»   » ಪುನೀತ್ ಅಭಿನಯದ 'ರಣವಿಕ್ರಮ' ಆಡಿಯೋ ವಿಮರ್ಶೆ

ಪುನೀತ್ ಅಭಿನಯದ 'ರಣವಿಕ್ರಮ' ಆಡಿಯೋ ವಿಮರ್ಶೆ

Posted By:
Subscribe to Filmibeat Kannada

2015ರ ಬಹು ನೀರಿಕ್ಷೀತ ಪುನೀತ್‌ ರಾಜಕುಮಾರ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ರಣವಿಕ್ರಮ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಂಡಿದೆ.

ಗಿರಿರಾಜ್ ನಿರ್ದೇಶನದ 'ಮೈತ್ರಿ' ಚಿತ್ರ ಹಿಟ್ ಆದ ನಂತರ, ಪವರ್ ಸ್ಟಾರ್ ಅಭಿಮಾನಿಗಳು ಎದುರು ನೋಡುತ್ತಿರುವ 'ರಣವಿಕ್ರಮ' ಚಿತ್ರ ಈಗಾಗಲೇ ಹಲವು ವಿಶೇಷತೆಗಳಿಂದ ಕನ್ನಡ ಸಿನಿ ಪ್ರಿಯರ ಹುಬ್ಬೇರಿಸುವಂತೆ ಮಾಡಿದೆ. (ಪವನ್ ಒಡೆಯರ್ ಸಂದರ್ಶನ)

ಚಿತ್ರದ ಹಾಡೊಂದನ್ನು ಹಾಡುವ ಮೂಲಕ ಪುನೀತ್, ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದ್ದಾರೆ. ಪುನೀತ್ ಹುಟ್ಟುಹಬ್ಬದ ದಿನವಾದ ಮಾರ್ಚ್ ಹದಿನೇಳರಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದೂ ಆಗಿದೆ.

ರಣವಿಕ್ರಮ ಚಿತ್ರದ ಆಲ್ಬಂನಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಜಯಣ್ಣ - ಭೋಗೇಂದ್ರ ಕಂಬೈನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಂಗೀತ ನೀಡಿದವರು ವಿ ಹರಿಕೃಷ್ಣ. ಚಿತ್ರದ ಆಲ್ಬಂನನ್ನು ಡಿಬೀಟ್ಸ್ ಆಡಿಯೋ ಸಂಸ್ಥೆ ಹೊರ ತಂದಿದೆ. [ರಣವಿಕ್ರಮ ಚಿತ್ರದ ಹಾಡುಗಳಿಗಾಗಿ ಕ್ಲಿಕ್ಕಿಸಿ]

ರಣವಿಕ್ರಮ, ನೀ ಮಾಡು ಕನ್ನಡವ ಸಕ್ರಮವಾ

ಸಾಹಿತ್ಯ : ಪವನ್ ಒಡೆಯರ್
ಹಾಡಿರುವವರು : ಕುನಾಲ್ ಗಾಂಜಾವಾಲ, ಸಂತೋಷ್ ವೆಂಕಿ

ರಣವಿಕ್ರಮ, ನೀ ಮಾಡು ಕನ್ನಡವ ಸಕ್ರಮವಾ.. ಕೋಟಿ ಕೋಟಿ ಮನಸ್ಸುಗಳು, ನೊಂದ ಹೃದಯಗಳು ಎನ್ನುವ ಸಾಹಿತ್ಯದ ಮೂಲಕ ಸಾಗುವ ಫಾಸ್ಟ್ ಬೀಟ್ ನಲ್ಲಿ ಸಾಗುವ ಈ ಹಾಡು ನಾಯಕನನ್ನು ಹುರಿದುಂಬಿಸುವಂತದ್ದು. ಶಿವಣ್ಣ ಅಭಿನಯದ 'ರಣರಂಗ' ಚಿತ್ರದಲ್ಲಿ ರಾಜಕುಮಾರ್ ಹಾಡಿರುವ 'ಜಗವೇ ಒಂದು ರಣರಂಗ, ಬಾರೋ ಬಾರೋ ನನ್ನ ರಾಜ' ಹಾಡಿನ ಸಾಹಿತ್ಯ ಮತ್ತು ಟ್ಯೂನ್ ಅನ್ನು ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.

