»   »  ರೇಡಿಯೋ ಮಿರ್ಚಿಯ ಪುಗಸಟ್ಟೆ ಯುಗಾದಿ ಸ್ಪರ್ಧೆ

ರೇಡಿಯೋ ಮಿರ್ಚಿಯ ಪುಗಸಟ್ಟೆ ಯುಗಾದಿ ಸ್ಪರ್ಧೆ

Subscribe to Filmibeat Kannada
Radio Mirchi presents Puksatte Ugadi contest
ಆರ್ಥಿಕ ಹಿಂಜರಿತ ಬಿಸಿ ನಿಮಗೂ ತಟ್ಟಿದೆಯೇ? ಈ ಬಾರಿಯ ಯುಗಾದಿ ಹಬ್ಬಕ್ಕೆ ಏನನ್ನೂ ಖರೀದಿಸುತ್ತಿಲ್ಲವೆ? ಹಾಗಿದ್ದರೆ ನೀವು ತಲೆ ಬಿಸಿ ಮಾಡಿಕೊಳ್ಳದೆ 'ಪುಗಸಟ್ಟೆ ಯುಗಾದಿ ಸ್ಪರ್ಧೆ'ಯಲ್ಲಿ ಭಾಗವಹಿಸಿ ಎನ್ನುತ್ತಿದೆ ಬೆಂಗಳೂರಿನ ಸಖತ್ ಹಾಟ್ ರೇಡಿಯೋ ಕೇಂದ್ರ 98.3 ಎಫ್ ಎಂ.

'ಪುಗಸಟ್ಟೆ ಯುಗಾದಿ ಸ್ಪರ್ಧೆ'ಯಲ್ಲಿ ಭಾಗವಹಿಸಿ ಗೆಲ್ಲುವ ಕೇಳುಗರು ರು.12, 000ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಸ್ಪರ್ಧೆಯಲ್ಲಿ ಗೆದ್ದ ಆರು ಅದೃಷ್ಟಶಾಲಿ ಶ್ರೋತೃಗಳು ತಮ್ಮ ನೆಚ್ಚಿನ ಆರ್ ಜೆಗಳೊಂದಿಗೆ ರು.12 ಸಾವಿರಗಳವರೆಗೂ ಶಾಪಿಂಗ್ ಮಾಡಬಹುದು.ಮಾರ್ಚ್ 26ರಂದು ಫೋರಂ ಮಾಲ್ ನಲ್ಲಿ ತಮ್ಮ ನೆಚ್ಚಿನ ಆರ್ ಜೆಗಳೊಂದಿಗೆ ಹರಟೆ ಹೊಡೆಯುತ್ತಾ ಶಾಪಿಂಗ್ ಮಾಡಬಹುದಾಗಿದೆ. ಇದಕ್ಕಾಗಿ ರೇಡಿಯೋ ಮಿರ್ಚಿಯಲ್ಲಿ ಆರ್ ಜೆಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಷ್ಟೆ. ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳಬೇಕು. ಮತ್ತಷ್ಟು ವಿವರಗಳಿಗೆ ರೇಡಿಯೋ ಮಿರ್ಚಿ ಆಲಿಸಿ.

ಈ ಕುರಿತು ರೇಡಿಯೋ ಮಿರ್ಚಿಯ ಕರ್ನಾಟಕ ಮತ್ತು ಕೇರಳ ಮುಖ್ಯಸ್ಥ ರಾಹುಲ್ ಬಾಲ್ಯನ್ ಮಾತನಾಡುತ್ತಾ, ಯುಗಾದಿ ಹಬ್ಬದ ಸಡಗರ, ಸಂಭ್ರಮ ಆರ್ಥಿಕ ಹಿಂಜರಿತದ ಕಾರಣ ಕೊಂಚ ಕ್ಷೀಣಿಸಿದೆ. ಹಾಗಾಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ರೇಡಿಯೋ ಮಿರ್ಚಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ನಮ್ಮ ಈ ಕಾರ್ಯಕ್ರಮ ಶ್ರೋತೃಗಳ ಇಷ್ಟವಾಗುತ್ತದೆ ಎಂದು ಭಾವಿಸಿರುವುದಾಗಿ ಅವರು ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ರೆಟ್ರೊ ರಾಣಿಯರು ಸಖತ್ ಹಾಟ್ ಮಗಾ!
ಕನ್ನಡವೇ ಸಕತ್ ಹಾಟ್ ಮಗಾ ರೇಡಿಯೋ ಮಿರ್ಚಿನಂ.1

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada