For Quick Alerts
  ALLOW NOTIFICATIONS  
  For Daily Alerts

  ಹಿಂದಿ ಹಾಡು ಯಾಕೆ? ಕನ್ನಡ ಹಾಡು ಹಾಡ್ತೀನಿ: ಅನಿಲ್ ಕುಂಬ್ಳೆ ಹೊಸ ಅವತಾರ

  |

  ಕ್ರಿಕೆಟಿಗ ಅನಿಲ್ ಕುಂಬ್ಳೆ ಒಳ್ಳೆಯ ಹಾಡುಗಾರರು. ಅನಿಲ್ ಕುಂಬ್ಳೆ ಕನ್ನಡ ಹಾಡುಗಳನ್ನು ಹಾಡುತ್ತಿದ್ದ ಕೆಲವು ವಿಡಿಯೋಗಳು ಹಿಂದೆ ವೈರಲ್ ಆಗಿದ್ದವು.

  ಈಗಲೂ ಒಂದು 'ವಿಡಿಯೋ' ವೈರಲ್ ಆಗಿದೆ. ಅದರಲ್ಲಿ ಅನಿಲ್ ಕುಂಬ್ಳೆ, 'ಹಿಂದಿ ಹಾಡು ಯಾಕೆ ಹಾಡಬೇಕು, ಕನ್ನಡ ಹಾಡು ಹಾಡ್ತೀನಿ' ಎಂದು 'ಸಂತೋಶಕೆ ಹಾಡು ಸಂತೋಶಕೆ' ಎಂದು ಹಾಡಿದ್ದಾರೆ!

  ಆಗಿರುವುದೇನೆಂದರೆ, ಅನಿಲ್ ಕುಂಬ್ಳೆ, ಕ್ರೆಡ್ ಅಪ್ಲಿಕೇಶನ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಆ ಜಾಹೀರಾತಿನಲ್ಲಿ ಅವರು ಹಿಂದಿ ಹಾಡಿನ ಬದಲಿಗೆ ಕನ್ನಡ ಹಾಡು ಹಾಡಿದ್ದಾರೆ.

  ಕ್ರೆಡ್‌ನವರು ಬಹಳ ಭಿನ್ನವಾದ ಜಾಹೀರಾತು ಮಾಡುವುದರಲ್ಲಿ ನಿಸ್ಸೀಮರು, ಈ ಹಿಂದೆ ರಾಹುಲ್ ದ್ರಾವಿಡ್‌ ಸಿಟ್ಟು ಬಂದಾಗ ಹೇಗೆ ವರ್ತಿಸುತ್ತಾರೆ ಎಂಬ ಜಾಹೀರಾತು ಭಾರಿ ವೈರಲ್ ಆಗಿತ್ತು. ಬಳಿಕ ಕಪಿಲ್ ದೇವ್ ಒಂದೊಮ್ಮೆ ರಣ್ವೀರ್ ಸಿಂಗ್‌ ರಂತಾದರೆ ಹೇಗೆ ಎಂದು ಜಾಹೀರಾತು ಮಾಡಿದ್ದರು. ವೆಂಕಟೇಶ್ ಪ್ರಸಾದ್ ಹಾಗೂ ಜಾವಗಲ್ ಶ್ರೀನಾಥ್ ಬಗ್ಗೆಯೂ ಜಾಹೀರಾತು ಮಾಡಿದ್ದರು.

  ಅನಿಲ್‌ ಕುಂಬ್ಳೆ ನಟಿಸಿರುವ ಜಾಹೀರಾತು ಹೀಗಿದೆ. ಕ್ರೆಡ್ ನವರು ಭಿನ್ನವಾಗಿ ಜಾಹೀರಾತು ಮಾಡುತ್ತಾರೆಂದು ಅನಿಲ್ ಕುಂಬ್ಳೆ ತಯಾರಾಗಿ ಬಂದಿರುತ್ತಾರೆ. ತಮಗೆ ಹಳೆಯ ಹಿಂದಿ ಸಿನಿಮಾಗಳ ಹೀರೋ ಮಾದರಿ ಉಡುಪು ತೊಡಿಸಿ ಹಿಂದಿ ಹಾಡು ಹಾಡಿಸುತ್ತಾರೆ ಎಂದುಕೊಂಡಿರುತ್ತಾರೆ. ಅದರ ಬದಲಿಗೆ ತಾವು ಕನ್ನಡ ಹಾಡು ಹಾಡುವುದಾಗಿ ಹೇಳಿ 'ಸಂತೋಶಕ್ಕೆ ಹಾಡು ಸಂತೋಶಕ್ಕೆ' ಹಾಡು ಹಾಡುತ್ತಾರೆ. ಆದರೆ ಕ್ರೆಡ್‌ನವರು ಅವರಿಗೆ ಕೇವಲ ಕ್ರೆಡ್‌ ಆಪ್ ಬಳಸಿ ಬಿಲ್ ಕಟ್ಟಿ ಎಂದಷ್ಟೆ ಹೇಳಲು ಹೇಳುತ್ತಾರೆ. ಹಾಗಾಗಿ ಅನಿಲ್ ಕುಂಬ್ಳೆ ನಿರಾಶರಾಗಿ ಕ್ರೆಡ್‌ನಿಂದ ಬಿಲ್ ಕಟ್ಟಿ ಎಂದು ಹೇಳಿ ಹೊರಟುಬಿಡುತ್ತಾರೆ. ಹೋಗುವಾಗ 'ಎಲ್ಲ ಫನ್ ರಾಹುಲ್ ದ್ರಾವಿಡ್ ಮಾತ್ರವೇನಾ?' ಎಂದು ಕೋಪ ಮಾಡಿಕೊಂಡು ಹೋಗುತ್ತಾರೆ.