ನೀನೇ..ನೀನೇ..

ಸಾಹಿತ್ಯ : ಕವಿರಾಜ್
ಹಾಡಿರುವವರು : ಪುನೀತ್ ರಾಜಕುಮಾರ್, ಪಲಕ್ ಮುಚ್ಚಲ್

ನೀನೇ ನೀನೇ ನೀನೇ ನೀನೇ.. ಮನಸ್ಸು ಮುಟ್ಟೋ ಜೀವ ನೀನೇ ಎನ್ನುವ ಕವಿರಾಜ್ ಅವರ ಸುಂದರ ಸಾಹಿತ್ಯವಿರುವ ಮೆಲೋಡಿಯಸ್ ಹಾಡು. ಹಾಡಿನ ಹಿನ್ನಲೆ ಸಂಗೀತ ಸಾಹಿತ್ಯವನ್ನು ಆವರಿಸಿ ಬಿಟ್ಟಿದೆ. ಹಾಡಿಗೆ ಬಳಸಿಕೊಂಡಿರುವ ಕೆಲವೊಂದು ಟ್ಯೂನ್ ಗಳು ವಿಶಿಷ್ಟವಾಗಿದೆ.

ಏರ್ ಡೆಲ್

ಸಾಹಿತ್ಯ : ಪವನ್ ಒಡೆಯರ್
ಹಾಡಿರುವವರು : ವಿಜಯ್ ಪ್ರಕಾಶ್

ಶಾಸ್ತ್ರೀಯ ಟ್ಯೂನ್ ಹಿನ್ನೆಲೆ ಮೂಲಕ ಸಾಗಿ ನಂತರ ವೆಸ್ಟರ್ನ್ ಬೀಟ್ ನಲ್ಲಿ ಸಾಗುವ ಹಾಡು. ವಿಜಯ್ ಪ್ರಕಾಶ್ ಮತ್ತು ಕೋರಸ್ ಹಾಡಿರುವ ಈ ಹಾಡಿನಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿಲ್ಲ. ಹಾಡಿಗೆ ನೀಡಿದ ಸಂಗೀತ ಸುಮಾರಾಗಿದೆ.

ಗೌರೀ..ಗೌರೀ..

ಸಾಹಿತ್ಯ : ಕೆ ಕಲ್ಯಾಣ್
ಹಾಡಿರುವವರು : ಕಾರ್ತಿಕ್, ಪ್ರಿಯಾ ಹಿಮೇಶ್

ಕಂಡೆ ಕಂಡೆ ನಾ ಚೆಲುವ ಮೊಗನ, ಚೆಲುವ ಗೌರೀಶನಾ.. ಹೀಗೆ ಭಕ್ತಿಗೀತೆಯ ಬೀಟ್ ಮತ್ತು ಸಾಹಿತ್ಯದ ಜನಪದ ಸೊಗಡಿನಲ್ಲಿ ಸಾಗುವ ಆಲ್ಬಂನ ಮತ್ತೊಂದು ಮೆಲೋಡಿಯಸ್ ಹಾಡು. ಊರಹಬ್ಬ, ತೇರಿನ ಸಮಯದಲ್ಲಿ ಬಳಸಲಾಗುವ ಸಂಗೀತ ವಾದ್ಯಗಳನ್ನು ಹಾಡಿನಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ.

ಚಿತ್ರದ ತಾರಾಗಣದಲ್ಲಿ

ಪುನೀತ್ ರಾಜಕುಮಾರ್, ಆದಾ ಶರ್ಮಾ, ಅಂಜಲಿ, ಗಿರೀಶ್ ಕಾರ್ನಾಡ್, ಚರಣ್ ರಾಜ್, ವಿಕ್ರಂ ಸಿಂಗ್, ರಂಗಾಯಣ ರಘು, ಸುಧಾ ಬೆಳ್ವಾಡಿ, ದಿನೇಶ್ ಮಂಗ್ಳೂರು ಮುಂತಾದವರಿದ್ದಾರೆ.

English summary
Audio review of Puneeth Rajkumar starer, Pavan Wadeyar directed Ranavikrama movie. V Harikrishna has composed the songs and album has four songs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada