»   » 'ಆಪ್ತರಕ್ಷಕುಡು' ಚಿತ್ರಕ್ಕೆ ಗುರುಕಿರಣ ಸಂಗೀತ

'ಆಪ್ತರಕ್ಷಕುಡು' ಚಿತ್ರಕ್ಕೆ ಗುರುಕಿರಣ ಸಂಗೀತ

Posted By:
Subscribe to Filmibeat Kannada

ವೆಂಕಟೇಶ್ ಹಾಗೂ ಅನುಷ್ಕಾ ಅಭಿನಯಿಸಲಿರುವ ತೆಲುಗು 'ಆಪ್ತರಕ್ಷಕುಡು' ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಗುರುಕಿರಣ್ ಅವರನ್ನು ಆಯ್ಕೆ ಮಾಡಲಾಗಿದೆ. ಡಾ.ವಿಷ್ಣುವರ್ಧನ್ ಅಭಿನಯದ ಕೊನೆಯ ಚಿತ್ರ 'ಆಪ್ತರಕ್ಷಕ' ಭರ್ಜರಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದ್ದು, ಪರಭಾಷಾ ಚಿತ್ರೋದ್ಯಮ ಇತ್ತ ತಿರುಗಿ ನೋಡುವಂತೆ ಮಾಡುತ್ತಿದೆ.

'ಆಪ್ತರಕ್ಷಕ' ಚಿತ್ರದಲ್ಲಿ ಗುರುಕಿರಣ್ ಸಂಗೀತ ಪ್ರೇಕ್ಷಕರು ತಲೆದೂಗುವಂತೆ ಮಾಡಿತ್ತು.ಚಿತ್ರದ ನಿರ್ದೆಶಕ ಪಿ ವಾಸು ತೆಲುಗಿನ 'ಆಪ್ತರಕ್ಷಕುಡು' ಚಿತ್ರಕ್ಕೂ ಗುರುವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆಪ್ತರಕ್ಷಕ ಚಿತ್ರದಲ್ಲಿನ ''ಗರನೆ ಗರಗರನೆ...''ಹಾಗೂ ''ಓಂಕಾರ...''ಟ್ಯೂನ್ ಗಳನ್ನು ತೆಲುಗಿನಲ್ಲೂ ಹಾಗೆಯೇ ಉಳಿಸಿಕೊಳ್ಳುವುದಾಗಿ ಗುರುಕಿರಣ್ ತಿಳಿಸಿದ್ದಾರೆ.

ಇಷ್ಟೆಲ್ಲಾ ಸಂಭ್ರಮಗಳ ನಡುವೆ ಗುರುಕಿರಣ್ ಅವರಿಗೆ ಮತ್ತೊಂದು ಅವಕಾಶ ಹುಡುಕಿಕೊಂಡುಬಂದಿದೆ. ಅಣಜಿ ನಾಗರಾಜ್ ನಿರ್ಮಾಣದ ತುಳು ಚಿತ್ರ 'ಒರಿಯೋರ್ದೊರಿ ಅಸಲ್' ಎಂಬ ಚಿತ್ರದಲ್ಲಿ ಗುರುಕಿರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುರುಕಿರಣ್ ಆಡುಭಾಷೆ ಸಹ ತುಳು ಎಂಬುದು ಅವರ ಸಂಭ್ರಮಕ್ಕೆ ಮತ್ತೊಂದು ಕಾರಣವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada