»   » ಬಿಗ್ ಎಫ್ಎಂ ವಿಜೇತೆಯಾಗಿ ಹೊರಹೊಮ್ಮಿದ ದೇವಿಕಾ

ಬಿಗ್ ಎಫ್ಎಂ ವಿಜೇತೆಯಾಗಿ ಹೊರಹೊಮ್ಮಿದ ದೇವಿಕಾ

Posted By:
Subscribe to Filmibeat Kannada

ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಷನ್ ಬಿಗ್ ಎಫ್ಎಂ 92.7 ಆಯೋಜಿಸಿದ್ದ ಬಿಗ್ ಗೋಲ್ಡನ್ ವಾಯ್ಸ್ ಜ್ಯೂನಿಯರ್ ಸ್ಪರ್ಧೆಯಲ್ಲಿ ದೇವಿಕಾ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.

ಹದಿನಾರು ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 35 ಮಕ್ಕಳು ಭಾಗವಹಿಸಿದ್ದರು. ನಗರದ ಅದ್ವೈತ್ ಹುಂಡೈ ಶೋರೂಂನಲ್ಲಿ ಶನಿವಾರ (ಜೂ 3) ನಡೆದ ಫೈನಲ್ ನಲ್ಲಿ ದೇವಿಕಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Devika emerged as the winner of BIG Golden voice junior

ಒಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 35 ಮಕ್ಕಳಲ್ಲಿ 12 ಮಕ್ಕಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ನಟಿ ಮತ್ತು ಗಾಯಕಿ ಎಸ್ತರ್ ನರೋನ್ಹಾ, ಆರ್ಕೆಸ್ಟ್ರಾ ಗಾಯಕ ಜೋಸ್ತಾನಾ ಮತ್ತು ಸಂಗೀತಗಾರ ಮೆಲ್ರೋಯ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.

ಈ ಸ್ಪರ್ಧೆಯ ತೀರ್ಪುಗಾರನಾಗಿರುವುದಕ್ಕೆ ಸಂತೋಷವಾಗುತ್ತಿದೆ, ಮಕ್ಕಳ ಪ್ರತಿಭೆಯನ್ನು ನೋಡಿ ಖುಷಿಯಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಆಲ್ ದಿ ಬೆಸ್ಟ್ ಎಂದು ಎಸ್ತರ್ ನರೋನ್ಹಾ ಹೇಳಿದ್ದಾರೆ.

ಬಿಗ್ ಎಫ್ಎಂ ಮತ್ತು ಅದ್ವೈತ್ ಜಂಟಿಯಾಗಿ ಬಹಳಷ್ಟು ಕಾರ್ಯಕ್ರಮವನ್ನು ಹಿಂದೆಯೂ ಆಯೋಜಿಸಿದೆ. ಸಮಾಜಕ್ಕಾಗಿ ಇಂತಹ ಕೆಲಸಗಳನ್ನು ಮುಂದುವರಿಸಲಿದ್ದೇವೆ. ಮಕ್ಕಳ ಪ್ರತಿಭೆ ನೋಡಿ ಉಲ್ಲಸಿತನಾಗಿದ್ದೇನೆಂದು ಅದ್ವೈತ್ ಹುಂಡೈ ಸಂಸ್ಥೆಯ ರಾಜೇಶ್ ಉಲ್ಲಾಳ್ ಹೇಳಿದ್ದಾರೆ.

English summary
Devika emerged as the winner of BIG FM 92.7 Mangaluru Golden voice junior.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada