Just In
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Automobiles
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಧ್ವನಿಸುರುಳಿ ವಿಮರ್ಶೆ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಕನ್ನಡದಲ್ಲಿ ಇದುವರೆಗೆ ಬಂದ ಚಿತ್ರಗಳ ಪೈಕಿ ದೊಡ್ಡ ಬಜೆಟಿನ ಚಿತ್ರವೆಂದೇ ಬಿಂಬಿತವಾಗಿರುವ ದರ್ಶನ್ ಮುಖ್ಯ ಭೂಮಿಕೆಯಲ್ಲಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಚಿತ್ರಕ್ಕೆ ಯಶೋವರ್ಧನ್ ಅವರು ಸಂಗೀತ ನೀಡಿದ್ದು ಎಲ್ಲಾ ಹಾಡಿಗೆ ಕೇಶವಾದಿತ್ಯ (ರಾಮಜೋಗಿ ಹಳ್ಳಿ) ಸಾಹಿತ್ಯ ನೀಡಿದ್ದಾರೆ. ಹರಿಕೃಷ್ಣ ಅವರ ಬ್ಯಾಕ್ ಗ್ರೌಂಡ್ ಸಂಗೀತ ಚಿತ್ರಕ್ಕಿದೆ.
18ನೇ ಶತಮಾನದ ಕಿತ್ತೂರು ಸಂಸ್ಥಾನಕ್ಕೆ ಸೇರಿದ ಸಂಗೊಳ್ಳಿ ಪುಣ್ಯ ಭೂಮಿಯ ರಕ್ಷಣೆಗಾಗಿ ಬ್ರಿಟಿಷರ ವಿರುದ್ದ ಹೋರಾಡಿದ ಸಂಗೊಳ್ಳಿ ರಾಯಣ್ಣನ ಕಥೆಯಾದಾರಿತವಾಗಿರುವ ಈ ಚಿತ್ರದ ನಿರ್ಮಾಪಕರು ಆನಂದ ಅಪ್ಪುಗೋಳ್ ಮತ್ತು ನಿರ್ದೇಶಕರು ನಾಗಣ್ಣ. ಉಳಿದ ತಾರಾಗಣದಲ್ಲಿ ಜಯಪ್ರದ, ನಿಖಿತಾ ತುಖ್ರಾಲ್, ಶಶಿಕುಮಾರ್ ಮುಂತಾದವರಿದ್ದಾರೆ.
ಮಲ್ಲ ಮಲ್ಲ ನನ್ನ ನಲ್ಲ ಪ್ರೀತಿ ಕೊಟ್ಟ ಕೊಬ್ರಿ ಬೆಲ್ಲ
ಹಾಡಿರುವವರು: ಸೋನು ನಿಗಮ್, ಅನುರಾಧ ಭಟ್
ಜಾನಪದ ಸೊಗಡಿನ ಸಾಹಿತ್ಯ ಮತ್ತು ಸಂಗೀತವಿರುವ ಡ್ಯುಯೆಟ್ ಹಾಡು. ಫಾಸ್ಟ್ ಟ್ರ್ಯಾಕ್ ನಲ್ಲಿ ಸಾಗುವ ಇಂಪಾದ ಟ್ಯೂನ್. ಕದ್ದು ಕದ್ದು ನೋಡೋ.. ಕಣ್ಣ ಕಣ್ಣ ಚುಚ್ಚುತೈತೆ ಪ್ರಾಯದ ಮುಳ್ಳ.. ಹೀಗೆ ಉತ್ತರ ಕರ್ನಾಟಕ ಶೈಲಿಯಲ್ಲಿರುವ ಸಾಹಿತ್ಯ.
ಜನನಿ ಜನ್ಮಭೂಮಿ. ಭೂಮಿ ನಮ್ಮ ತಾಯಿ
ಹಾಡಿರುವವರು: ಶಂಕರ್ ಮಹಾದೇವನ್, ರಾಜೇಶ್ ಕೃಷ್ಣನ್, ಹೇಮಂತ್, ನಂದಿತಾ, ಪ್ರಕಾಶ್
ಶಾಸ್ತ್ರೀಯ ಮತ್ತು ಜಾನಪದ ಟ್ಯೂನ್ ಮಿಕ್ಸ್ ಆಗಿ ಸಾಗುವ ಹಾಡು. ಹಾಡಿನ ಮಧ್ಯೆ ಕವ್ವಾಲಿ ಟ್ಯೂನ್ ಸಂಗೀತ ನಿರ್ದೇಶಕರು ಬಳಸಿಕೊಂಡಿದ್ದು, ಹಾಡಿನ ಮೊದಲಸಾಲು ಈ ಹಿಂದೆ ಬಂದ ಉಪೇಂದ್ರ ಅವರ ಜನಪ್ರಿಯ ಚಿತ್ರದ ಹಾಡೊಂದನ್ನು ಮೆಲುಕು ಹಾಕುತ್ತದೆ.
