»   »  ವಾಯ್ಸ್ ಆಫ್ ಬೆಂಗಳೂರು ಸೀಸನ್ 3

ವಾಯ್ಸ್ ಆಫ್ ಬೆಂಗಳೂರು ಸೀಸನ್ 3

Posted By:
Subscribe to Filmibeat Kannada

ಗರುಡಾ ಮಾಲ್‌ನ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ರೇಡಿಯೋ ಸಿಟಿ ಸಹಯೋಗದಲ್ಲಿ ವಾಯ್ಸ್ ಆಫ್ ಬೆಂಗಳೂರು ಸೀಸನ್-3' ಬೃಹತ್ ಪ್ರತಿಭಾ ಶೋಧಕಾರ್ಯಕ್ರಮ ಆರಂಭವಾಗಿದೆ.

ಅತ್ಯುತ್ತಮ ಧ್ವನಿ ಶೋಧದ ಈ ಮೆಗಾ ಮ್ಯೂಸಿಕಲ್ ಶೋ ಅ.10ರವರೆಗೆ ನಡೆಯಲಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಬೆಂಗಳೂರಿನ ಉತ್ತಮ ಗಾಯಕರನ್ನು ಒಟ್ಟಿಗೆ ತರಲುಇದು ಉತ್ತಮ ವೇದಿಕೆಯಾಗಿದೆ. ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ವೃತ್ತಿಜೀವನ ಪಡೆದುಕೊಳ್ಳಲು ಇದು ಆರಂಭಿಕ ಅವಕಾಶ. ಈ ಶೋ ಮ್ಯೂಸಿಕ್ ಉದ್ಯಮದ ಖ್ಯಾತ ಕಲಾವಿದರ ಸಂಪೂರ್ಣ
ನೆರವು ಪಡೆದುಕೊಂಡಿದೆ.

ವಾಯ್ಸ್ ಆಫ್ ಬೆಂಗಳೂರು 3' ತನ್ನ 3ನೇ ಸೀಸನ್ ಆರಂಭದೊಂದಿಗೆ ಮೆಗಾ ಮ್ಯೂಸಿಕ್ ಆಲ್ಬಂ ಮನಸು' ಅನ್ನು ಬಿಡುಗಡೆ ಮಾಡಲಾಯಿತು. ಚಲನಚಿತ್ರ ನಿರ್ದೇಶಕ ಯೋಗರಾಜ ಭಟ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು. ವಾಯ್ಸ್ ಆಫ್ ಬೆಂಗಳೂರು ಸೀಸನ್ 1 ಮತ್ತು 2 ವಿಜೇತರು ಕನ್ನಡ ಚಿತ್ರಗೀತೆಗಳನ್ನು ಹಾಡುವ ಅವಕಾಶ ಪಡೆದುಕೊಂಡಿದ್ದಾರೆ.

ವಾಯ್ಸ್ ಆಫ್ ಬೆಂಗಳೂರು-3ನಲ್ಲಿ ಭಾಗವಹಿಸಲು ಮೆಗ್ರಾತ್ ರಸ್ತೆ-ಗರುಡಾ ಮಾಲ್ ಮತ್ತು ಜಯನಗರ-ಗರುಡಾ ಸ್ವಾಗತ್ ಮಾಲ್‌ಗೆ ಭೇಟಿ ನೀಡಿ ಹಾಗೂ ಹೆಲ್ಪ್ ಡೆಸ್ಕ್‌ನಿಂದ ಲಭ್ಯವಾಗುವ ನೋಂದಣಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದು. ಯಾವುದೇ ಶುಲ್ಕವಿರುವುದಿಲ್ಲ.

16ರಿಂದ 35 ವರ್ಷದೊಳ ಗಿನವರು ಈ ಕಾರ್ಯಕ್ರಮದಲ್ಲಿ ಭಾಗ ವಹಿಸಬಹುದು. ನಗರದಾದ್ಯಂತ ನಾನಾ ಸ್ಥಳಗಳಲ್ಲಿ ಆಡಿಷನ್‌ಗಳುಆರಂಭವಾಗಿದ್ದು, ಪ್ರತಿ ವಾರ 400 ಜನರಿಗೆ ಆಡಿಷನ್ ನೀಡಲಾಗುತ್ತದೆ. ಶಾರ್ಟ್ ಲಿಸ್ಟ್‌ನಲ್ಲಿರುವ 10 ಜನರು ತೀರ್ಪು ಗಾರರನ್ನು ಎದುರಿಸಬೇಕಾಗುತ್ತದೆ. ಪುರುಷ ಹಾಗೂ ಮಹಿಳೆಯರಲ್ಲಿ ತಲಾ ಒಬ್ಬೊಬ್ಬರು ಪ್ರತಿ ವಾರ ವಿಜೇತರಾಗಲಿದ್ದು, ಒಟ್ಟು 16 ವಿಜೇತರಿರುತ್ತಾರೆ.

ನಗರದ ಹಲವು ಕಾಲೇಜು ಮತ್ತು ಕಂಪನಿಗಳಲ್ಲಿ ನಡೆಸುವ ಆಡಿಷನ್‌ಗಳಿಂದ 8 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅ.10ರಂದು ಗ್ರ್ಯಾಂಡ್ ಫೈನಲ್ ನಡೆಯಲಿದೆ ಎಂದು ಗರುಡಾಮಾಲ್‌ನ ವ್ಯವಸ್ಥಾಪಕ ನಿರ್ದೇಶಕ ನಂದೀಶ್ ಹೇಳುತ್ತಾರೆ.

(ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada