದು ಲವ್ ಸ್ಟೋರಿ. ಎಲ್ಲ ರೆಗ್ಯುಲರ್ ಚಿತ್ರಗಳಲ್ಲೂ ಇದು ಕಾಣುವ ಅಂಶಗಳೇ. ಹೆಚ್ಚಾಗಿ ಹೇಳಲೇಬೇಕು ಎನ್ನುವ ಅಂಶ ಇಲ್ಲಿಲ್ಲ. ನಿರ್ದೇಶಕ ಪ್ರಕಾಶ್ ಹೆಬ್ಬಾಳ, ರೆಗ್ಯುಲರ್ ಕಥೆಯಾದರೂ ಚಿತ್ರಕಥೆಯಲ್ಲಿ ಫ್ಲಾಶ್ ಬ್ಯಾಕ್, ಟ್ವಿಸ್ಟ್ ಇಟ್ಟು ಕೊನೆಯವರೆಗೂ ಥ್ರಿಲ್ ಆಗಿ ನೋಡಲಿ ಎಂಬ ಬುದ್ದಿವಂತಿಕೆ ಮರೆದಿದ್ದಾರೆ. ಕೆಲವೇ ಸ್ಥಳದಲ್ಲಿ ಚಿತ್ರೀಕರಣವಾಗಿರುವ ಕಾರಣ ಮತ್ತೆ ಮತ್ತೆ ಅದೇ ದೃಶ್ಯಗಳನ್ನ ತೋರಿಸಿದ್ದಾರೆ. ಹಾಡುಗಳ ಬಗ್ಗೆ ನೋ ಕಾಮೆಂಟ್ಸ್. ಹಿನ್ನಲೆ ಸಂಗೀತ ಓಕೆ. ವರ್ಧನ್ ತೀರ್ಥಹಳ್ಳಿ, ರಾಘವ್ ನಾಗ್, ಬಿಂಬಶ್ರೀ, ದಶಾವರ ಚಂದ್ರು, ಸೌಮ್ಯ ತಿತೀರ, ಬಾಲ್ ರಾಜ್ ವಾಡಿ, ಉಗ್ರಂ ರವಿ ಎಂಬ ಕಲಾವಿದರ ಅಭಿನಯದಿಂದ ಹಫ್ತಾ ಸಮಾಧಾನ ತಂದಿದೆ.

ಹಫ್ತಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಹಫ್ತಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+