'ಕಡಲ ತೀರದ ಭಾರ್ಗವ'ನಿಗಾಗಿ 'ಮಧುರ ಮಧುರ' ಎಂದ ಬಿಗ್‌ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್!

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡಿದ ಬಳಿಕ ಕಂಟೆಂಟ್ ಸಿನಿಮಾಗಳು ಹೆಚ್ಚಾಗುತ್ತಿವೆ. ಟೈಟಲ್‌ನಿಂದಲೇ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಕನ್ನಡ ಸಿನಿಮಾ ಮಂದಿ ಮುಂದಾಗಿದ್ದಾರೆ.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ ನಿರ್ಮಾಣ ಆಗಿದೆ. ಸದ್ಯ ಶೂಟಿಂಗ್ ಕೂಡ ಮುಗಿದಿದ್ದು, ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದೆ. ಅಂದ್ಹಾಗೆ ಆ ಸಿನಿಮಾ ಯಾವುದು ಅಂತಿರಾ? ಅದುವೇ 'ಕಡಲ ತೀರದ ಭಾರ್ಗವ'.

'ಕಡಲ ತೀರದ ಭಾರ್ಗವ' ಸಿನಿಮಾದ ಕಥೆ ವಿಭಿನ್ನವಾಗಿದೆ. ಹೀಗಾಗಿ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದಕ್ಕೆ ಚಿತ್ರತಂಡ ಕೂಡ ವಿಭಿನ್ನ ಪ್ಲ್ಯಾನ್ ಮಾಡಿಕೊಂಡು ರೆಡಿಯಾಗುತ್ತಿದೆ. ಇದರ ಪ್ರಯತ್ನವೇ ಸುಮಧುರವಾದ ಹಾಡೊಂದನ್ನು ರಿಲೀಸ್ ಮಾಡಿದೆ. ಅದುವೇ "ಮಧುರ.. ಮಧುರ.."

Bigg Boss Shruti Prakash Appeared in Madhura Madhura Song

ಮಾಜಿ ಬಿಗ್ ಬಾಸ್ ಸ್ಪರ್ಧಿ, ಗಾಯಕಿ, ನಟಿ ಶ್ರುತಿ ಪ್ರಕಾಶ್ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಹೀರೊ ಆಗಿ ಭರತ್ ಗೌಡ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಸಾಂಗ್ "ಮಧುರ.. ಮಧುರ..". ಆರ್ಯನ್ ರೋಷನ್ ಕೊರಿಯೋಗ್ರಫಿ ಮಾಡಿರುವ ಈ ಹಾಡು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Bigg Boss Shruti Prakash Appeared in Madhura Madhura Song

ಅನಿಲ್ ಸಿ ಜೆ ಟ್ಯೂನ್ ಹಾಕಿದ್ದು, ಪನ್ನಗ ಸೋಮಶೇಖರ್ ನಿರ್ದೇಶನ ಮಾಡಿದ್ದಾರೆ. ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಹಾಡು ವೈರಲ್ ಆಗಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಇನ್ನೊಂದು ಹಾಡಿ ರಿಲೀಸ್ ಆಗಲಿದ್ದು,ಬಳಿಕ ಟ್ರೈಲರ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

More from Filmibeat

English summary
Bigg Boss Shruti Prakash Appeared in Madhura Madhura Song From Kadala Theerada Bhargava, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X