ಅಪ್ಪು ಅಭಿಮಾನಿಗಳ ಆಸೆಯನ್ನ ಕೊನೆಗೂ ಈಡೇರಿಸಿದ 'ರಾಜಕುಮಾರ' ತಂಡ
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಶತದಿನ ಸಂಭ್ರಮಕ್ಕೆ ಚಿತ್ರತಂಡ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಸಂತಸದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳ ಬಹುದಿನದ ಆಸೆಯೊಂದನ್ನ ಚಿತ್ರತಂಡ ಈಡೇರಿಸಿದೆ.
ಹೌದು, 'ರಾಜಕುಮಾರ' ಚಿತ್ರದ ಎಲ್ಲಾ ಹಾಡುಗಳ ವಿಡಿಯೋ ಬಿಡುಗಡೆಯಾಗಿತ್ತು. ಆದ್ರೆ, ಚಿತ್ರದಲ್ಲಿ ಸೂಪರ್ ಹಿಟ್ ಆದ 'ಬೊಂಬೆ ಹೇಳುತೈತೆ' ಹಾಡಿನ ವಿಡಿಯೋ ಮಾತ್ರ ರಿಲೀಸ್ ಮಾಡಿರಲಿಲ್ಲ. ಈಗ 'ಬೊಂಬೆ ಹೇಳುತೈತೆ' ಹಾಡಿನ HD ವಿಡಿಯೋ ಬಿಡುಗಡೆ ಮಾಡಿದ್ದು, ಪವರ್ ಸ್ಟಾರ್ ಫ್ಯಾನ್ಸ್ ಗೆ ಸಖತ್ ಖುಷಿ ಕೊಟ್ಟಿದೆ.

'ಬೊಂಬೆ ಹೇಳುತೈತೆ' ವಿಡಿಯೋ ಹಾಡು ಬಿಡುಗಡೆಯಾಗುತ್ತಿದ್ದಂತೆ ಯ್ಯೂಟ್ಯೂಬ್ ನಲ್ಲಿ ವೀಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ರಿಲೀಸ್ ಆದ 3 ಗಂಟೆಯಲ್ಲಿ ಸುಮಾರು 33 ಸಾವಿರಕ್ಕೂ ಹೆಚ್ಚು ಜನ ಈ ಹಾಡನ್ನ ನೋಡಿದ್ದಾರೆ. ಇನ್ನು ಮೂರು ತಿಂಗಳ ಹಿಂದೆ 'ಬೊಂಬೆ ಹೇಳುತೈತೆ' ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿತ್ತು. ಈ ಹಾಡನ್ನ ಯ್ಯೂಟ್ಯೂಬ್ ನಲ್ಲಿ ಇದುವರೆಗೂ ಸುಮಾರು 2.38 ಕೋಟಿ ಜನ ನೋಡಿದ್ದಾರೆ.
'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ವತಃ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಗಾಯಕ ವಿಜಯ ಪ್ರಕಾಶ್ ಅವರ ಸುಮಧುರ ಕಂಠದಲ್ಲಿ ಈ ಅದ್ಭುತ ಹಾಡು ಮೂಡಿಬಂದಿದೆ. ಉಳಿದಂತೆ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್, ಪ್ರಿಯಾ ಆನಂದ್, ಶರತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಅಭಿನಯಿಸಿದ್ದರು.
'ಬೊಂಬೆ ಹೇಳುತೈತೆ' ವಿಡಿಯೋ ಹಾಡು ಮುಂದಿದೆ ನೋಡಿ


Click it and Unblock the Notifications