  ಅನಿಲ್ ಕುಂಬ್ಳೆಯ ಈ ಜಾಹೀರಾತಿನಲ್ಲಿ ಇನ್ನೂ ಹಲವು ಕ್ರೀಡಾಪಟುಗಳಿದ್ದಾರೆ. ಎಲ್ಲರೂ ಕ್ರೆಡ್ ಜಾಹೀರಾತಿಗಾಗಿ ಭಿನ್ನವಾಗಿ ರೆಡಿಯಾಗಿ ಬಂದಿರುತ್ತಾರೆ. ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಅವರಂತೂ ಬಣ್ಣ-ಬಣ್ಣದ ಜಾಕೆಟ್ ಹಾಕಿಕೊಂಡು ತಯಾರಾಗಿ ಬಂದಿರುತ್ತಾರೆ. ನಾನು ಡ್ಯಾನ್ಸ್ ಮಾಡಲಾ ಎಂದು ಹೇಳಿ ಒಂದು ಸ್ಟೆಪ್ ಸಹ ಹಾಕಿ ತೋರಿಸುತ್ತಾರೆ ಆದರೆ ಕ್ರೆಡ್‌ನವರು ಬೇಡ ಕ್ರೆಡ್‌ನಿಂದ ಬಿಲ್ ಕಟ್ಟಬಹುದು ಎಂದು ಹೇಳಿ ಸಾಕು ಎನ್ನುತ್ತಾರೆ. ಅವರೂ ಸಹ ಅಷ್ಟು ಮಾತ್ರವೇ ಹೇಳಿ ಬೇಸರದಿಂದ ಹೋಗುತ್ತಾರೆ.

  ಇನ್ನು ಬಾಕ್ಸರ್ ಮೇರಿ ಕೋಮ್, ಸಹ ತಯಾರಾಗಿ ಬಂದಿರುತ್ತಾರೆ, ನನ್ನಿಂದ ನಟನೆ ಮಾಡಿಸಿ ನನಗೆ ನಟನೆ ಬರುತ್ತದೆ. ನಾನು ಬೇಕಾದರೆ ಪ್ರಿಯಾಂಕಾ ಚೋಪ್ರಾರ ಜೀವನದ ಬಗ್ಗೆ ಸಿನಿಮಾ ಮಾಡ್ತೀನಿ, ನಾನು ಪ್ರಿಯಾಂಕಾ ಚೋಪ್ರಾ ಪಾತ್ರ ಮಾಡ್ತೀನಿ ಎನ್ನುತ್ತಾರೆ. ಅಳುವಂತೆ ನಟಿಸಿಯೂ ತೋರಿಸುತ್ತಾರೆ. ಬೈಚುಂಗ್ ಬುಟಿಯಾ ಸಹ ಜಾಹೀರಾತಿನಲ್ಲಿದ್ದಾರೆ.

  ಕ್ರೆಡ್ ಸದಾ ಇಂಥಹಾ ತಮಾಷೆಯ ಜಾಹೀರಾತುಗಳಿಂದ ಗಮನ ಸೆಳೆಯುತ್ತದೆ. ಅದರಲ್ಲಿಯೂ ಕ್ರೀಡಾಪಟುಗಳನ್ನಷ್ಟೆ ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಈ ಜಾಹೀರಾತು ಸಹ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಕತ್ ವೈರಲ್ ಆಗುತ್ತಿದೆ.

  English summary
  Cricketer Anil Kumble sang Kannada song in CRED application advertisement. He sang Shankar Nag's famous Santhoshake Haadu Santhoshake.
  Friday, December 23, 2022, 22:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X