For Quick Alerts
  ALLOW NOTIFICATIONS  
  For Daily Alerts

  Upendra Song: 'ಹುಷಾರ್' ಉಪ್ಪಿ ಮತ್ತೆ ಮೈಕ್ ಹಿಡಿದು ನಿಂತ್ರು

  |

  ರಿಯಲ್‌ಸ್ಟಾರ್ ಉಪೇಂದ್ರ ಅಂದ್ರೆ, ಫಿಲ್ಟರ್ ಇಲ್ಲದೆ ಮಾತಾಡುತ್ತಾರೆ. ಡೈಲಾಗ್ಸ್ ಕೂಡ ರಿಯಲ್ ಆಗೇ ಇರುತ್ತೆ. ಇನ್ನು ಆಕ್ಟಿಂಗ್ ಎಲ್ಲಕ್ಕಿಂತ ಡಿಫ್ರೆಂಟ್. ಇನ್ನು ಉಪ್ಪಿ ಡೈರೆಕ್ಟ್ ಮಾಡಿದ ಸಿನಿಮಾ ಯಾರಿಗೆ ಇಷ್ಟ ಆಗಿಲ್ಲ ಹೇಳಿ. ಇವೆಲ್ಲಕ್ಕಿಂತ ಮುಖ್ಯವಾಗಿ ಉಪೇಂದ್ರ ಹಾಡಿದ ಹಾಡುಗಳೂ ಕೂಡ ಸೂಪರ್‌ ಡೂಪರ್ ಹಿಟ್ ಆಗಿವೆ.

  ಉಪ್ಪಿ ಸಿನಿಮಾಗಳಿಗೆ ಹಾಡದೆ ಬಹಳ ದಿನಗಳೇ ಆಗಿವೆ. ಉಪೇಂದ್ರ ಸಿನಿಮಾದಲ್ಲಿ ಒಂದಲ್ಲಾ ಒಂದು ಹಾಡನ್ನು ಹಾಡೇ ಹಾಡುತ್ತಿದ್ದರು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಉಪ್ಪಿ ಒಂದೇ ಒಂದು ಹಾಡನ್ನೂ ಹಾಡಿಲ್ಲ. ಆದ್ರೀಗ ರಿಯಲ್ ಸ್ಟಾರ್ ಅಭಿಮಾನಿಗಳು ಖುಷಿ ವಿಷಯವೊಂದಿದೆ. ಉಪ್ಪಿ ಮತ್ತೆ ಮೈಕ್ ಮುಂದೆ ನಿಂತಿದ್ದಾರೆ.

  ಉಪೇಂದ್ರ ಹೊಸ ಸಿನಿಮಾ ಹೆಸರಿನ ಅರ್ಥವೇನು?ಉಪೇಂದ್ರ ಹೊಸ ಸಿನಿಮಾ ಹೆಸರಿನ ಅರ್ಥವೇನು?

  ರಿಯಲ್ ಸ್ಟಾರ್ ಹಾಡುವ ಹಾಡುಗಳೇ ಡಿಫ್ರೆಂಟ್. ಉಪ್ಪಿ ಸಿನಿಮಗಳಂತೆ ಹಾಡುಗಳೂ ಕೂಡ ರಗಡ್ ಆಗಿರುತ್ತೆ. ಇದೂವರೆಗೂ ಕೇಳಿದ ಹಾಡುಗಳು ರಿಯಲಿಸ್ಟಿಕ್ ಅಂತ ಅನಿಸಿವೆ. ಆದರೆ, ಈ ಬಾರಿ ಪಕ್ಕಾ ನಾಟಿ ಸಾಂಗ್‌ವೊಂದಕ್ಕೆ ಧ್ವನಿ ನೀಡಿದ್ದಾರೆ. ಈ ಹಾಡು ಪಕ್ಕಾ ಪಡ್ಡೆ ಹುಡುಗರಿಗಂತಲೇ ಕಂಪೋಸ್ ಮಾಡಿದೆ ಹಾಗಿದೆ.

  ಕ್ಲಿಕ್ ಆಯ್ತು ಉಪೇಂದ್ರ ಹಾಡು

  ಕ್ಲಿಕ್ ಆಯ್ತು ಉಪೇಂದ್ರ ಹಾಡು

  ಉಪೇಂದ್ರ ನಿರ್ದೇಶಿಸಿದ ಸಿನಿಮಾಗಳಲ್ಲಿ ಅವರೇ ಹಾಡಿದ ಹಾಡುಗಳು ಚಾರ್ಟ್‌ಬಸ್ಟರ್ ಲಿಸ್ಟ್ ಸೇರಿವೆ. ಇಂತಹ ಸಾಕಷ್ಟು ಹಾಡುಗಳಿವೆ. 1999ರಲ್ಲಿ ಉಪೇಂದ್ರ ಹಾಡುವುದಕ್ಕೆ ಶುರು ಮಾಡಿದ್ದರು. ತಾವೇ ನಿರ್ದೇಶಿಸಿದ ಉಪೇಂದ್ರ ಸಿನಿಮಾ ಮೂಲಕ ಗಾಯಕರೂ ಆಗಿದರು. "ಉಪ್ಪಿಗಿಂತ ರುಚಿ ಬೇರೆ ಇಲ್ಲ.." ಈ ರಗಡ್ ಸಾಂಗ್ ಸಂಗೀತ ಪ್ರಿಯರಿಗೆ ಹೊಸ ಟೇಸ್ಟ್ ಕೊಟ್ಟಿತ್ತು. ರೊಮ್ಯಾಂಟಿಕ್ ಸಾಂಗ್ ಬಿಟ್ಟು, ಇತ್ತ ಟಪ್ಪಾಂಗುಚ್ಚಿಯೂ ಅಲ್ಲದ. ಅತ್ತ ಮಾಸ್ ಸಾಂಗ್ ಕೂಡ ಅಲ್ಲದ ತನ್ನವೇ ವಿಶಿಷ್ಟ ಶೈಲಿಯನ್ನು ಹುಟ್ಟು ಹಾಕಿದ್ದರು. ಇಲ್ಲಿಂದ ಉಪ್ಪಿ ಧ್ವನಿ ಅಂದರೆ, ಅದಕ್ಕೆ ಉಪ್ಪಿಗಿಂತ ರುಚಿ ಜಾಸ್ತಿ ಅನ್ನುವಂತಾಗಿತ್ತು.

  ಉಪ್ಪಿ ಹಾಡಿಗೆ ಭಾರಿ ಡಿಮ್ಯಾಂಡ್

  ಉಪ್ಪಿ ಹಾಡಿಗೆ ಭಾರಿ ಡಿಮ್ಯಾಂಡ್

  ಉಪೇಂದ್ರ ಬಹುತೇಕ ತಮ್ಮ ಸಿನಿಮಾಗೆ ಹಾಡಿದ್ದೇ ಹೆಚ್ಚು. ಬೇರೆಯ ನಟರ ಸಿನಿಮಾಗಳಿಗೆ ಹಾಡಿದ್ದು ತೀರಾ ವಿರಳ. ಆದರೂ, ಆನ್ ಡಿಮ್ಯಾಂಡ್ ಮೇರೆಗೆ ಶಿವರಾಜ್‌ಕುಮಾರ್, ದರ್ಶನ್, ಶರಣ್, ಅಜಯ್ ರಾವ್ ಸಿನಿಮಾಗಳಿಗೆ ಹಾಡಿದ್ದರು. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಉಪೇಂದ್ರ ಗ್ಯಾಪ್‌ನಲ್ಲಿ ಹಾಡುತ್ತಿದ್ದರು. ಒಂದೇ ದಿನ ಕಮ್ಮಿ ನಾಲ್ಕು ಬೇರೆ ಬೇರೆ ಸಿನಿಮಾಗಳಿಗೆ ಹಾಡಿದ ಉದಾಹರಣೆಗಳೂ ಕೂಡ ಇವೆ. ಆದರೆ, ಅದ್ಯಾಕೋ ಇತ್ತೀಚೆಗೆ ಹಾಡುವುದನ್ನೇ ಕಮ್ಮಿ ಮಾಡಿದ್ದರು.

  ಉಪ್ಪಿ ಸಾಂಗ್‌ನಲ್ಲಿ ಸ್ವೀಟಿ-ನೈಂಟಿ

  ಉಪ್ಪಿ ಸಾಂಗ್‌ನಲ್ಲಿ ಸ್ವೀಟಿ-ನೈಂಟಿ

  ಉಪ್ಪಿ ಈಸ್ ಬ್ಯಾಕ್. ಹೌದು.. ಮತ್ತೆ ಉಪೇಂದ್ರ ಮೈಕ್ ಹಿಡಿದು ಸಿನಿಮಾಗೆ ಹಾಡಿದ್ದಾರೆ. 'ಹುಷಾರ್' ಅನ್ನೋ ಹೊಸ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಸತೀಶ್ ರಾಜ್ ಸಾಹಿತ್ಯ ರಚಿಸಿರುವ "ನೀ ನೋಡೋಕೆ ಸಿಕ್ಸ್‌ಟೀನ್ ಸ್ವೀಟಿ. ಬಿಟ್ಕೊಳೆ ಒಂದ್ ನೈಂಟಿ" ಎಂಬ ಉಪೇಂದ್ರ ಹಾಡಿದ್ದಾರೆ. ಈ ಹಾಡನ್ನು ಇತ್ತೀಚೆಗೆ ಸಾಧುಕೋಕಿಲ ಸ್ಟುಡಿಯೋದಲ್ಲಿ ಉಪೇಂದ್ರ ರೆಕಾರ್ಡ್ ಮಾಡಿದ್ದಾರೆ. 'ಹುಷಾರ್' ಸಿನಿಮಾದಲ್ಲಿ ಎರಡು ಹಾಡುಗಳಿವೆ. ಎ.ಟಿ.ರವೀಶ್ ಹಾಗೂ ನಾಗು ಸಂಗೀತ ನೀಡಿದ್ದು, ಉಪೇಂದ್ರ ಹಾಗೂ ರೆಮೋ ಹಾಡಿದ್ದಾರೆ.

  ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟ ಉಪ್ಪಿ

  ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟ ಉಪ್ಪಿ

  ಉಪೇಂದ್ರ ಗಾಯನಕ್ಕಷ್ಟೇ ಮರಳಿಲ್ಲ. ಬಹಳ ದಿನಗಳ ಬಳಿಕ ಉಪೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಸೂಪರ್ ಸಿನಿಮಾ ಬಳಿಕ ಉಪ್ಪಿ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಈಗಾಗಲೇ ಫೊಸ್ಟರ್ ರಿಲೀಸ್ ಆಗಿದ್ದು, ಟೈಟಲ್ ಮೂಲಕ ಮತ್ತೆ ತಲೆಗೆ ಹುಳಬಿಟ್ಟಿದ್ದಾರೆ. ಉಪೇಂದ್ರ ಸಿನಿಮಾ ಅಂದರೆ, ಆ ಸಿನಿಮಾ ನೋಡುವುದಕ್ಕೆ ಇಡೀ ದಕ್ಷಿಣ ಭಾರತವೇ ಕಾದು ಕೂರುತ್ತೆ. ಸದ್ಯ ಪೋಸ್ಟರ್ ರಿಲೀಸ್ ಆಗಿದ್ದು, ಇನ್ನೂ ಉಳಿದಂತೆ ಎಲ್ಲಾ ಮಾಹಿತಿಯನ್ನೂ ಸೀಕ್ರೆಟ್ ಆಗೇ ಇಟ್ಟಿದ್ದಾರೆ.

  English summary
  After long time Real Star Upendra sung a song for Hushar movie. Here is the details.
  Sunday, March 20, 2022, 17:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X