Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Year Ender 2022 : ಈ ವರ್ಷದ ಟಾಪ್ ಹಾಡುಗಳು ಯಾವುವು? ಕನ್ನಡದ ಟಾಪ್ ಹಾಡು ಯಾವುದು?
2022 ಮುಗಿಯುತ್ತಾ ಬಂದಿದೆ. ಈ ಒಂದು ವರ್ಷದಲ್ಲಿ ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಲವು ಸಿನಿಮಾಗಳು ಹಿಟ್ ಆಗಿವೆ. ಹಲವು ಸ್ಟಾರ್‌ಗಳು ಗ್ಲೋಬಲ್ ಸ್ಟಾರ್‌ಗಳಾಗಿ ಮಿನುಗಿದ್ದಾರೆ.
ವರ್ಷ ಮುಗಿಯುತ್ತಾ ಬಂದಿದ್ದು, ಈ ವರ್ಷದ ಟಾಪ್ ಸಿನಿಮಾಗಳ ಪಟ್ಟಿ, ಟಾಪ್ ನಟರ ಪಟ್ಟಿಗಳೆಲ್ಲ ಬಿಡುಗಡೆ ಆಗುತ್ತಿವೆ. ಇವುಗಳನ್ನು ಪಟ್ಟಿ ಮಾಡುವುದು ಸುಲಭ ಸಹ ಆದರೆ ಈ ವರ್ಷದ ಟಾಪ್ ಹತ್ತು ಹಾಡುಗಳು ಯಾವುವು? ಇದು ಗುರುತಿಸುವುದು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ಹಾಡು ಇಷ್ಟವಿರುತ್ತದೆ.
ಆದರೆ ಮ್ಯೂಸಿಕ್ ಪ್ಲೇ ಅಪ್ಲಿಕೇಶನ್‌ಗಳಿಗೆ ಮೇಲಿನ ಪ್ರಶ್ನೆಗೆ ಉತ್ತರ ಗೊತ್ತಿದೆ. ತಮ್ಮ ಆಪ್‌ನಲ್ಲಿ ಈ ವರ್ಷ ಅತಿ ಹೆಚ್ಚು ಪ್ಲೇ ಆದ ಹಾಡು ಯಾವುದು, ಯಾವ ಸಂಗೀತ ನಿರ್ದೇಶಕನ ಹಾಡುಗಳನ್ನು ಹೆಚ್ಚು ಬಾರಿ ಕೇಳಲಾಯ್ತು. ಯಾವ ಭಾಷೆಯ ಹಾಡನ್ನು ಹೆಚ್ಚು ಬಾರಿ ಕೇಳಲಾಯ್ತು ಎಂಬ ಪಟ್ಟಿಯನ್ನು ಮ್ಯೂಸಿಕ್ ಪ್ಲೇ ಅಪ್ಲಿಕೇಶನ್‌ಗಳು ವರ್ಷಾಂತ್ಯಕ್ಕೆ ಬಿಡುಗಡೆ ಮಾಡುತ್ತವೆ. ಇದೀಗ ಅಮೆಜಾನ್ ಮ್ಯೂಸಿಕ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ವರ್ಷ ಅತಿ ಹೆಚ್ಚು ಕೇಳಲಾದ ಹಾಡುಗಳ ಪಟ್ಟಿ ಇಂತಿದೆ.

ಹೆಚ್ಚು ಕೇಳಲಾದ ಹಾಡು ಯಾವುದು?
ಈ ವರ್ಷ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ಬಾರಿ ಕೇಳಲಾದ ಹಾಡು 'ಕೇಸರಿಯಾ'. 'ಬ್ರಹ್ಮಾಸ್ತ್ರ'ದ ಸಿನಿಮಾದ ಈ ಹಾಡನ್ನು ಅತಿ ಹೆಚ್ಚು ಬಾರಿ ಕೇಳಲಾಗಿದೆಯಂತೆ. ಅಮೆಜಾನ್ ಮ್ಯೂಸಿಕ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕಲಾವಿದ ಹಿಂದಿ ಗಾಯಕ ಅರಿಜಿತ್ ಸಿಂಗ್. ಅತಿ ಹೆಚ್ಚು ಹುಡುಕಲ್ಪಟ್ಟ ಅಥವಾ ಕೇಳಲ್ಪಟ್ಟ ಹಿಂದಿ ಆಲ್ಬಂ ಅಥವಾ ಸಿನಿಮಾ 'ಜುಗ್‌ಜುಗ್ ಜಿಯೋ'. ಭಾರತದಲ್ಲಿ ಈ ವರ್ಷ ಹಿಂದಿ, ಇಂಗ್ಲೀಷ್ ಹಾಗೂ ತಮಿಳು ಹಾಡುಗಳನ್ನು ಅಮೆಜಾನ್ ಮ್ಯೂಸಿಕ್ ನಲ್ಲಿ ಅತಿ ಹೆಚ್ಚು ಜನ ಕೇಳಿದ್ದಾರಂತೆ.

ಕನ್ನಡದ ಯಾವ ಹಾಡು ಟಾಪ್ ಒನ್?
ಕನ್ನಡದ ವಿಷಯಕ್ಕೆ ಬಂದರೆ, ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ 'ರಾರಾ ರಕ್ಕಮ್ಮ' ಹಾಡನ್ನು ಅಮೆಜಾನ್ ಮ್ಯೂಸಿಕ್‌ನಲ್ಲಿ ಅತಿ ಹೆಚ್ಚು ಜನ ಈ ವರ್ಷ ಕೇಳಿದ್ದಾರೆ. ಆದರೆ ಅತಿ ಹೆಚ್ಚು ಹುಡುಕಾಟ ಮಾಡಿರುವುದು, ಕೇಳಿರುವುದು 'ಕೆಜಿಎಫ್ 2' ಸಿನಿಮಾದ ಹಾಡುಗಳನ್ನು. ಕಲಾವಿದನ ಹುಡುಕಾಟದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಟಾಪ್‌ನಲ್ಲಿದ್ದಾರೆ ಅವರ ಸಿನಿಮಾದ ಅತಿ ಹೆಚ್ಚು ಹಾಡುಗಳನ್ನು ಜನ ಕೇಳಿದ್ದಾರಂತೆ ಅಮೆಜಾನ್ ಮ್ಯೂಸಿಕ್‌ನಲ್ಲಿ.

ತಮಿಳಿನ ಯಾವ ಹಾಡು ನಂಬರ್ 1?
ಇನ್ನು ತಮಿಳಿಗೆ ಈ ಬಾರಿ ಅಮೆಜಾನ್ ಮ್ಯೂಸಿಕ್‌ನಲ್ಲಿ ಮೂರನೇ ಸ್ಥಾನ ಲಭಿಸಿದೆ. 'ಬೀಸ್ಟ್' ಸಿನಿಮಾದ 'ಅರೆಬಿಕ್ ಕುತ್ತು' ಹಾಡನ್ನು ಹೆಚ್ಚು ಬಾರಿ ಕೇಳಿದ್ದಾರಂತೆ ಜನ. ಅಮೆಜಾನ್ ಮ್ಯೂಸಿಕ್‌ನಲ್ಲಿ ತಮಿಳಿನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ನಿರ್ದೇಶಿಸಿರುವ ಹಾಡುಗಳನ್ನು ಜನ ಹೆಚ್ಚು ಕೇಳಿದ್ದಾರೆ ಈ ವರ್ಷ. ಇನ್ನು ಈ ವರ್ಷ ಅತಿ ಹೆಚ್ಚು ಹುಡುಕಿ ಕೇಳಿದ ಹಾಡು 'ಬೀಸ್ಟ್' ತಮಿಳು ಸಿನಿಮಾದ್ದು. ಹಾಡುಗಳು ಹಿಟ್ ಆದರೂ ಪಾಪ ಸಿನಿಮಾ ಫ್ಲಾಪ್ ಆಗಿಬಿಟ್ಟಿದೆ.

ತೆಲುಗಿನ ಟಾಪ್ ಹಾಡು ಯಾವುದು?
ತೆಲುಗು ಭಾಷೆಯಲ್ಲಿ ಅತಿ ಹೆಚ್ಚು ಜನ ಈ ವರ್ಷ ಕೇಳಿರುವುದು 'ಊ ಅಂಟಾವ ಊಹು ಅಂಟಾವ' ಹಾಡನ್ನು. ವಿಶೇಷವೆಂದರೆ ಈ ಹಾಡು ಬಿಡುಗಡೆ ಆಗಿದ್ದು ಕಳೆದ ವರ್ಷ. ಆದರೆ ಅಮೆಜಾನ್ ಮ್ಯೂಸಿಕ್‌ನಲ್ಲಿ ಈ ವರ್ಷವೂ ಇದೇ ಹಾಡು ಟಾಪ್ ಒನ್ ತೆಲುಗು ಹಾಡಾಗಿದೆ. ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ತೆಲುಗಿನ ಸಂಗೀತ ಕಲಾವಿದ ದೇವಿಶ್ರೀ ಪ್ರಸಾದ್. ಅತಿ ಹೆಚ್ಚು ಹುಡುಕಲ್ಪಟ್ಟ ಹಾಗೂ ಕೇಳಲ್ಪಟ್ಟ ಆಲ್ಬಂ 'ಪುಷ್ಪ', RRR ಗಿಂತಲೂ ಹೆಚ್ಚು 'ಪುಷ್ಪ' ಹಿಟ್ ಆಗಿದೆ ಅಮೆಜಾನ್ ಮ್ಯೂಸಿಕ್‌ನಲ್ಲಿ ಎಂಬುದು ವಿಶೇಷ. ಅಂದಹಾಗೆ 'ಪುಷ್ಪ' ಈ ವರ್ಷ ಬಿಡುಗಡೆ ಆದ ಸಿನಿಮಾ ಅಲ್ಲ. ಕಳೆದ ವರ್ಷದ ಸಿನಿಮಾ ಅದು.