ವಿರಸವೆಂಬ ವಿಷಕೆ ಬಲಿಯಾದೆ ಏತಕೇ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆಧಾರಿತ ಚಿತ್ರ ಭೂತಯ್ಯನ ಮಗ ಅಯ್ಯ್ಯು . 1974ರಲ್ಲಿ ತೆರೆಕಂಡ ಈ ಚಿತ್ರ ಸಿದ್ಧಲಿಂಗಯ್ಯ ಅವರ ನಿರ್ದೇಶನದಲ್ಲಿ ಬಂದಂತಹ ಮತ್ತೊಂದು ಅವಿಸ್ಮರಣೀಯ ಚಿತ್ರ. ಗುಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್, ಅಯ್ಯು ಪಾತ್ರದಲ್ಲಿ ಲೋಕೇಶ್, ಭೂತಯ್ಯನ ಪಾತ್ರದಲ್ಲಿ ಎಂ.ಪಿ.ಶಂಕರ್ ನಟನೆ ಅದ್ಭುತವಾಗಿ ಮೂಡಿಬಂದಿತ್ತು. ಚಿ.ಉದಯಶಂಕರ್ ಅವರ ಸೊಗಸಾದ ಸಾಹಿತ್ಯಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನೀಡುವುದರ ಜೊತೆಗೆ ಹಾಡಿದ್ದರು.
ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..{ಪಲ್ಲವಿ}
ಗೆಲುವಾ ಛಲವ ಹೊಂದಿ ಮನದಲೀ
ಸೇಡಿನಿಂದಲೀ ಕಿಡಿಯಾಗಿ ಹಠದಲಿ
ಸಾಲವೆನ್ನುವಾ ಆ ಶೂಲವೇರುವಾ
ಗತಿಯಾಯ್ತೇ ಮಾನವಾ........{ಪಲ್ಲವಿ}
ಬಂಧು ಬಳಗ ನೆಂಟರೆಲ್ಲರೂ
ಗಂಟು ಹೋಗಲೂ ಇನ್ನೆಲ್ಲಿ ನಿಲುವರು
ಲಾಭಯಾರಿಗೋ ಸಂತಾಪಯಾರಿಗೋ
ವಿಧಿಲೀಲೆ ಏನಿದು..........{ಪಲ್ಲವಿ}
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
ವಿಷ್ಣುವರ್ಧನ್ ಚಂದೂಲಾಲ್ ಜೈನ್ chandulal jain drvishnuvardhan ಭೂತಯ್ಯನ ಮಗ ಅಯ್ಯು ಜಿ ಕೆ ವೆಂಕಟೇಶ್ bhootayyana maga ayyu gk venkatesh kannada lyrics ಚಿ ಉದಯಶಂಕರ್


Click it and Unblock the Notifications











