For Quick Alerts
  ALLOW NOTIFICATIONS  
  For Daily Alerts

  'ಬಾನ ದಾರಿಯಲ್ಲಿ' ಗಣೇಶ್ ಪ್ರೇಮಗೀತೆ ಧ್ವನಿಯಾದ ಸೋನು ನಿಗಂ

  |

  ಬಹಳ ದಿನಗಳ ಬಳಿಕ ಪ್ರೀತಂ ಗುಬ್ಬಿ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ ಆಕ್ಷನ್ ಕಟ್ ಹೇಳುವ ಮೂಲಕ ಮತ್ತೊಂದು ರೊಮ್ಯಾಂಟಿಕ್ ಸಿನಿಮಾವನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ ಮೇಲಿರುನ ನಿರೀಕ್ಷೆನೇ ಇದು. ಇಬ್ಬರು ಜೊತೆಯಾಗಿದ್ದಾರೆ ಅಂದ್ರೆ, ಸಿನಿಮಾ ಹಿಟ್ ಲಿಸ್ಟ್ ಸೇರಿದ ಹಾಗೆನೇ.

  ಸದ್ಯ ಈ ಜೋಡಿ 'ಬಾನದಾರಿಯಲ್ಲಿ' ಸಿನಿಮಾಗೆ ಕೈ ಹಾಕಿದ್ದು ಗೊತ್ತೇ ಇದೆ. ಸದ್ಯ ಇದೇ ಸಿನಿಮಾದ ಒಂದು ಹಾಡನ್ನು ರಿಲೀಸ್ ಮಾಡಲಾಗಿದೆ. ಇದೇ ಸಿನಿಮಾಗಾಗಿ ಕವಿರಾಜ್ ಬರೆದಿರುವ "ನಿನ್ನನ್ನು ನೋಡಿದ ನಂತರ..." ಎಂಬ ಗೀತೆ ಆನಂದ್ ಆಡಿಯೋದಲ್ಲಿ ತೆರೆಕಂಡಿದೆ.

  'ಬಾನದಾರಿಯಲ್ಲಿ' ಸಿನಿಮದ ಕಥೆಯನ್ನು ಕೊರೊನಾ ಸಮಯದಲ್ಲಿ ಹೆಣೆಯಲಾಗಿದೆ. ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರೀತಂ ಗುಬ್ಬಿ ಹಾಗೂ ಪ್ರೀತಾ ಜಯರಾಂ ಸೇರಿ ಕಥೆ ರೆಡಿ ಮಾಡಿದ್ದರು. ಸದ್ಯಕ್ಕೀಗ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ.

  'ಬಾನದಾರಿಯಲ್ಲಿ' ಸಿನಿಮಾದ ಹಾಡುಗಳನ್ನು ಅತೀ ಹೆಚ್ಚು ಮೊತ್ತ ಕೊಟ್ಟು ಖರೀದಿ ಮಾಡಿದ್ಯಂತೆ ಆನಂದ್ ಆಡಿಯೋ. ಇದು ಗಣೇಶ್ ಕರಿಯನಲ್ಲೇ ಅತೀ ದೊಡ್ಡ ಮೊತ್ತಕ್ಕೆ ಸೇಲ್ ಆದ ಸಿನಿಮಾ ಎನ್ನಲಾಗಿದೆ. "ನನ್ನ ಸಿನಿ ಜರ್ನಿಯಲ್ಲೇ ಅತೀ ಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ. ಇನ್ನು ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. 'ಹುಡುಗಾಟ' ಚಿತ್ರದ "ಮಂದಾಕಿನಿ ಯೇ..." ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಹೈಲೆಟ್" ಎನ್ನುತ್ತಾರೆ ಗೋಲ್ಡನ್ ಸ್ಟಾರ್ ಗಣೇಶ್.

  "ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ. ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೀತಾ ಜಯರಾಮ್ - ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಅದ್ಭುತ" ಎನ್ನುತ್ತಾರೆ ಗಣೇಶ್.

  Ganesh And Rukmini Vasanth Starrer Baanadariyalli Movie Song Released

  ಅಂದ್ಹಾಗೆ, ಈ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗೇ ನಾಯಕಿಯರಾಗಿ ರುಕ್ಷ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ರುಕ್ಷ್ಮಿಣಿ ವಸಂತ್ ಸರ್ಫಿಂಗ್ ಮಾಡುವ ದೃಶ್ಯಗಳು ಮೊದಲ ಹಾಡಿನಲ್ಲಿ ತೋರಿಸಲಾಗಿದೆ.

  'ಬಾನದಾರಿಯಲ್ಲಿ' ಸಿನಿಮಾದ ಮೊದಲ ಹಾಡನ್ನು ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿರೆಕಾರ್ಡಿಂಗ್ ಮಾಡಲಾಗಿದೆ. ಖ್ಯಾತ ಗಾಯಕ ಸೋನು ನಿಗಮ್ ಧ್ವನಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಅರ್ಜುನ್ ಜನ್ಯ ಸಂಗೀತ ಈ ಸಿನಿಮಾ ಹೈಲೈಟ್.

  English summary
  Ganesh And Rukmini Vasanth Starrer Baanadariyalli Movie Song Released, Know More.
  Thursday, January 5, 2023, 22:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X