ನನ್ನದೇ ವೀಣೆ ಮೀಟಿದೆ
ಹಾಡಿರುವವರು: ಸೋನು ನಿಗಮ್, ಚಿತ್ರಾ, ಪ್ರಕಾಶ್
ಆಲ್ಬಮ್ ನಲ್ಲಿರುವ ಮೆಲೋಡಿಯಸ್ ಹಾಡು. ಅತ್ಯುತ್ತಮ ಎನ್ನಬಹುದಾದ ಟ್ಯೂನ್ ಅನ್ನು ನಿರ್ದೇಶಕರು ಈ ಹಾಡಿನಲ್ಲಿ ನೀಡಿದ್ದಾರೆ. ಹಿನ್ನಲೆ ಕೋರಸ್ ಬಳಸಿಕೊಂಡಿದ್ದು ಹಾಡಿಗೆ ಪೂರಕವಾಗಿದೆ. ಈ ಹಾಡು ಜನಪ್ರಿಯಗೊಳ್ಳುವುದರಲ್ಲಿ ಸಂಶಯವೇ ಬೇಡ.
ವೀರಭೂಮಿ ಈ ದೇಶ ಮೆಟ್ಟಿ ಮೆರೆಯುವ
ಹಾಡಿರುವವರು: ಡಾ. ಎಸ್ ಪಿ ಬಾಲಸುಬ್ರಮಣ್ಯಂ, ಕೋರಸ್
ದೇಶ ಭಕ್ತಿ ಸಾರುವ ಫಾಸ್ಟ್ ಬಿಟ್ ನಲ್ಲಿ ಸಾಗುವ ಹಾಡು. ಕರುನಾಡ ಸಿಂಹಗಳೇ ಕೆಚ್ಚೆದೆಯ ಕಲಿಗಳೇ.. ಈ ಭೂಮಿ ಈ ಸೀಮೆ ಎಂದೆಂದೂ ನಮ್ಮದೇ .. ಇತ್ಯಾದಿ ಸಾಹಿತ್ಯವಿರುವ ಹಾಡು. ಹಾಡಿನ ಮಧ್ಯೆ ಕೆಲವೊಂದು ಡೈಲಾಗ್ ಗಳನ್ನು ಬಳಸಿಕೊಳ್ಳಲಾಗಿದೆ.
ಗಂಡು ಮೆಟ್ಟಿದ ನಾಡು ಇಂದು ಗಂಡುಗಲಿಗಳ ಬೀಡು
ಹಾಡಿರುವವರು: ಶಂಕರ್ ಮಹಾದೇವನ್, ರಾಜೇಶ್ ಕೃಷ್ಣನ್, ಹೇಮಂತ್
ನಾಯಕನ ಸಾಮರ್ಥ್ಯವನ್ನು ಬಿಂಬಿಸುವ ಮತ್ತು ನಾಯಕ ಹೋರಾಟಕ್ಕೆ ಅಣಿಯಾಗುವಾಗ ಬರುವ ಹಿನ್ನಲೆ ಸಂಗೀತವಿರುವ ಹಾಡು. ಮತ್ತೊಂದು ಹೈಪಿಚ್ ನಲ್ಲಿ ಸಾಗುವ ಹಾಡು. ಶಂಕರ್ ಮಹಾದೇವನ್ ಅವರ ಕನ್ನಡ ಉಚ್ಚಾರಣೆ ಸ್ಪಷ್ಟ.
ಚಿನ್ನದಂತ ಅರಮನೆಯು ಕಣ್ಣ ಕೊರೆದ
ಹಾಡಿರುವವರು: ಡಾ. ಕೆ ಜೆ ಯೇಸುದಾಸ್
ಹಾಡಿನ ಪಲ್ಲವಿ ಈ ಹಿಂದೆ ಬಂದ ಅನಂತ್ ನಾಗ್ ಅವರ ಸೂಪರ್ ಹಿಟ್ ಚಿತ್ರದ ಟ್ಯೂನ್ ನೆನಪಿಸುತ್ತಿದೆ. ಯೇಸುದಾಸ್ ಅವರ ಸ್ವರ ಉಚ್ಚಾರಣೆ, ಶೃತಿ ಬದಲವಾಣೆಗೆ ಒಂದು ಸಲಾಂ.
ಎಲ್ಲಾ ಹಾಡಿಗೆ ಮುನ್ನ ಸಂಗೊಳ್ಳಿ ರಾಯಣ್ಣನ ಕೆಚ್ಚೆದೆಯ ಹೋರಾಟದ ಬಗ್ಗೆ ಕಿಚ್ಚ ಸುದೀಪ್ ಅವರಿಂದ ಡೈಲಾಗ್ ಗಳು ಮೂಡಿ ಬಂದಿದೆ.