For Quick Alerts
  ALLOW NOTIFICATIONS  
  For Daily Alerts

  'ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ' ಅಂತಿದ್ದಾರೆ 'ರಾಬರ್ಟ್' ನಾಯಕಿ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸುಮಾರು ಒಂದು ವರ್ಷದಿಂದ ಅಭಿಮಾನಿಗಳು ಈ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಭಾರಿ ನಿರೀಕ್ಷೆಯ ರಾಬರ್ಟ್ ಸಿನಿಮಾ ಶಿವರಾತ್ರಿಯ ದಿನ ತೆರೆಗೆ ಬರುತ್ತಿದೆ.

  ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ರಾಬರ್ಟ್ ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್ ಆಗಿದೆ. ಚಿತ್ರದ ರೊಮ್ಯಾಂಟಿಕ್ ಹಾಡು ಇದಾಗಿದ್ದು, ದರ್ಶನ್ ಮತ್ತು ನಾಯಕಿ ಆಶಾ ಭಟ್ ಸಖತ್ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ರಾಬರ್ಟ್ ಸಿನಿಮಾದ ಉಳಿದೆಲ್ಲ ಹಾಡುಗಳಿಂದ ಈ ಹಾಡು ವಿಭಿನ್ನವಾಗಿದೆ.

  ಡಿ-ಬಾಸ್ ದರ್ಶನ್ ಬರ್ತಡೇ ಪಾರ್ಟಿಯಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಇದ್ದರು?

  'ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ..' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಕೇಳೋಕೆ ಇಂಪಾಗಿದೆ. ಈ ಹಾಡಿಗೆ ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಧ್ವನಿ ನೀಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಭೂಷನ್ ಕೊರಿಯೋಗ್ರಫಿ ಮಾಡಿರುವ ಈ ಹಾಡಿನ ಮೇಕಿಂಗ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷ ಎಂದರೆ ಈ ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗಿದೆ. ತೆಲುಗಿನಲ್ಲಿ ಕಸರ್ಲಾ ಶ್ಯಾಮ್ ಸಾಹಿತ್ಯ ರಚಿಸಿದ್ದು, ಮಾಂಗ್ಲೀ ಧ್ವನಿ ನೀಡಿದ್ದಾರೆ.

  ಮಾರ್ಚ್ 11ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಕನ್ನಡದ ಜೊತೆಗೆ ತೆಲುಗಿನಲ್ಲೂ ದೊಡ್ಡ ಮಟ್ಟಕ್ಕೆ ತೆರೆಗೆ ಬರುತ್ತಿರುತ್ತಿದೆ. ರಾಬರ್ಟ್ ಸಿನಿಮಾವನ್ನು ತೆಲುಗು ಅಭಿಮಾನಿಗಳು ಹೇಗೆ ಸ್ವಾಗತ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

  English summary
  Darshan starrer Roberrt movie romantic song released. Roberrt set to release on March 11th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X