»   » 'ಚೌಕ'ದಲ್ಲಿ ಕಾಶೀನಾಥ್ ಕುಣಿತ ನೋಡಿ ಒಂದು ಕೋಟಿ ಜನ ಫಿದಾ!

'ಚೌಕ'ದಲ್ಲಿ ಕಾಶೀನಾಥ್ ಕುಣಿತ ನೋಡಿ ಒಂದು ಕೋಟಿ ಜನ ಫಿದಾ!

Posted By:
Subscribe to Filmibeat Kannada

ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನಿಮಾ 'ಚೌಕ' ನೂರು ದಿನ ಪೂರೈಸಿ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರದ ಹಾಡೊಂದು ಈಗ ಮತ್ತೊಂದು ದಾಖಲೆ ಮಾಡಿದೆ. ಚಿತ್ರದಲ್ಲಿ ಕಾಶೀನಾಥ್ ಅವರ 'ಅಲ್ಲಾಡ್ಸು... ಅಲ್ಲಾಡ್ಸು...' ಹಾಡು ಈಗ ಒಂದು ಕೋಟಿಗೂ ಹೆಚ್ಚು ಹಿಟ್ಸ್ ಪಡೆದಿದೆ.

ಯೂ ಟ್ಯೂಬ್ ನಲ್ಲಿ ಈ ಹಾಡನ್ನು ಒಂದು ಕೋಟಿಗೂ ಹೆಚ್ಚು ಜನ ನೋಡಿದ್ದಾರೆ. ಈ ವರ್ಷದ ಟಾಪ್ ಹಾಡುಗಳ ಪೈಕಿ ಈ ಹಾಡು ಕೂಡ ಒಂದಾಗಿದೆ. ಅಂದಹಾಗೆ, ಈ ಹಾಡಿಗೆ ಹರಿಕೃಷ್ಣ ಸಂಗೀತ ನೀಡಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.

'Chowka' Movie Song gets 1 Crore Views On Youtube.

'ಚೌಕ' ಸಿನಿಮಾದ ಎಲ್ಲ ಹಾಡುಗಳು ಪ್ರೇಕ್ಷಕರಿಗೆ ತುಂಬ ಇಷ್ಟ ಆಗಿತ್ತು. ಆದರೆ ಈ ಹಾಡು ಮಾತ್ರ ಸಖತ್ ಸ್ಪೆಷಲ್ ಆಗಿ ಉಳಿದುಕೊಂಡಿದೆ. ಅಂದಹಾಗೆ, ಈ ಹಾಡಿನಲ್ಲಿ ನಟ ಕಾಶೀನಾಥ್, ದಿಗಂತ್, ಪ್ರಜ್ವಲ್ ದೇವರಾಜ್, ಪ್ರೇಮ್, ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. 'ಚೌಕ' ಚಿತ್ರದ ಹಾಡನ್ನು ನೋಡಲು ಈ ಲಿಂಕ್ ಕ್ಲಿಕ್ಕಿಸಿ.

English summary
Watch Video: 'Chowka' Kannada Movie Song gets 1 Crore Views On Youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada