twitter
    For Quick Alerts
    ALLOW NOTIFICATIONS  
    For Daily Alerts

    ಧ್ವನಿಸುರುಳಿ ವಿಮರ್ಶೆ: ಕಠಾರಿವೀರ ಸುರಸುಂದರಾಂಗಿ

    By *ಬಾಲರಾಜ್ ತಂತ್ರಿ
    |

    Music review - Katariveera
    ಕನ್ನಡ ಮೊದಲ 3ಡಿ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಸುರೇಶ ಕೃಷ್ಣ ನಿರ್ದೇಶನದ, ಮುನಿರತ್ನಂ ನಿರ್ಮಾಣದ, ಅಂಬರೀಷ್, ಉಪೇಂದ್ರ ಮತ್ತು ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಆಡಿಯೋ ವಿಮರ್ಶೆ. ಸಂಗೀತ ನೀಡಿರುವವರು ವಿ ಹರಿಕೃಷ್ಣ.

    1. ದಿಲ್ ಮೇರಾ ಧಕ್, ಧಕ್
    ಸಾಹಿತ್ಯ: ಕವಿರಾಜ್
    ಹಾಡಿರುವವರು: ಸೋನು, ಸುನಿತಾ ಬೋಪರಾಜ್

    ಹಿಂದಿ ಮಿಶ್ರಿತ ಕನ್ನಡ ಹಾಡು. ಮೆಲೋಡಿಯಸ್ ಟ್ಯೂನ್ ನಲ್ಲಿ ಸಾಗುವ ಡುಯೆಟ್ ಸಾಂಗ್. ದಿಲ್ ಮೇರಾ ಧಕ್ ಧಕ್, ಪ್ರೀತಿ ದೊಂಬರಾಟ ಎದೆಯಲಿ, ತೂಫಾನ್ ಎದ್ದ ಹಾಗೆ ಉಸಿರಲ್ಲಿ ಹೀಗೆ ಸಾಹಿತ್ಯವಿರುವ ಹಾಡು. ಕೋರಸ್ ಬಳಸಿರುವುದರಿಂದ ಹಾಡು ಮತ್ತಷ್ಟು ಇಂಪಾಗಿದೆ.

    2 . ಅಂಬಿಕ, ಚಳಿ ತಾಳೆನು ಅಂಬಿಕ
    ಸಾಹಿತ್ಯ: ನಾಗೇಂದ್ರ ಪ್ರಸಾದ್
    ಹಾಡಿರುವವರು: ಹೇಮಂತ್, ಅನುರಾಧ ಭಟ್

    ರಕ್ತ ಕಣ್ಣೀರು ಚಿತ್ರದ ಡೇಂಜರ್.. ಹಾಡಿನ ಮೊದಲ ಟ್ಯೂನ್ ಅನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಹಾಡಿನಲ್ಲಿ ಬಿಸಿಬಿಸಿ ಸಾಹಿತ್ಯವಿದ್ದು, for e.g. ನೀನು ಭಲೇ ಭಲೇ ಡೇಂಜರ್ ಕಣೋ, ನೀನು ಹುಡುಗಿರೋ ಹಂಟರ್ ಕಣೋ, ಗಂಡಸ್ಥನ ಎನ್ನುವ ಏಳು ಅಂತಸ್ತು ಶಾಖ ನೀಡಿ ಪುಳಕವಾಗಲಿ. ಆಲ್ಬಮ್ ನಲ್ಲಿರುವ ಮತ್ತೊಂದು ಡುಯೆಟ್ ಹಾಡು. ದಶಕಗಳ ಹಿಂದೆ ಬಂದ ಅಂಬರೀಶ್, ಅಂಬಿಕಾ ಅಭಿನಯದ ಚಕ್ರವ್ಯೂಹ ಚಿತ್ರದ ಚಳಿ ಚಳಿ ತಾಳೆನು ಈ ಚಳಿಯ ಹಾಡಿನ ಸಾಹಿತ್ಯವನ್ನು ಒಂದು ಆಂಗಲ್ ನಲ್ಲಿ ಹೋಲಿಸಬಹುದಾಗಿದೆ.

    3. ಊರಿಗೆ ನಿನೋಬ್ಬಳೆ ಪದ್ಮಾವತಿಯೇನೆ
    ಸಾಹಿತ್ಯ: ಉಪೇಂದ್ರ
    ಹಾಡಿರುವವರು: ಉಪೇಂದ್ರ, ಸುನಿತಾ ಬೋಪರಾಜ್

    ಅಣ್ಣಾವ್ರ ಬಹಾದ್ದೂರ್ ಗಂಡು ಚಿತ್ರದ ಎವರ್ ಗ್ರೀನ್ ಹಾಡು ಮುತ್ತಿನಂತ ಮಾತೊಂದು ಗೊತ್ತೇನಮ್ಮ ಟ್ಯೂನ್ ಅನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಟಿಪಿಕಲ್ ಉಪೇಂದ್ರ ಸಾಹಿತ್ಯವಿರುವ ಹಾಡು. ನಾವು ಪೂಜೆ ಮಾಡಿದ್ರೆನೇ ದೇವರು ಕಣೆ, ಇಲ್ಲಾಂದ್ರೆ ಬರೀ ಕಲ್ಲು ಕಣೆ. ಕೆಟ್ಟವರು ಇದ್ರೆ ತಾನೇ ಯಮನಿಗೆ ಕೆಲಸತಾನೆ. ವ್ಯಂಗ್ಯಭರಿತ ದಾಟಿಯಲ್ಲಿ ಸಾಗುವ ಹಾಡು ಪಡ್ಡೆ ಹುಡುಗರನ್ನು ಆಕರ್ಷಿಸುವಂತಿದೆ.

    4. ಊಲಾ ಊಲಲಾ.. ಇದು ಹಾಲು ಕೊಡುವ ಎಮ್ಮೆ..
    ಸಾಹಿತ್ಯ: ಉಪೇಂದ್ರ
    ಹಾಡಿರುವವರು: ಟಿಪ್ಪು, ಪ್ರಿಯದರ್ಶಿನಿ

    ನಶೆ ಏರುವ ಸಂಗೀತ ದಾಟಿಯಲ್ಲಿರುವ ಹಾಡು. ಫಾಸ್ಟ್ ಬೀಟ್ ನಲ್ಲಿ ಸಾಗುವ ಇಂಗ್ಲಿಷ್ ಮಿಶ್ರಿತ ಸಾಂಗ್.

    5. ಪಾರಿಜಾತ ಪದ್ಯ ಹಾಡಿದೆ
    ಸಾಹಿತ್ಯ: ನಾಗೇಂದ್ರ ಪ್ರಸಾದ್
    ಹಾಡಿರುವವರು: ಸುನಿತಾ ಬೋಪರಾಜ್

    ಚಕ್ರವಾಕ ಕೂತು ಕೇಳಿದೆ, ಬಾ ಎನ್ನುವಾಗ ಬರುವ ಮೇಘದೂತ, ಒಂದೊಂದು ನಿಮಿಷ ಸುಖದ ಸುಪ್ರಬಾತ. ಆಲ್ಬಮ್ ನಲ್ಲಿರುವ ಮತ್ತೊಂದು ಮೆಲೋಡಿಯಸ್ ಟ್ರ್ಯಾಕ್. ಸುನಿತಾ voice modulation ಗಮನಾರ್ಹ.

    ಆಲ್ಬಮ್ ನಲ್ಲಿರುವ ಐದು ಹಾಡಿನಲ್ಲಿ ಮೂರು ಹಾಡು ಕೇಳುವಂತಿದ್ದು, ಹಾಡಿನ ಸಾಹಿತ್ಯವೇ ವಿಶಿಷ್ಟವಾಗಿ ವೈಶಿಷ್ಟ್ಯಪೂರ್ಣವಾಗಿದೆ. ಆದರೂ ಕನ್ನಡದ ಮೊದಲ 3ಡಿ ಸಿನಿಮಾದ ಹಾಡು ಅದ್ಭುತವಾಗಿರುತ್ತೆ ಅಂದುಕೊಂಡರೆ ಸ್ವಲ್ಪ ನಿರಾಶೆ ಆಗಬಹುದು. ಆದರೂ ಸಿಡಿ ಖರೀದಿಸಲು ಖಂಡಿತ ಅಡ್ಡಿಯಿಲ್ಲ ಬಿಡಿ.

    English summary
    The audio review of Katari Veera Sura Sundarangi. Album has five songs out of that three songs are melodious.
    Monday, April 23, 2012, 21:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X