For Quick Alerts
  ALLOW NOTIFICATIONS  
  For Daily Alerts

  ನೀನಾದೆ ನಾ ನೀನೊಲಿದಾ ಈ ಕ್ಷಣ ಲವ್ಲಿ ಸಾಂಗ್

  By Rajendra
  |

  ಇತ್ತೀಚೆಗೆ ಸಿಕ್ಕಾಪಟ್ಟೆ ಪಾಪ್ಯುಲರ್ ಆದ ಹಾಡು ಎಂದರೆ ಮುರಳಿ ಮೀಟ್ಸ್ ಮೀರಾ ಚಿತ್ರ ನೀನಾದೆ ನಾ ನೀನೊಲಿದಾ ಈ ಕ್ಷಣ...ಪ್ರಜ್ವಲ್ ದೇವರಾಜ್, ರೀಮಾ ಹಾಗೂ ಹರ್ಷಿಕಾ ಪೂಣಚ್ಚ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಬಗ್ಗೆ ಅಷ್ಟಾಗಿ ಮೆಚ್ಚುಗೆ ಮಾತುಗಳು ಕೇಳದಿದ್ದರೂ ಹಾಡುಗಳ ಬಗ್ಗೆಯಂತೂ ಸಿಕ್ಕಾಪಟ್ಟೆ ರೆಸ್ಪಾನ್ಸ್ ವ್ಯಕ್ತವಾಗಿದೆ.

  ಕವಿರಾಜ್ ಬರೆದಿರುವ ಈ ಹಾಡಿಗೆ ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ಅವಿನಾಶ್ ಛೆಬ್ಬಿ ಹಾಗೂ ಸುಪ್ರಿಯಾ ರಾಮಕೃಷ್ಣಯ್ಯ ಸೊಗಸಾಗಿ ಹಾಡಿರುವ ಹಾಡು ಕೇಳುತ್ತಿದ್ದರೆ ಮನಸ್ಸು ಎಲ್ಲೋ ಪರಾರಿಯಾಗಿಬಿಡುತ್ತದೆ. ಇತ್ತೀಚೆಗೆ ಪ್ರೇಮಿಗಳನ್ನು ಕಾಡಿದಹಾಡು ಇಲ್ಲಿದೆ.

  ನೀನಾದೆ ನಾ ನೀನೊಲಿದಾ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ

  ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ ಮೌನಿ ನಾನಾದೆ ಈ ದಿನ

  ಹೇಗೊ ನಾನಿದ್ದೆ ಈಗ ಹೀಗಾದೆ ಅದಕ್ಕೆ ನೀ ತಾನೆ ಕಾರಣಾ?

  ನೀನಾದೆ ನಾ ನೀನೊಲಿದಾ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ

  ಲಾಲ ಲಾಲ...

  ತೇಲಿದೆ ಮನ ನಿನ್ನ ನಗುವಿನಾ ಆ ತಿಳಿ ಆಗಸದಲೀ

  ಜಾರಿದೆ ಕ್ಷಣ ನಿನ್ನ ಒಲವಿನಾ ಸಿಹಿಯಾದ ಅಪ್ಪುಗೆಯಲೀ

  ತೇಲಿದೆ ಮನ ನಿನ್ನ ನಗುವಿನಾ ಆ ತಿಳಿ ಆಗಸದಲೀ

  ಜಾರಿದೆ ಕ್ಷಣ ನಿನ್ನ ಒಲವಿನಾ ಸಿಹಿಯಾದ ಅಪ್ಪುಗೆಯಲೀ

  ಸೆಳೆದೇ ಕಣ್ಣಲೇ...ಬೆರೆತೇ ನನ್ನಲೇ...

  ಸೆಳೆದೇ ಕಣ್ಣಲೇ...ಬೆರೆತೇ ನನ್ನಲೇ...

  ಲಾಲ ಲಾಲ...

  ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿಯಾಗಿರುವೆನೇ..

  ಬಿಡುಗಡೆಯನೆ ಎಂದು ಬಯಸದ ನಾ ಪ್ರೇಮ ಖೈದಿ ಕಣೇ..

  ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿಯಾಗಿರುವೆನೇ..

  ಬಿಡುಗಡೆಯನೆ ಎಂದು ಬಯಸದ ನಾ ಪ್ರೇಮ ಖೈದಿ ಕಣೇ..

  ಬರೆದೇ ಉಸಿರಲೇ... ನಿನ್ನಾ ಹೆಸರನೇ...

  ಬರೆದೇ ಉಸಿರಲೇ... ನಿನ್ನಾ ಹೆಸರನೇ...

  ನೀನಾದೆ ನಾ ನೀನೊಲಿದಾ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ

  ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ ಮೌನಿ ನಾನಾದೆ ಈ ದಿನ

  ಹೇಗೊ ನಾನಿದ್ದೆ ಈಗ ಹೀಗಾದೆ ಅದಕ್ಕೆ ನೀ ತಾನೆ ಕಾರಣಾ?

  ನೀನಾದೆ ನಾ ನೀನೊಲಿದಾ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ.

  English summary
  Here is the lyrics of the Kannada movie Murali Meets Meera by Kaviraj. "Nee Naade Na.." lyrics becomes huge popular in recent times. Music by Abhiman Roy and enjoy the lyrics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X