For Quick Alerts
  ALLOW NOTIFICATIONS  
  For Daily Alerts

  ಒಲಿಂಪಿಕ್ಸ್ ನಲ್ಲಿ ಮೊಳಗಲಿದೆ ಎಆರ್ ರೆಹಮಾನ್ ಗೀತೆ

  |
  ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್, ಬರಲಿರುವ ಲಂಡನ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕಾಗಿ ಗೀತೆಯೊಂದನ್ನು ಸಂಯೋಜಿಸುತ್ತಿದ್ದಾರೆ. ಅದು ಪಂಜಾಬಿ ಭಾಷೆಯ ಗೀತೆಯೆನ್ನುವುದು ವಿಶೇಷ. ಈ ಗೀತೆಯ ಸಂಯೋಜನೆಗಾಗಿ ರೆಹಮಾನ್, ಹಾಲಿವುಡ್ ಖ್ಯಾತ ನಿರ್ದೇಶಕ ಡ್ಯಾನಿ ಬಾಯ್ಲ್ ತಂಡವನ್ನು ಸೇರಿಕೊಂಡಿದ್ದಾರೆ. ಈ ತಂಡದೊಂದಿಗೆ ಸೇರಿ ಸಂಯೋಜಿಸಿದ ಗೀತೆ ಒಲಿಂಪಿಕ್ ಉದ್ಘಾಟನಾ ಗೀತೆಯಾಗಿ ಹೊರಹೊಮ್ಮಲಿದೆ.

  ಈ ಕುರಿತು ಬಂದ ಪ್ರಶ್ನೆಗೆ ಕೊಟ್ಟ ಉತ್ತರದಂತೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ರೆಹಮಾನ್ "ಹೌದು. ನಾನು ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕಾಗಿ ಗೀತೆಯೊಂದನ್ನು ಸಿದ್ಧಪಡಿಸುತ್ತಿದ್ದೇನೆ. ಅದು ಇಂಗ್ಲೆಂಡಿನಲ್ಲಿ ಭಾರತದ ಪ್ರಭಾವವನ್ನು ಪ್ರತಿನಿಧಿಸುವ, ಆಚರಿಸುವ ಗೀತೆಯಾಗಿರಲಿದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಇಷ್ಟೇ ಅಲ್ಲ, ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಇಳೆಯರಾಜಾ 'ನಾನಾಥಾನ್ ಉನ್ ಗಪ್ಪಂದಾ' ಹಾಗೂ 'ರಾಮ-ಲಕ್ಷ್ಮಣ್' ಚಿತ್ರಕ್ಕಾಗಿ ಸಂಗೀತ ಸಂಯೋಜಿಸಿರುವ ಗೀತೆಯೂ ಕೂಡ ಈ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಭಾಗವಾಗಿರಲಿರುವುದು ವಿಶೇಷ. ಈ ಇಬ್ಬರು ಸಂಗೀತ ನಿರ್ದೇಶಕರು ಇಂಗ್ಲೆಂಡ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ತಮ್ಮ ಸಂಗೀತದ ಮೂಲಕ ಪ್ರತಿನಿಧಿಸುತ್ತಿರುವುದು ಭಾರತೀಯರಿಗೆ ಹೆಮ್ಮೆ ಎನಿಸಲಿದೆ.

  ಅಂದಹಾಗೆ, ಹಾಲಿವುಡ್ ಖ್ಯಾತ ನಿರ್ದೇಶಕ ಡ್ಯಾನಿ ಬಾಯ್ಲ್ ಅವರ ಆಸ್ಕರ್ ಪ್ರಶಸ್ತಿ ವಿಜೇತ 'ಸ್ಲಮ್ ಡಾಗ್ ಮಿಲಿಯನೆಯರ್ ಹಾಗೂ '127 ಅವರ್ಸ್' ಚಿತ್ರಗಳಿಗೆ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದರು. ಈಗ ಈ ಜೋಡಿ ಮತ್ತೊಮ್ಮೆ ಜಗತ್ತನ್ನೇ ಪ್ರತಿನಿಧಿಸುತ್ತಿರುವ ಒಲಿಂಪಿಕ್ಸ್ ಗೆ ಒಟ್ಟಾಗಿ ಕೆಲಸ ಮಾಡಿದಂತಾಗಿದೆ.

  ಜಗತ್ಪ್ರಸಿದ್ಧ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಪರಿಚಯ ಇಲ್ಲದವರಿಲ್ಲ. ಇದೀಗ. ಸೂಪರ್ ಸ್ಟಾರ್ ಉಪೇಂದ್ರ ನಟನೆ ಹಾಗೂ ಕೆ ಮಂಜು ನಿರ್ಮಾಣದ 'ಗಾಡ್ ಫಾದರ್' ಕನ್ನಡ ಚಿತ್ರಕ್ಕೆ ಸಂಗೀತ ಸಂಯೋಜಿಸಿ ಅದರ ಆಡಿಯೋ ಬಿಡುಗಡೆಗೆ ಬೆಂಗಳೂರಿಗೆ ಕೂಡ ಬಂದಿದ್ದ ರೆಹಮಾನ್ ಅವರೀಗ ಕನ್ನಡಿಗರಿಗೆ ಇನ್ನೂ ಹತ್ತಿರವಾಗಿದ್ದಾರೆ ಎಂಬುದು ಉಲ್ಲೇಖನೀಯ. (ಒನ್ ಇಂಡಿಯಾ ಕನ್ನಡ)

  English summary
  One of the greatest Indian composers, AR Rahman has been roped in to compose a song for London Olympics' opening ceremony. The music is most likely to be in Punjabi language, given the influence of Indian culture in Britain.
 
  Thursday, July 12, 2012, 15:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X