For Quick Alerts
  ALLOW NOTIFICATIONS  
  For Daily Alerts

  ದಾಖಲೆ ಮಾರಾಟದತ್ತ ದರ್ಶನ್ ಚಿಂಗಾರಿ ಆಡಿಯೋ

  |

  ಕಳೆದ ಜನವರಿ 2ರಂದು ಬಿಡುಗಡೆಯಾದ ಚಿಂಗಾರಿ ಚಿತ್ರದ ಆಡಿಯೋ ಸಿಡಿ ಭರ್ಜರಿ ಮಾರಾಟ ಕಂಡಿದೆ. ಅಶ್ವಿನಿ ಆಡಿಯೋದಿಂದ ಬಂದಿರುವ ಸುದ್ದಿಯ ಪ್ರಕಾರ ಬಿಡುಗಡೆಯಾದ ಮರುದಿನವೇ ದಾಖಲೆ ಮಟ್ಟದಲ್ಲಿ ಸಿಡಿ ಮಾರಾಟವಾಗಿದ್ದು ಚಿತ್ರತಂಡ ಹಾಗೂ ಅಶ್ವಿನಿ ಆಡಿಯೋಕ್ಕೆ ಸಂತಸ ತಂದಿದೆ.

  ಸಾರಥಿಯ ಯಶಸ್ಸೇ ಈ ಎಲ್ಲಾ ಬೆಳವಣಿಗೆಗೆ ಕಾರಣ ಎಂಬುದು ಎಲ್ಲರ ಅಭಿಪ್ರಾಯ. ದರ್ಶನ್ ಮೊದಲಿನ ಚಿತ್ರಗಳ ಆಡಿಯೋ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ರೀತಿಯಲ್ಲಿ ಚಿಂಗಾರಿ ಆಡಿಯೋ ಭರ್ಜರಿ ಸೇಲ್ಸ್ ಕಂಡಿದೆ. ಸದ್ಯದಲ್ಲೇ ಅಶ್ವಿನಿ ಆಡಿಯೋ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಿದೆ.

  ದರ್ಶನ ಅಭಿನಯ, ಎ ಹರ್ಷ ನಿರ್ದಶನದ ಚಿಂಗಾರಿ ಚಿತ್ರ ಸ್ಯಾಂಡಲ್ ವುಡ್ ನ ಈ ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾಗುತ್ತಿರುವ ಅದ್ದೂರಿ ಹಾಗೂ ಬಹುನಿರೀಕ್ಷಿತ ಚಿತ್ರ. ನೂರುದಿನದ ಸಂಭ್ರಮಕ್ಕೆ ಇನ್ನೊಂದೇ ದಿನ ಬಾಕಿಯಿರುವ ಸಾರಥಿ 'ಯಶಸ್ಸು' ಚಿಂಗಾರಿಗೆ ಗ್ರಾಂಡ್ ಓಪನಿಂಗ್ ನೀಡಲಿರುವುದು ಗ್ಯಾರಂಟಿ.

  ಅದಕ್ಕೂ ಮಿಗಿಲಾಗಿ ನಿರ್ದೇಶಕ ಹರ್ಷ ಚಿಂಗಾರಿ ಚಿತ್ರವನ್ನು ಚೆನ್ನಾಗಿ ಮಾಡಿರುವ ಆತ್ಮವಿಶ್ವಾಸದಲ್ಲಿದ್ದಾರೆ. ನಿರ್ಮಾಪಕರಾದ ಮಹಾದೇವ್ ಹಾಗೂ ಮನು ಗೌಡ ಕೂಡ ಚಿಂಗಾರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದಿದ್ದಾರೆ. ಇನ್ನೇನು ಜನವರಿ 27ಕ್ಕೆ ಬಿಡುಗಡೆಯಾಗಲಿದೆ ಚಿಂಗಾರಿ. ದರ್ಶನ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಜೊತೆಗೆ ಕನ್ನಡ ಚಿತ್ರರಂಗಕ್ಕೆ ಶುಕ್ರದೆಸೆ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

  English summary
  Challenging Star Darshan movie Chingari Audio CD became Grand Success. Only one day after the release, it got very good response in the market as Ashwini Audio revealed. 
 
  Wednesday, January 4, 2012, 15:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X