For Quick Alerts
  ALLOW NOTIFICATIONS  
  For Daily Alerts

  ಹಿಟ್ ಆಯ್ತು ಸರಿಗಮಪ ಸುನೀಲ್ ಹಾಡಿದ ಸಿನಿಮಾ ಹಾಡು

  By Naveen
  |
  ಅಯೋಗ್ಯನ ಅಡ್ಡದಲ್ಲಿ ಸರಿಗಮಪ ಸುನೀಲ್...! | Filmibeat Kannada

  ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿದ ಬಹುತೇಕ ಗಾಯಕರು ಇಂದು ಸಿನಿಮಾದಲ್ಲಿ ಹಾಡಿದ್ದಾರೆ. ಅದರಲ್ಲಿಯೂ ಸರಿಗಮಪ ಸೀಸನ್ 13ರ ಅನೇಕ ಸ್ಪರ್ಧಿಗಳು ದೊಡ್ಡ ಜನಪ್ರಿಯತೆಗನ್ನು ಗಳಿಸಿದ್ದಾರೆ. ಅದರ ಪೈಕಿ ಒಬ್ಬರಾಗಿದ್ದ ಸುನೀಲ್ ಈಗ ಸಿನಿಮಾ ಹಾಡು ಹಾಡಿದ್ದಾರೆ.

  ತನ್ನ ಹಾಡುಗಳು ಮೂಲಕ ಸರಿಗಮಪ ಸೀಸನ್ 13 ಕಾರ್ಯಕ್ರಮದ ವಿಜೇತನಾಗಿದ್ದ ಸುನೀಲ್ ಈಗ ಚಿತ್ರಗೀತೆ ಹಾಡಿದ್ದಾರೆ. ಅಷ್ಟೇ ಅಲ್ಲದೆ ಸುನೀಲ್ ಹಾಡು ಇದೀಗ ಸೂಪರ್ ಹಿಟ್ ಆಗಿದೆ. ಅಂದಹಾಗೆ, ಸದ್ಯ ಸುನೀಲ್ ಹಾಡಿರುವುದು 'ಅಯೋಗ್ಯ' ಸಿನಿಮಾಗಾಗಿ.

  'ಅಯೋಗ್ಯ' ನ ಗಾನಕ್ಕೆ ಪವರ್ ಸ್ಟಾರ್ ಸಾಥ್ 'ಅಯೋಗ್ಯ' ನ ಗಾನಕ್ಕೆ ಪವರ್ ಸ್ಟಾರ್ ಸಾಥ್

  ಸತೀಶ್ ನೀನಾಸಂ ನಟನೆಯ 'ಅಯೋಗ್ಯ' ಸಿನಿಮಾದ ನಾಲ್ಕನೇ ಹಾಡು ನಿನ್ನೆ ಬಿಡುಗಡೆಯಾಗಿದೆ. ಚಿತ್ರದ ಉಳಿದ ಹಾಡುಗಳ ರೀತಿ ಈ ಹಾಡು ಸಹ ಜನರ ಪ್ರೀತಿ ಗಳಿಸಿದೆ. ಸದ್ಯ ಯೂಟ್ಯೂಬ್ ನಲ್ಲಿ 44ನೇ ಟ್ರೆಂಡಿಂಗ್ ವಿಡಿಯೋ ಇದಾಗಿದೆ. ಈ ಹಾಡು ಈಗ ಎರಡು ಲಕ್ಷದ ಗಡಿ ದಾಟುತ್ತಿದೆ.

  ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸರಿಗಮಪ ಕಾರ್ಯಕ್ರಮದ ಸುನೀಲ್ ಗೆ ಒಂದು ಅವಕಾಶ ನೀಡಿದ್ದಾರೆ. ಪಕ್ಕಾ ಲೋಕಲ್ ಆಗಿರುವ ಈ ಹಾಡನ್ನು ಸುನೀಲ್ ಚಿಂದಿ ಉಡಾಯಿಸಿದ್ದಾರೆ.

  ayogya movie 4th song got 1.8 lakh views in youtube

  ಅಂದಹಾಗೆ, 'ಅಯೋಗ್ಯ' ಚಿತ್ರದಲ್ಲಿ ಸತೀಶ್ ನೀನಾಸಂ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಮಹೇಶ್ ಕುಮಾರ್ ಚಿತ್ರದ ನಿರ್ದೇಶನ ಮಾಡಿದ್ದು, ಎಲ್ಲ ಹಾಡುಗಳನ್ನು ಬಹದ್ದೂರ್ ಚೇತನ್ ಬರೆದಿದ್ದಾರೆ.

  English summary
  Actor Sathish Neenasam and Rachita Ram's 'Ayogya' movie 4th song got 1.8 lakh views in youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X