»   » ಲಹರಿ ತೆಕ್ಕೆಗೆ ಪ್ರಿನ್ಸ್ ಮಹೇಶ್ ಚಿತ್ರದ ಆಡಿಯೋ ರೈಟ್ಸ್

ಲಹರಿ ತೆಕ್ಕೆಗೆ ಪ್ರಿನ್ಸ್ ಮಹೇಶ್ ಚಿತ್ರದ ಆಡಿಯೋ ರೈಟ್ಸ್

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಇದೇ ಮೊಟ್ಟ ಮೊದಲ ಬಾರಿಗೆ ಲಹರಿ ಆಡಿಯೋ ಸಂಸ್ಥೆ ಭಾರಿ ಮಟ್ಟದ ಸಾಹಕ್ಕೆ ಕೈಹಾಕಿ ಯಶಸ್ವಿಯೂ ಆಗಿದೆ. ತೆಲುಗು ನಟ 'ಪ್ರಿನ್ಸ್' ಮಹೇಶ್ ಬಾಬು ಅವರ '1 ನೇನೊಕ್ಕಡಿನೇ' (1 ನಾನೊಬ್ಬನೇ) ಎಂಬ ಚಿತ್ರದ ಆಡಿಯೋ ರೈಟ್ಸ್ ಲಹರಿ ಸಂಸ್ಥೆ ಪಾಲಾಗಿದೆ.

ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕರಾದ ಜಿ ಮನೋಹರ್ ನಾಯ್ಡು ಹಾಗೂ ಜಿ ತುಳಸಿರಾಮ್ ನಾಯ್ಡು (ವೇಲು) ಅವರು ನೇನೊಕ್ಕಡಿನೇ ಚಿತ್ರದ ಆಡಿಯೋ ರೈಟ್ಸನ್ನು ರು.1 ಕೋಟಿಗೆ ಖರೀದಿಸಿದ್ದಾರೆ. ತೆಲುಗು ಚಿತ್ರೋದ್ಯಮದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಚಿತ್ರ ಇದಾಗಿದೆ. ['ನಿನ್ನಿಂದಲೇ' ಆಡಿಯೋ ರಿಲೀಸ್ಗೆ ಮಹೇಶ್ ಬಾಬು]

1 Nenokkadine audio release

ಸುಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಜನವರಿ 10, 2014ರಂದು ತೆರೆಕಾಣುತ್ತಿದೆ. ತೆಲುಗು ಚಿತ್ರೋದ್ಯಮದಲ್ಲಿ ಆಡಿಯೋ ಬಿಡುಗಡೆ ಸಮಾರಂಭ ಎಂದರೇನೇ ಲಕ್ಷಾಂತರ ರುಪಾಯಿ ಖರ್ಚು ಮಾಡಲಾಗುತ್ತದೆ. ಇದೇ ಡಿಸೆಂಬರ್ 19ಕ್ಕೆ ಹೈದರಾಬಾದಿನ ಶಿಲ್ಪಕಲಾ ವೇದಿಕಾದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ.

ಆಂಧ್ರಪ್ರದೇಶದಲ್ಲಿ ಏಕಕಾಲಕ್ಕೆ 23 ಚಿತ್ರಮಂದಿರಗಳಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನೇರಪ್ರಸಾರ ಭಾಗ್ಯ ಕಾಣಲಿದೆ. ಈಗಾಗಲೆ ನೇರ ಪ್ರಸಾರದ ಬುಕ್ಕಿಂಗ್, ಟಿಕೆಟ್ ಗಳು ಮಾರಾಟವಾಗಿವೆ. ಆಡಿಯೋ ಬಿಡುಗಡೆ ಸಮಾರಂಭ ನೇರ ಪ್ರಸಾರವಾಗುತ್ತಿರುವುದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.

ಶೇ.75ರಷ್ಟು ಭಾಗದ ಚಿತ್ರೀಕರಣ ಯುಕೆಯಲ್ಲಿ ನಡೆದಿರುವುದು '1 ನೇನೊಕ್ಕಡಿನೇ' ಚಿತ್ರದ ವಿಶೇಷ. ಆಡಿಯೋ ಬಿಡುಗಡೆ ದಿನ ಮಹೇಶ್ ಬಾಬು ಹಾಗೂ ಅವರ ತಂದೆ ಕೃಷ್ಣ ಸೇರಿದಂತೆ ಚಿತ್ರತಂಡ ಭಾಗಿಯಾಗಲಿದೆ. ಕೃತಿ ಸೋನಂ ಎಂಬ ಬೆಡಗಿ ಈ ಚಿತ್ರದ ನಾಯಕಿ. ದೇವಿಶ್ರೀ ಪ್ರಸಾದ್ ಅವರ ಸಂಗೀತ ಚಿತ್ರಕ್ಕಿದೆ.

English summary
Bangalore based Lahari Recording Company acquired the 'Prince' Mahesh Babu's Telugu film '1 Nenokadine' audio rights by paying a high price that is over Rs.1 crore. The audio release event will be held on 19th December at Shilpakala Vedika in Hyderabad.
Please Wait while comments are loading...