»   » ಶ್ರಾವಣಿ ಸುಬ್ರಮಣ್ಯ ಆಡಿಯೋ: ನಮ್ಮ ರೇಟಿಂಗ್

ಶ್ರಾವಣಿ ಸುಬ್ರಮಣ್ಯ ಆಡಿಯೋ: ನಮ್ಮ ರೇಟಿಂಗ್

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada
Rating:
4.0/5

ಮಳೆ ನಿಂತರೂ ಹನಿ ಜಾರಿಯಲ್ಲಿರುವಂತೆ ಗಣೇಶ್ ಚಿತ್ರವೆಂದ ಮೇಲೆ ಮುಂಗಾರು ಮಳೆಯ ಹಾಡುಗಳ ನೆನಪಿಗೆ ಕೊನೆಯಿಲ್ಲ. ಅದ್ದರಿಂದಲೇ ಸಹಜವಾಗಿ ಗಣೇಶ್ ಚಿತ್ರಗಳ ಹಾಡುಗಳ ಬಗ್ಗೆ ಒಂದು ಕುತೂಹಲ ಜಾರಿಯಲ್ಲಿ ಇದ್ದೇ ಇರುತ್ತದೆ.

ಅದೇ ಕುತೂಹಲದಿಂದ ಹರಿಕೃಷ್ಣ ಸಂಗೀತ ನಿರ್ದೇಶನದ, ಮಂಜು ಸ್ವರಾಜ್ ನಿರ್ದೇಶನದ ಶ್ರಾವಣಿ ಸುಬ್ರಮಣ್ಯ ಚಿತ್ರದ ಹಾಡುಗಳನ್ನು ಕೇಳಿದಾಗ ನಿರಾಸೆ ಆಗವುದಿಲ್ಲ.

ಆದರೂ ಹರಿ ಸಂಗೀತ ನಿರ್ದೇಶನದ ಹಾಡುಗಳಲ್ಲಿನ ಲವಲವಿಕೆ ಹಾಗೂ ಹೊಸತನ ಇಲ್ಲಿ ಸ್ವಲ್ಪ ಮಟ್ಟಿಗೆ ಕಾಣೆಯಾಗಿದೆ ಎಂದು ಹೇಳಿದರೆ ಸಂಗೀತ ನಿರ್ದೇಶಕರು ಅನ್ಯಥಾ ಭಾವಿಸಬಾರದು.

ಇತ್ತೀಚಿನ ಚಿತ್ರಗಳಲ್ಲಿನ ಸಿದ್ಧ ಸೂತ್ರದಲ್ಲೇ ಹಾಡುಗಳು ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ಚಿತ್ರದ ಹಾಡುಗಳು ಹೇಗಿವೆ? ಸ್ಲೈಡ್ ಪ್ಲೀಸ್..

ಚಿತ್ರದ ತಾರಾಗಣದಲಿ

ನಿರ್ಮಾಪಕ : ಕೆ ಎ ಸುರೇಶ್
ನಿರ್ದೇಶಕ: ಮಂಜು ಸ್ವರಾಜ್
ಸಂಗೀತ: ವಿ ಹರಿಕೃಷ್ಣ
ತಾರಾಗಣದಲ್ಲಿ : ಗಣೇಶ್, ಅಮೂಲ್ಯ, ಅನಂತ್ ನಾಗ್, ನೀನಾಸಂ ಅಶ್ವಥ್

ಮೊದಲ ಹಾಡು

ಸಾಹಿತ್ಯ: ಕೃಷ್ಣೇ ಗೌಡ
ಹಾಡಿರುವವರು : ಮಂಜುಳ ಗುರುರಾಜ್
ಹಾಡು : ಅಕ್ಕಲ್ ಬೆಣ್ಣೆ

ಕೃಷ್ಣೇ ಗೌಡರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಹಾಡು ಮಾಸ್ ಪ್ರೇಕ್ಷಕರಿಗಾಗಿಯೇ ಸಿದ್ಧವಾದಂತಿದ್ದೆ. ಹರಿ ಉತ್ತಮವಾಗಿ ಸಂಗೀತ ನೀಡಿರುವ ಈ ಗೀತೆ ಕುಣಿತಕ್ಕೆ ಹೇಳಿ ಮಾಡಿಸಿದಂತಿದೆ. ಬಹಳ ದಿನಗಳ ನಂತರ ಹಾಡಿರುವ ಮಂಜುಳ ಗುರುರಾಜ್ ತಮ್ಮ ಹಿಂದಿನ ಗತ್ತನ್ನು ಉಳಿಸಿಕೊಂಡಿದ್ದಾರೆ. ಅವರ ಧ್ವನಿ ಹಾಗೂ ಹಾಡಿನಲ್ಲಿ ನುಸುಳಿರುವ ಒಳಗೆ 'ಸೇರಿದರೆ ಗುಂಡು' ಎಂಬ ಸಾಲುಗಳು ಹಳೆಯ 'ಗುಂಡಿನ'ಹಾಡನ್ನೂ ಸೇರಿದಂತೆ 90ರ ದಶಕದ ಹಾಡುಗಳನ್ನು ನೆನಪಿಸುತ್ತದೆ.

ಎರಡನೇ ಹಾಡು

ಸಾಹಿತ್ಯ: ಕವಿರಾಜ್
ಹಾಡಿರುವವರು : ಸೋನು ನಿಗಂ
ಹಾಡು : ನಿನ್ನ ನೋಡೋ

ಕನ್ನಡ ಸಿನಿಮಾ ಸಂಗೀತದಲ್ಲಿ made for each other ಎಂಬಂತೆ ಆಗಿ ಹೋಗಿರುವ ಸೋನು, ಹರಿ, ಗಣೇಶ್ ರ ಕಾಂಬಿನೇಶನ್ನಿನ ಮತ್ತೊಂದು ಗೀತೆ. ಕವಿರಾಜರ ಸಾಹಿತ್ಯವಿರುವ ಗೀತೆ ಕೇಳಲು ಮಧುರವಾಗಿದೆ ಎಂಬುದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯವಿಲ್ಲವೇನೋ. ಈ ರೀತಿಯ ಹಾಡುಗಳಲ್ಲಿ ಪಳಗಿ ಹೋಗಿರುವ ಸೋನು ಹೆಚ್ಚಿನ ಶ್ರಮವಿಲ್ಲದೆ ಹಾಡಿದ್ದಾರೆ. ಆದರೆ ಇಷ್ಟು ಕನ್ನಡ ಚಿತ್ರಗಳನ್ನು ಹಾಡಿರುವ ಸೋನು ಕನ್ನಡ ಉಚ್ಚಾರಣೆ improve ಮಾಡಿಕೊಳ್ಳಬೇಕು.

ಮೂರನೇ ಹಾಡು

ಸಾಹಿತ್ಯ: ಕವಿರಾಜ್
ಹಾಡಿರುವವರು : ಸೋನು ಹಾಗೂ ನಂದಿತಾ
ಹಾಡು : ನಗುವ ಮೊಗವ

ಹರಿಕೃಷ್ಣರ ಗೀತೆಗಳಲ್ಲಿನ ಜೀವಂತಿಕೆ ಈ ಗೀತೆಯಲ್ಲಿ ಕಾಣುತ್ತದೆ. ಕವಿರಾಜ್ ರ ಸಾಹಿತ್ಯಕ್ಕೆ ಧ್ವನಿಗೂಡಿಸಿರುವ ಸೋನು ಹಾಗೂ ನಂದಿತಾ ಹಾಡಿಗೆ ಮತ್ತಷ್ಟು ಜೀವ ತುಂಬಿದ್ದಾರೆ. ಉತ್ತಮವಾದ ವಾದ್ಯ ಸಂಯೋಜನೆ ಹಾಗೂ ಉತ್ತಮ ಗಾಯನವಿರುವ ಈ ಹಾಡನ್ನು ಕೇಳುತ್ತಿದ್ದರೆ ಎಲ್ಲೋ ಮೊದಲೇ ಕೇಳಿದಂತೆ ಅನಿಸಿದರೂ ಎಲ್ಲಿ ಎಂದು ಥಟ್ಟನೇ ಗೊತ್ತಾಗದಿರುವುದೇ ಈ ಹಾಡಿನ ಹೆಗ್ಗಳಿಕೆ.

ನಾಲ್ಕನೇ ಹಾಡು

ಸಾಹಿತ್ಯ: ಡಾ.ನಾಗೆಂದ್ರ ಪ್ರಸಾದ್
ಹಾಡಿರುವವರು : ಶಾನ್
ಹಾಡು : ಕಣ್ಣಲ್ಲೇ ಕಣ್ಣಿಟ್ಟು

ನಾಯಕ ನಾಯಕಿಯ ಪ್ರೇಮದ ಪರಿಯನ್ನು ವಿವರಿಸುವ ಹಾಡಿಗೆ ಶಾನ್ ಕಂಠವನ್ನು ಉತ್ತಮವಾಗಿ ಬಳಸಿಕೊಳ್ಳಲಾಗಿದೆ. ಡಾ.ನಾಗೆಂದ್ರ ಪ್ರಸಾದ್ ರಿಗೆ ಈ ರೀತಿಯ ಹಾಡಿನ ಸಾಹಿತ್ಯ ಕರತಲಾಮಲಕ. ಯುವಕ ಯುವತಿಯರಿಗೆ ಹೆಚ್ಚು ಪ್ರಿಯವಾಗಬಹುದಾದ ಗೀತೆ. ಚಿತ್ರದ ಕತೆಗೆ ಪೂರವಾಗಿರುವಂತಿದೆ ಈ ಹಾಡು.

English summary
Audio review of Golden Star Ganesh and Amulya starer Sravani Subramanya. Album has four songs and our rating 4/5.
Please Wait while comments are loading...