»   » ಜಯನಗರದಲ್ಲಿ ರಘು, ಸುದೀಪ್ ಜಾಗರಣೆ

ಜಯನಗರದಲ್ಲಿ ರಘು, ಸುದೀಪ್ ಜಾಗರಣೆ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಹಾಗೂ ಸಂಗೀತಗಾರ ರಘು ದೀಕ್ಷಿತ್ ಅವರು ತಮ್ಮ ಸಂಗೀತ ಲಹರಿ ಮೂಲಕ ಜಯನಗರದ ನಾಗರೀಕರನ್ನು, ಆಸ್ತಿಕರನ್ನು ಹುರಿದೆಬ್ಬಿಸಿ, ಜಾಗರಣೆ ಮಾಡಲು ಪ್ರೇರಿಪಿಸಲಿದ್ದಾರೆ. ಮಹಾಶಿವರಾತ್ರಿಯ ಅಂಗವಾಗಿ ಶರಣ ಸಂಗಮ ಸಂಘದವರು ಏರ್ಪಡಿಸುವ ಮಹಾ ಜಾಗರಣೆ ಕಾರ್ಯಕ್ರಮ ಅಂಗವಾಗಿ ಈ ಇಬ್ಬರು ಪ್ರತಿಭಾವಂತರು ತಮ್ಮ ತಂಡದೊಡನೆ ಹಾಡು, ಕುಣಿತು ಎಲ್ಲರನ್ನು ರಂಜಿಸಲಿದ್ದಾರೆ.

ಶರಣ ಗೀತೆಗಳು, ಜಾನಪದ, ಹಾಸ್ಯ, ಸಂಗೀತ, ಮಿಮಿಕ್ರಿ ಎಲ್ಲದರ ಸಂಮಿಶ್ರಣದೊಂದಿಗೆ ಕಾರ್ಯಕ್ರಮ ಪಟ್ಟಿ ತಯಾರಾಗಿದೆ. ಸೂಪರ್ ಮ್ಯಾನ್ ಪ್ರಜ್ವಲ್ ದೇವರಾಜ್ ಕೂಡ ರಘು, ಸುದೀಪ್ ತಂಡಕ್ಕೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನಷ್ಟು ತಾರೆಯರ ದಂಡು ಬಂದು ಸೇರುವ ನಿರೀಕ್ಷೆಯಿದೆ.

ಜಾಗರಣೆ ಸಮಯ: ಫೆ. 12 ಶುಕ್ರವಾರ ಸಂಜೆ 5.05 ಇಂದ ಶನಿವಾರ ಫೆ.13ರ ಮಧ್ಯರಾತ್ರಿ 1 ಗಂಟೆ
ಸ್ಥಳ: ಬಿಎಸ್ ಚಂದ್ರಶೇಖರ್ ಕ್ರೀಡಾಂಗಣ[ ಎಂಇಎಸ್ ಮೈದಾನ/ ಕ್ವಾಲಿಟಿ ಪಿಚ್)
ಬೀದಿ: 9 ನೇ ಮುಖ್ಯರಸ್ತೆ, 4ನೇಬ್ಲಾಕ್, ಜಯನಗರ ಟೆಲಿಫೋನ್ ಎಕ್ಸ್ ಚೆಂಜ್ ಹಾಗೂ ಬರಿಸ್ತಾ ಎದುರು

ಜಾನಪದ ಮೆರವಣಿಗೆ: ಸಂಜೆ 5ರಿಂದ 6
ಸಾಕ್ಸೋಫೋನ್ ವಾದನ , ಹರಿಪ್ರಸಾದ್ ಹಾಗೂ ತಂಡ: ಸಂಜೆ 6 ರಿಂದ 7
ಇಂದುಶ್ರೀ ಹಾಗೂ ಮಾತಾನಾಡುವ ಗೊಂಬೆ: ಸಂಜೆ 7 ರಿಂದ 8
ನೃತ್ಯ ಸಂಭ್ರಮ, ಮಂಜುಳಾ ಪರಮೇಶ್ ಅವರಿಂದ : ರಾತ್ರಿ 8 ರಿಂದ 9
ಹಾಸ್ಯೋತ್ಸವ ರಿಚರ್ಡ್ ಲೂಯಿಸ್, ಮೈಸೂರು ಆನಂದ್ ಹಾಗೂ ತಂಡ : ರಾತ್ರಿ 9 ರಿಂದ 10.30
ರಘು ,ಸುದೀಪ್ , ಪ್ರಜ್ವಲ್ ಸಂಗೀತ ಮೋಡಿ : ರಾತ್ರಿ10.30 ರಿಂದ ಮಧ್ಯರಾತ್ರಿ 1ಗಂಟೆ

ಸ್ಪರ್ಧೆ:ಜಸ್ಟ್ ಮಾತ್ ಮಾತಲ್ಲಿ ಸಿಡಿ ಗೆಲ್ಲುವ ಅವಕಾಶ

ಕಾರ್ಯಕ್ರಮ ವಿವರವನ್ನು ಗುರುತಿಟ್ಟುಕೊಂಡು ತಪ್ಪದೇ ಬನ್ನಿ, ಪ್ರವೇಶ ಉಚಿತ. ಶಿವ ಎಲ್ಲರಿಗೂ ಒಳ್ಳೆದು ಮಾಡಲಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada