For Quick Alerts
  ALLOW NOTIFICATIONS  
  For Daily Alerts

  'ಕೊಲವೆರಿ ಡಿ' ಶೈಲಿಯಲ್ಲಿ ಜೋಶ್ ರಾಕೇಶ್ ಹಾಡು

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸೂಪರ್ ಸ್ಟಾರ್ ಉಪೇಂದ್ರ ಈಗಾಗಲೆ ಗಾಯಕರಾಗಿ ಗಮನಸೆಳೆಯುತ್ತಿದ್ದಾರೆ. ಈ ಪಟ್ಟಿಗೆ ಈಗ ಮತ್ತೊಬ್ಬ ಯುವ ನಾಯಕನಟನ ಸೇರ್ಪಡೆಯಾಗಿದೆ. 'ಜೋಶ್' ಚಿತ್ರದ ನಾಯಕ ನಟ ರಾಕೇಶ್ ಈಗ ಗಾಯಕ.

  'ಜೋಶ್' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ರಾಕೇಶ್ ಬಳಿಕ ಮಂದಹಾಸ, ಮನಸಾಲಜಿ, ಪರಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಮತ್ತೊಂದು ಚಿತ್ರ 'ಕರ್ನಾಟಕ ಅಯೋಧ್ಯಾಪುರ' ಎಂಬ ಚಿತ್ರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರದ ಹಾಡೊಂದನ್ನು ರಾಕೇಶ್ ಹಾಡುತ್ತಿರುವುದು ವಿಶೇಷ.

  ಈಗಾಗಲೆ ಯುವ ಜನತೆಯನ್ನು ಹುಚ್ಚೆದ್ದು ಕುಣಿಸುತ್ತಿರುವ ಧನುಷ್ ಹಾಡಿರುವ "ವೈ ದಿಸ್ ಕೊಲವೆರಿ ಡಿ.." ಮಾದರಿಯಲ್ಲೇ ಈ ಹಾಡು ಇರುತ್ತದಂತೆ. ಈಗಾಗಲೆ ಲೂಸ್ ಮಾದ ಯೋಗೇಶ್ ಇದೇ ರೀತಿಯ ಹಾಡೊಂದನ್ನು ತಮ್ಮ 'ಕಾಲಾಯ ತಸ್ಮೈ ನಮಃ' ಚಿತ್ರಕ್ಕಾಗಿ ಹಾಡಿದ್ದಾರೆ. ಈಗ ಮತ್ತೊಂದು ಅದೇ ರೀತಿಯ ಹಾಡು ರಾಕೇಶ್ ಬಾಯಿಂದ ಹೊರಬೀಳಲಿದೆ.

  ರಾಕೇಶ್ ಚಿತ್ರಕ್ಕೆ ಮೊದಲು 'ಅಯೋಧ್ಯಾಪುರ' ಎಂದು ಹೆಸರಿಡಲಾಗಿತ್ತಂತೆ. ಈ ಶೀರ್ಷಿಕೆಗೆ ಅನುಮತಿ ಸಿಗದ ಕಾರಣ ಬಳಿಕ 'ಕರ್ನಾಟಕ' ಎಂದು ಸೇರಿಸಲಾಯಿತಂತೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಮಧುಸೂದನ್. ಸಾಗರ್ ನಾಗಭೂಷಣ್ ಅವರ ಸಂಗೀತವಿರುವ ಚಿತ್ರದ ನಾಯಕಿ ನಯನ. (ಏಜೆನ್ಸೀಸ್)

  English summary
  Josh fame Kannada actor Rakesh to sing a song in his upcoming movie Karnataka Ayodhyapura. The song is similar to Dhanush's Why this Kolaveri Di...music by Sagar Nagabhushan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X