»   » 'ಬಿಗ್ ಗೋಲ್ಡನ್ ವಾಯ್ಸ್' ಗೆ ಐಶ್ವರ್ಯ ಮಲ್ಲಿಕಾರ್ಜುನ ಆಯ್ಕೆ

'ಬಿಗ್ ಗೋಲ್ಡನ್ ವಾಯ್ಸ್' ಗೆ ಐಶ್ವರ್ಯ ಮಲ್ಲಿಕಾರ್ಜುನ ಆಯ್ಕೆ

Posted By:
Subscribe to Filmibeat Kannada

ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ನೆಟ್ ವರ್ಕ್ ಹೊಂದಿರುವ 92.7 ಬಿಗ್ ಎಫ್.ಎಮ್, ಮಂಗಳೂರು ಇವರು ರೋಶನಿ ನಿಲಯ ಕಾಲೇಜು ಮಂಗಳೂರಿನಲ್ಲಿ ಆಗಸ್ಟ್ 1ರಂದು ಮಂಗಳೂರು ಪ್ರಾದೇಶಿಕ ವಿಬಾಗದ ಅಂತಿಮ ಸುತ್ತಿನ ಬೆನೆಡ್ರಿಲ್ಲ್ 'ಬಿಗ್ ಗೋಲ್ಡನ್ ವಾಯ್ಸ್' ಫೈನಲ್ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮಂಗಳೂರಿನ ಐಶ್ವರ್ಯ ಮಲ್ಲಿಕಾರ್ಜುನ ಪ್ರಾದೇಶಿಕ ಸುತ್ತಿನ ಫೈನಲ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡು, ಮುಂಬೈಯಲ್ಲಿ ನಡೆಯಲಿರುವ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ, ಲಾಸ್ಯ ಉಪಾಧ್ಯಯ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.

Benedryl Big Golden voice regional round winner: Aishwarya Mallikarjun

ಇದೀಗ ಮೂರನೇ ವರ್ಷದ 'ಬಿಗ್ ಗೋಲ್ಡನ್ ವಾಯ್ಸ್' ಕಾರ್ಯಕ್ರಮ ಜರುಗುತ್ತಿದ್ದು, ಇದು ರೇಡಿಯೋ ಆಧಾರಿತ ಗಾಯನ ಪ್ರತಿಭೆಗಳಿಗೆ ಮಾಡಿದಂತಹ ಕಾರ್ಯಕ್ರಮವಾಗಿದೆ. ಈ ಬಾರಿ ತುಂಬಾ ಸ್ಪರ್ಧಾರ್ಥಿಗಳು ಮಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಟಾಪ್ 5 ಜನರನ್ನು ಆಯ್ಕೆ ಮಾಡಲಾಗಿದೆ.

ಎಲ್ಲಾ 45 ಬಿಗ್.ಎಫ್.ಎಮ್ ಸ್ಟೇಷನ್ ಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, 'ಬಿಗ್ ಗೋಲ್ಡನ್ ವಾಯ್ಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸಿದ ಸ್ಪರ್ಧಾರ್ಥಿಗಳು ತಮ್ಮ ತಮ್ಮ ಹತ್ತಿರದ 92.7 ಬಿಗ್.ಎಫ್.ಎಮ್ ಸ್ಟೇಷನ್ ಗೆ ಸಂಪರ್ಕಿಸಿ, ಆಯ್ಕೆಯಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಿತ್ತು.

Benedryl Big Golden voice regional round winner: Aishwarya Mallikarjun

ಇನ್ನೂ ಈ ಸ್ಪರ್ಧೆಯಲ್ಲಿ ಗೆದ್ದ ಆಭ್ಯರ್ಥಿಗಳು ಫೈನಲ್ ಸುತ್ತಿನ ಪ್ರವೇಶ ಪಡೆಯುತ್ತಿದ್ದು, ಆ ಸುತ್ತಿನಲ್ಲೂ ಗೆದ್ದರೆ, ಖ್ಯಾತ ಸಂಗೀತ ಮಾಂತ್ರಿಕ ಶಂಕರ್ ಮಹಾದೇವನ್ ಅವರ ಬಾಲಿವುಡ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲು ಅರ್ಹರಾಗಿರುತ್ತಾರೆ.

ಈಗಾಗಲೇ ಸ್ಪರ್ಧೆಯ ವಿನ್ನರ್ ಆಗಿರುವ ಐಶ್ವರ್ಯ ಮಲ್ಲಿಕಾರ್ಜುನ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ.

English summary
South Canaras most heard FM station 92.7 BIG FM , organised the finals of 'Benedryl BIG Golden voice Mangalore regional round on Saturday, August 1st Roshani Nilayala, college, Mangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada